130 ವರ್ಷಗಳ ಹಳೆಯ ದೇವಸ್ಥಾನವನ್ನು ಸ್ಥಳಾಂತರಿಸಿ ಮಸೀದಿ ನಿರ್ಮಿಸಲು ಮುಂದಾಗಿರುವ ಟೆಕ್ಸ್ಟೈಲ್ ಕಂಪನಿ. ಮಸೀದಿ ಶಂಕುಸ್ಥಾಪನೆಗೆ ಸಿದ್ಧತೆ ನಡೆಯುತ್ತಿದೆ. ಈ ನಿರ್ಧಾರವು ಧಾರ್ಮಿಕ ಸಮಾನತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
130 Year Old Temple: 130 ವರ್ಷದ ಹಳೆಯ ದೇವಸ್ಥಾನಕ್ಕೆ ಸಂಕಷ್ಟ ಎದುರಾಗಿದೆ. ರಾಜಧಾನಿಯ ಕೇಂದ್ರ ಸ್ಥಾನದಲ್ಲಿರುವ ದೇವಸ್ಥಾನ ಸ್ಥಳಾಂತರಿಸುವ ಪ್ರಯತ್ನಗಳು ನಡೆದಿವೆ. ಮಲೇಶಿಯಾ ರಾಜಧಾನಿ ಕುವಾಲಾಲಂಪುರದಲ್ಲಿರುವ ಐತಿಹಾಸಿಕ ದೇವಸ್ಥಾನ (Malaysia Hindu Temple) ತೆರವುಗೊಳಿಸಿ, ಮಸೀದಿ ನಿರ್ಮಿಸಿ ಮುಸ್ಲಿಮರಿಗೆ ಉಡುಗೊರೆಯಾಗಿ ನೀಡಲು ಟೆಕ್ಷ್ಟ್‌ಸ್ಟೈಲ್ ಕಂಪನಿ ಮುಂದಾಗಿದೆ. ದೇವಸ್ಥಾನವಿರುವ ಸ್ಥಳವನ್ನು ಟೆಕ್ಷ್ಟ್‌ಸ್ಟೈಲ್ ಕಂಪನಿ ಖರೀದಿಸಿದೆ. ಶೀಘ್ರದಲ್ಲಿಯೇ ಮಲೇಶಿಯಾ ಪ್ರಧಾನ ಮಂತ್ರಿಗಳು (Malaysia PM Anwar Ibrahim) ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಮಲೇಶಿಯಾದ ಶ್ರೀ ಪತ್ರ ಕಾಳಿ ಅಮ್ಮಾ ದೇವಸ್ಥಾನ ಜನರ ಧಾರ್ಮಿಕ ಕೇಂದ್ರವಾಗಿದೆ. ಈ ದೇವಸ್ಥಾನ ಸರ್ಕಾರಿ ಜಮೀನಿನಲ್ಲಿ ನಿರ್ಮಾಣ ಮಾಡಲಾಗಿತ್ತು. ಇದೀಗ ಈ ಜಮೀನನ್ನು 2014ರಲ್ಲಿ ಟೆಕ್ಷ್ಟ್‌ಸ್ಟೈಲ್ ಕಂಪನಿಯ ಜಾಕೆಲ್ ಎಂಬವರಿಗೆ ಮಾರಾಟ ಮಾಡಲಾಗಿದೆ. ಈ ಕಂಪನಿಯ ಸ್ಥಾಪಕ ದಿವಂಗತ ಮೊಹಮ್ಮದ್ ಜಾಕೆಲ್ ಅಹ್ಮದ್ ಅವರು ಈ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಿ ಮತ್ತು ಮುಸ್ಲಿಂ ಸಮುದಾಯಕ್ಕೆ ಕೊಡುಗೆ ನೀಡಲು ಜಮೀನು ಖರೀದಿಸಿದ್ದರು.
ಪ್ರಧಾನಮಂತ್ರಿಗಳಿಂದ ಶಿಲಾನ್ಯಾಸ
ವರದಿಗಳ ಪ್ರಕಾರ, ಜಾಕೆಲ್ ಕಂಪನಿ ನಿರಂತರವಾಗಿ ದೇವಸ್ಥಾನದ ಕಮಿಟಿ ಜೊತೆ ಮಾತನಾಡುತ್ತಿದೆ. ದೇವಸ್ಥಾನವನ್ನು ಮತ್ತೊಂದೆಡೆ ಶಿಫ್ಟ್ ಮಾಡುವ ಎಲ್ಲಾ ಖರ್ಚುಗಳನ್ನು ನೀಡಲು ಜಾಕೆಲ್ ಕಂಪನಿ ಒಪ್ಪಿಕೊಂಡಿದೆ. 2021ರಲ್ಲಿಯೇ ಕಂಪನಿಗೆ ಇಲ್ಲಿ ಮಸೀದಿ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ. ಆದ್ರೆ ದೇವಸ್ಥಾನ ಸಂಪೂರ್ಣವಾಗಿ ಶಿಫ್ಟ್ ಆಗೋವರೆಗೂ ಮಸೀದಿ ನಿರ್ಮಾಣಕ್ಕೆ ಮುಂದಾಗದಂತೆ ತಡೆ ಹಿಡಿಯಲಾಗಿತ್ತು. ಸದ್ಯದ ವರದಿಗಳ ಪ್ರಕಾರ, ಇದೇ ಮಾರ್ಚ್ 27ರಂದು ಗುರುವಾರ ಹೊಸ ಮಸೀದಿಯ ಶಿಲಾನ್ಯಾಸವನ್ನು ಪ್ರಧಾನ ಮಂತ್ರಿ ಅನ್ವರ್ ಇಬ್ರಾಹಿಂ ನೆರವೇರಿಸಲಾಗಿದೆ.
ದೇವಸ್ಥಾನ ಸ್ಥಳದಲ್ಲಿ ಮಸೀದಿ ನಿರ್ಮಾಣದ ವಿಷಯ ಧಾರ್ಮಿಕ ಸಮಾನತೆಯ ಕುರಿತು ಚರ್ಚೆಗಳು ತುಂಬಾ ಗಂಭೀರವಾಗಿ ನಡೆಯುತ್ತಿವೆ. ಹಿಂದೂ ದೇವಾಲಯವಿದ್ದ ಸ್ಥಳದಲ್ಲಿ ಮಸೀದಿ ನಿರ್ಮಾಣಕ್ಕೆ ಮುಂದಾಗಿರೋದು ಮಲೇಶಿಯಾ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಹಾಗೆ ಸರ್ಕಾರದ ನಿರ್ಧಾರದ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 'ಲಾಯರ್ಸ್ ಫಾರ್ ಲಿಬರ್ಟಿ' ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಜೈದ್ ಮಲಿಕ್, ಸರ್ಕಾರದ ನಿರ್ಧಾರಗಳನ್ನು ಖಂಡಿಸಿದ್ದಾರೆ.. ದೇವಸ್ಥಾನದ ಸಮಿತಿ, ಜೇಕಲ್ ಸಂಸ್ಥೆ ಮತ್ತು ಪುರಸಭೆ ನಡುವೆ ಇನ್ನೂ ಮಾತುಕತೆ ನಡೆಯುತ್ತಿದೆ. ಆದ್ರೂ ತರಾತುರಿಯಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನೆರೆವೇರಿಸಲಾಗುತ್ತಿದೆ. ಇಲ್ಲಿಯ ದೇವಸ್ಥಾನವನ್ನು ತೆಗೆಯಲು ಪ್ರಧಾನಿ ಅನ್ವರ್ ಅವರೇ ಅವಸರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಗಂಡು ಮಗುವಿನ ಆಸೆಗೆ 9 ಹೆಣ್ಣು ಮಕ್ಕಳಿಗೆ ಜನ್ಮ, ವಿಚಿತ್ರವಾಗಿದೆ ಎಲ್ಲರ ಹೆಸರು
ಪ್ರಧಾನ ಮಂತ್ರಿ ಅನ್ವರ್ ಇಬ್ರಾಹಿಂ ಹೇಳಿದ್ದೇನು?
ಇನ್ನು ಈ ವಿಷಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿಯೂ ವ್ಯಾಪಕವಾಗಿ ಚರ್ಚೆಗಳು ನಡೆಯುತ್ತಿವೆ. ಧಾರ್ಮಿಕ ಘರ್ಷಣೆ ತಪ್ಪಿಸಲು ಮಸೀದಿಯನ್ನು ಬೇರೆಡೆ ನಿರ್ಮಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ. ಮತ್ತೊಂದೆಡೆ ಪ್ರಧಾನಿ ಅನ್ವರ್, ದೇವಸ್ಥಾನವನ್ನು ಸಂಪೂರ್ಣವಾಗಿ ಸ್ಥಳಾಂತರಿಸಿದ ಬಳಿಕವಷ್ಟೇ ಅಲ್ಲಿ ಮಸೀದಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮುಂದುವರಿದು ಮಾತನಾಡಿರುವ ಪ್ರಧಾನಿಗಳು, ದೇವಸ್ಥಾನಕ್ಕೆ ಕಾನೂನು ಮಾನ್ಯತೆ ಇಲ್ಲ. ಆದ್ರೆ ಸರ್ಕಾರವೇ ದೇವಸ್ಥಾನ ನಿರ್ಮಾಣಕ್ಕೆ ಸ್ಥಳ ನೀಡಲಿದೆ. ಧಾರ್ಮಿಕ ಸೌಹಾರ್ದತೆ ಕಾಪಾಡಲು ಸಹಾಯ ಮಾಡಲಾಗುವುದು ಎಂದು ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ದೇವಸ್ಥಾನದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ: ಬಾಂಗ್ಲಾ ಸರ್ಕಾರದ ವಿರುದ್ಧ ಶೀಘ್ರ ಸೇನಾ ಕ್ಷಿಪ್ರಕ್ರಾಂತಿ?: ಯೂನುಸ್ ಸರ್ಕಾರದ ವಿರುದ್ಧ ವೈಫಲ್ಯದ ಆರೋಪ