
ವಿಚಿತ್ರವಾದ ಘಟನೆಯಲ್ಲಿ ಚೀನಾದ ತಾಯಿಯೊಬ್ಬಳು ತನ್ನ ಮಗ ಮದುವೆಯಾಗಬೇಕಿದ್ದ ವಧು ಕಳೆದುಹೋದ ತನ್ನದೇ ಮಗಳು ಎಂದು ಕಂಡುಹಿಡಿದಿದ್ದಾರೆ. ಮಾರ್ಚ್ 31 ರಂದು ಚೀನಾದ ಜಿಯಾಂಗ್ಸು ಪ್ರಾಂತ್ಯದ ಸುಝೋನಲ್ಲಿ ನಡೆದ ತನ್ನ ಮಗನ ವಿವಾಹದಲ್ಲಿ ತಾಯಿ ಭಾವುಕರಾದ ಘಟನೆ ನಡೆಯಿತು . ವಧುವಿನ ಕೈಯಲ್ಲಿ ಜನ್ಮ ಗುರುತು ನೋಡಿದ ನಂತರ, ತಾಯಿ ಆಘಾತಕ್ಕೊಳಗಾದರು ಮತ್ತು ಮಗಳಲ್ಲಿ ಇದೇ ರೀತಿ ಇದ್ದುದನ್ನು ನೆನಪಿಸಿಕೊಂಡಿದ್ದಾರೆ.
ತಾಯಿ ಕೂಡಲೇ ವಧುವಿನ ಕುಟುಂಬವನ್ನು ಸಂಪರ್ಕಿಸಿ ಅವರನ್ನು ಆಕೆಯನ್ನು ದತ್ತು ಪಡೆದಿದ್ದೀರಾ ಎಂದು ಕೇಳಿದ್ದಾರೆ. ಈ ಎಲ್ಲಾ ವರ್ಷಗಳಿಂದ ಅವಳನ್ನು ದತ್ತು ಪಡೆದ ಸುದ್ದಿ ರಹಸ್ಯವಾಗಿಟ್ಟಿದ್ದ ಕುಟುಂಬ ಈ ಪ್ರಶ್ನೆ ಕೇಳಿ ತೀವ್ರ ಆಘಾತಕ್ಕೊಳಗಾಗಿತ್ತು.
SSLCಯಲ್ಲಿ ಶುರುವಾದ ಲವ್: ಪ್ರೇಯಸಿ ವೀಲ್ ಚೇರ್ ಸೇರಿದ್ರೂ ಆಕೆಯನ್ನೇ ವರಿಸಿದ ಪ್ರೇಮಿ
ರಸ್ತೆ ಪಕ್ಕದಲ್ಲಿ ಹೆಣ್ಣು ಮಗುವನ್ನು ಕಂಡುಕೊಂಡಾಗ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಆಕೆಯನ್ನು ದತ್ತು ತೆಗೆದುಕೊಳ್ಳಲಾಗಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ. ತನ್ನ ನಿಜವಾದ ಪೊಷಕರ ಬಗ್ಗೆ ತಿಳಿದುಕೊಂಡಾಗ ವಧು ಕಣ್ಣೀರು ಸುರಿಸಿದ್ದಾಳೆ. ತನ್ನ ನಿಜವಾದ ತಾಯಿಯನ್ನು ಭೇಟಿಯಾದದ್ದು ಮದುವೆಯ ದಿನಕ್ಕಿಂತ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ವಧು ತನ್ನ ಅಣ್ಣನನ್ನೇ ಮದುವೆಯಾಗಲಿದ್ದಾರೆ ಎಂದು ಗೊಂದಲಕ್ಕೊಳಗಾದಾಗ ನಿಜವಾದ ಸಂದಿಗ್ಧತೆ ಹೆಚ್ಚಾಗಿತ್ತು! ತನ್ನ ಮಗನನ್ನು ದತ್ತುಪಡೆಯಲಾಗಿದೆ, ತನ್ನ ಸ್ವಂತ ಮಗನಲ್ಲ ಎಂದು ಮದುವೆಗೆ ಒಪ್ಪಿಗೆ ನೀಡಿದ್ದಾರೆ ತಾಯಿ. ಅಂತೂ ಎಲ್ಲವೂ ಸುಖಾಂತ್ಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ