ಓದ್ಲಿ ಅಂತ ಮಕ್ಕಳ ಐಪ್ಯಾಡ್ ತೆಗೆದಿಟ್ಟುಕೊಂಡಿದ್ದ ಅಮ್ಮ ಅರೆಸ್ಟ್ !

Published : Apr 14, 2025, 11:08 AM ISTUpdated : Apr 14, 2025, 11:28 AM IST
 ಓದ್ಲಿ ಅಂತ ಮಕ್ಕಳ ಐಪ್ಯಾಡ್ ತೆಗೆದಿಟ್ಟುಕೊಂಡಿದ್ದ ಅಮ್ಮ ಅರೆಸ್ಟ್ !

ಸಾರಾಂಶ

ಇಂದಿನ ದಿನಗಳಲ್ಲಿ ಮಕ್ಕಳನ್ನು ಮೊಬೈಲ್‌ನಿಂದ ದೂರವಿಡುವುದು ಕಷ್ಟ. ಬ್ರಿಟನ್‌ನಲ್ಲಿ, ಮಕ್ಕಳ ಐಪ್ಯಾಡ್‌ಗಳನ್ನು ತೆಗೆದಿಟ್ಟಿದ್ದಕ್ಕಾಗಿ ವನೆಸ್ಸಾ ಎಂಬ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಕ್ಕಳು ಡಿಜಿಟಲ್ ಸಾಧನಗಳಿಂದ ದೂರವಿರಲಿ ಎಂದು ಆಕೆ ಬಯಸಿದ್ದರು. ಕಳ್ಳತನದ ಆರೋಪದ ಮೇಲೆ ಬಂಧಿಸಿ ವಿಚಾರಣೆ ನಡೆಸಲಾಯಿತು. ನಂತರ, ಪೊಲೀಸರು ತಮ್ಮ ತಪ್ಪನ್ನು ಅರಿತುಕೊಂಡು ಕ್ಷಮೆ ಕೇಳಿ ಪ್ರಕರಣವನ್ನು ಹಿಂಪಡೆದರು.

ಈಗಿನ ಕಾಲದಲ್ಲಿ ಮಕ್ಕಳನ್ನು ಮೊಬೈಲ್ (Mobile) ನಿಂದ ದೂರ ಇಡೋದೇ ದೊಡ್ಡ ಸವಾಲಾಗಿದೆ. ಆಟ – ಓದಿಗಿಂತ ಮಕ್ಕಳು ಹೆಚ್ಚಿನ ಗಂಟೆ ಮೊಬೈಲ್ ನಲ್ಲಿ ಕಳೆಯುತ್ತಾರೆ. ಸೋಶಿಯಲ್ ಮೀಡಿಯಾ, ಗೇಮ್ ನೋಡ್ತಾ ಸಮಯ ಹೋಗಿದ್ದೇ ತಿಳಿಯೋದಿಲ್ಲ. ಮಧ್ಯರಾತ್ರಿಯವರೆಗೆ ಮೊಬೈಲ್ ನಲ್ಲಿರುವ ಮಕ್ಕಳು, ಓದಿನಲ್ಲಿ ಹಿಂದೆ ಬೀಳ್ತಿದ್ದಾರೆ. ಮಕ್ಕಳನ್ನು ಮೊಬೈಲ್ ನಿಂದ ದೂರ ಇಡಲು ಪಾಲಕರು ಸಾಕಷ್ಟು ಕಷ್ಟಪಡ್ತಿದ್ದಾರೆ. ಆದ್ರೆ ಪಾಲಕರು ಮಕ್ಕಳ ಭವಿಷ್ಯಕ್ಕಾಗಿ ಮಾಡುವ ಕೆಲಸ ಅವರನ್ನು ಸಂಕಷ್ಟಕ್ಕೆ ನೂಕುತ್ತಿದೆ.  ಅಮ್ಮ ಮಾಡಿದ ಕೆಲಸವೊಂದು ಈಗ  ಜೈಲು ಸೇರುವಂತೆ ಮಾಡಿದೆ. ಅಮ್ಮ ಕಾನೂನು ಸವಾಲನ್ನು ಎದುರಿಸಬೇಕಾಗಿದೆ. ಬ್ರಿಟನ್ ನಲ್ಲಿ ನಡೆದ ಘಟನೆ ಅಚ್ಚರಿಯನ್ನುಂಟು ಮಾಡಿದೆ.  ಅಮ್ಮ, ಮಕ್ಕಳ ಐಪ್ಯಾಡ್ ತೆಗೆದುಕೊಂಡಿದ್ದು, ಆಕೆಯನ್ನು ಕಳ್ಳಿ ಅಂತ ಭಾವಿಸಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. 

ಯುಕೆ (UK)ಯ ಸರ್ರೆಯಲ್ಲಿ ಈ ಘಟನೆ ನಡೆದಿದೆ. 50 ವರ್ಷದ ವನೆಸ್ಸಾ ಬ್ರೌನ್  ಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆಕೆ ವೃತ್ತಿಯಲ್ಲಿ ಇತಿಹಾಸದ ಟೀಚರ್. ಮಕ್ಕಳು, ಡಿಜಿಟಲ್ ಡಿವೈಸ್ (Digital Device) ನಿಂದ ದೂರವಿರಲಿ ಅಂತ ವನೆಸ್ಸಾ ಬಯಸಿದ್ದಳು. ಆದ್ರೆ ಆಕೆ ಮಾಡಿದ ಕಟ್ಟುನಿಟ್ಟು ಜೈಲು ಸೇರುವಂತೆ ಮಾಡಿದೆ. 

ಸ್ಪೇನ್ ಮೆಟ್ರೋ ನಿಲ್ದಾಣದಲ್ಲಿ ಗಾಯತ್ರಿ ಮಂತ್ರ ಪಠಿಸಿದ ಸ್ಪಾನಿಷ್

ಏನು ಘಟನೆ? : ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿ ವ್ಯಕ್ತಿಯೊಬ್ಬರು ಪೊಲೀಸರಿಗೆ ಕರೆ ಮಾಡಿದ್ದಾರೆ. ಆ ಫೋನ್ ಆಧಾರದ ಮೇಲೆ ಪೊಲೀಸರು ವನೆಸ್ಸಾ ಮನೆಗೆ ಬಂದಿದ್ದಾರೆ. ಅಲ್ಲಿದ್ದ 40 ವರ್ಷದ ವ್ಯಕ್ತಿ, ಮನೆಯಲ್ಲಿದ್ದ ಎರಡು ಐಪ್ಯಾಡ್ ಕಳ್ಳತನವಾಗಿದೆ ಎಂದಿದ್ದಾನೆ. ಆ ನಂತ್ರ ಪೊಲೀಸರು ಐಪ್ಯಾಡ್ ಟ್ರ್ಯಾಕ್ ಮಾಡಿದ್ದಾರೆ.  ಅದು ವನೆಸ್ಸಾ ಬಳಿ ಇರೋದು ಗೊತ್ತಾಗಿದೆ. ವನೆಸ್ಸಾ ಆ ಟೈಂನಲ್ಲಿ ಅಮ್ಮನ ಮನೆಯಲ್ಲಿದ್ದಳು. ಅಲ್ಲಿಗೆ ತೆರಳಿದ ಪೊಲೀಸರು, ಐಪ್ಯಾಡ್ ಬಗ್ಗೆ ವಿಚಾರಿಸಿದ್ದಾರೆ. ಆರಂಭದಲ್ಲಿ ವನೆಸ್ಸಾ ಐಪ್ಯಾಡ್ ಬಗ್ಗೆ ಸುಳಿವು ನೀಡಲಿಲ್ಲ. ಹಾಗಾಗಿ ಆಕೆ ಕಳ್ಳತನ ಮಾಡಿದ್ದಾಳೆ ಅಂತ ವನೆಸ್ಸಾಳನ್ನು ಪೊಲೀಸರು ಬಂಧಿಸಿದ್ದಾರೆ. 

ಈ ಬಗ್ಗೆ ಮಾತನಾಡಿದ ವೆನಿಸ್ಸಾ, ಇದೊಂದು ಶಾಕಿಂಗ್ ಎಂದಿದ್ದಾಳೆ. ಅಮ್ಮನ ಮನೆಗೆ ಕಾಫಿ ಕುಡಿಯಲು ಹೋಗಿದ್ದೆ. ಆದ್ರೆ ಅಷ್ಟರಲ್ಲಿ ಅಲ್ಲಿಗೆ ಬಂದ ಪೊಲೀಸರು, ಐಪ್ಯಾಡ್ ಕಳ್ಳತನ ಮಾಡಿದ್ದೇನೆ ಅಂತ ಬಂಧಿಸಿದ್ದಾರೆ. ನಾನು ಮಕ್ಕಳ ಐಪ್ಯಾಡ್ ಕಳ್ಳತನ ಮಾಡಿರಲಿಲ್ಲ, ಅವರು ಡಿಜಿಟಲ್ ಡಿವೈಸ್ ನಿಂದ ದೂರ ಇರ್ಲಿ ಅಂತ ತೆಗೆದಿಟ್ಟುಕೊಂಡಿದ್ದೆ ಎಂದು ವನೆಸ್ಸಾ ಹೇಳಿದ್ದಾಳೆ. 

ಮನೆಗೆ ತಂದ ಟೊಮ್ಯಾಟೋ ಗರ್ಭಿಣಿ: ವೈರಲ್‌ ವಿಡಿಯೋ ನೋಡಿ ಫ್ರಿಜ್‌ ಬ

ವನೆಸ್ಸಾಳನ್ನು ಪೊಲೀಸರು 7 ಗಂಟೆ ಠಾಣೆಯಲ್ಲಿ ಇಟ್ಟುಕೊಂಡಿದ್ದರು. ಅಷ್ಟೇ ಅಲ್ಲ ಆಕೆಯ 80 ವರ್ಷದ ತಾಯಿಗೂ ಮಾನಸಿಕ ಹಿಂಸೆ ನೀಡಿದ್ದಾರೆ. ಮೂರು ಗಂಟೆಯವರೆಗೆ ವಕೀಲರ ಭೇಟಿಗೂ ಬಿಟ್ಟಿರಲಿಲ್ಲ. ಮೆಡಿಕಲ್ ಪರೀಕ್ಷೆ ಕೂಡ ಮಾಡಿದ್ದಾರೆ. ಕೊನೆಯಲ್ಲಿ ವನೆಸ್ಸಾಗೆ ಜಾಮೀನು ಸಿಕ್ಕಿದೆ.  ಆದ್ರೆ ಕೆಲ ಷರತ್ತಿನ ಮೂಲಕ ಕೋರ್ಟ್ ವನೆಸ್ಸಾಗೆ ಜಾಮೀನು ನೀಡಿತ್ತು. ಯಾವುದೇ ಕಾರಣಕ್ಕೂ ಈ ಕೇಸ್ ಗೆ ಸಂಬಂಧಿಸಿದ ಯಾವುದೇ ವ್ಯಕ್ತಿಗಳನ್ನು ಭೇಟಿಯಾಗ್ಬಾರದು ಎಂದಿತ್ತು. ಮಕ್ಕಳ ಜೊತೆ ಮಾತನಾಡಬಾರದು ಎಂಬ ಷರತ್ತು ವಿಧಿಸಿತ್ತು.

ಆದ್ರೆ ಮರುದಿನ ಪೊಲೀಸರಿಗೆ ತಮ್ಮ ತಪ್ಪಿನ ಅರಿವಾಗಿದೆ. ಮನೆಗೆ ಬಂದ ಪೊಲೀಸರು ವನೆಸ್ಸಾ ಕ್ಷಮೆ ಕೇಳಿದ್ದಾರೆ. ಕೇಸ್ ವಾಪಸ್ ಪಡೆದಿದ್ದಾರೆ. ಸ್ವಲ್ಪ ಸಮಯ ಮನೆಯಿಂದ ನಾಪತ್ತೆಯಾಗಿದ್ದ ಐಪ್ಯಾಡ್ ಹೆಣ್ಣು ಮಕ್ಕಳದ್ದು, ಆ ಫೋನ್ ಮೇಲೆ ವನೆಸ್ಸಾಗೆ ಸಂಪೂರ್ಣ ಹಕ್ಕಿದೆ ಎಂಬುದು ಪೊಲೀಸರಿಗೆ ಅರ್ಥವಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎಸ್‌ಟಿಡಿ ಟೆಸ್ಟ್ ಮಾಡುವಂತೆ ಪದೇ ಪದೇ ಪೀಡಿಸುತ್ತಿದ್ದ ಗರ್ಲ್‌ಫ್ರೆಂಡ್‌ ಕತೆ ಮುಗಿಸಿದ ವಿದ್ಯಾರ್ಥಿ
ಟ್ರಂಪ್‌ ತೆರಿಗೆ ಶಾಕ್‌ಗೆ ಚೀನಾ ದಾಖಲೆಯ ತಿರುಗೇಟು