ಎಂಟಿಆರ್‌ನಿಂದ ಪ್ಯಾಕೇಜ್ಡ್ ಗೊಜ್ಜು ಮಸಾಲ ಮಾರುಕಟ್ಟೆಗೆ
ದೇಶೀಯ ಆಹಾರೋತ್ಪನ್ನ ಹಾಗೂ ತಿನಿಸುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಂಟಿಆರ್ ಫುಡ್ಸ್ ಪ್ರೈವೆಟ್ ಲಿಮಿಟೆಡ್ ಇದೀಗ ಪ್ಯಾಕೇಜ್ಡ್ ಗೊಜ್ಜು ಮಸಾಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಬೆಂಗಳೂರು(ಫೆ.01): ದೇಶೀಯ ಆಹಾರೋತ್ಪನ್ನ ಹಾಗೂ ತಿನಿಸುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಂಟಿಆರ್ ಫುಡ್ಸ್ ಪ್ರೈವೆಟ್ ಲಿಮಿಟೆಡ್ ಇದೀಗ ಪ್ಯಾಕೇಜ್ಡ್ ಗೊಜ್ಜು ಮಸಾಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ವೈವಿಧ್ಯಮಯ ಮಸಾಲೆಯ ಸಂಯೋಜನೆಯಾಗಿರುವ ಈ ಗೊಜ್ಜು ಮಸಾಲ ಕನ್ನಡಿಗರ ಭೋಜನದಲ್ಲಿ ದೊಡ್ಡ ಪಾಲು ಪಡೆಯಲಿದೆ. ಗೊಜ್ಜನ್ನು ಸಾಮಾನ್ಯವಾಗಿ ಸಸ್ಸಿಮೆ, ಕೈ ರಸ, ಮೆಣಸಿನಕಾಯಿ, ಹುಳಿ ಮೆಣಸು ಎಂದು ಗುರುತಿಸಲಾಗುತ್ತದೆ.
ಶಾಸಕ ಹ್ಯಾರಿಸ್ ಪುತ್ರನ ಹುಟ್ಟುಹಬ್ಬಕ್ಕೆ ನಿಯಮ ಉಲ್ಲಂಘಿಸಿ ಫ್ಲೆಕ್ಸ್!
ಈ ಪ್ಯಾಕೇಜ್ಡ್ ಗೊಜ್ಜು ಮಸಾಲ ಹಲವು ಮಸಾಲೆಗಳ ಸಂಯೋಜನೆಯಾಗಿದ್ದು, ಹಲವು ತಿನಿಸುಗಳ ಜತೆ ಬಳಸಬಹುದು. ಅಂದರೆ ‘ಒಂದು ಮಸಾಲ, ಹಲವು ಗೊಜ್ಜುಗಳು’ ಎಂಬಂತೆ ಉದ್ದಿನ ಬೇಳೆ, ಎಳ್ಳು, ದನಿಯಾಗಳ ಪರಿಪೂರ್ಣ ಸಂಯೋಜನೆಯೊಂದಿಗೆ ಸಿದ್ಧಪಡಿಸಲಾಗಿದೆ. ವ್ಯಾಪಾರ ಮಳಿಗೆಗಳಲ್ಲಿ ಈ ಗೊಜ್ಜು ಮಸಾಲ ಲಭ್ಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.