ದುಬೈ ರಾಜ ಶೇಖ್ ಇಮ್ದಾನ್ ಬಿನ್ ಮೊಹಮ್ಮದ್ ಅವರಿಗೆ ಹೆಣ್ಣು ಮಗುವಾಗಿದ್ದು, ಮಗಳಿಗೆ ಸುಂದರ ಮತ್ತು ಪ್ರಭಾವಶಾಲಿಯಾದ ಹೆಸರಿಟ್ಟಿದ್ದಾರೆ.
ನವದೆಹಲಿ: ದುಬೈ ಕ್ರೌನ್ ಪ್ರಿನ್ಸ್ ಶೇಖ್ ಇಮ್ದಾನ್ ಬಿನ್ ಮೊಹಮ್ಮದ್ ಅವರು ತಮ್ಮ ಕುಟುಂಬಕ್ಕೆ ನಾಲ್ಕನೇ ಮಗು ಆಗಮನವಾಗಿದೆ ಎಂಬ ಸಂತೋಷದ ವಿಷಯವನ್ನು ಜಗತ್ತಿನೊಂದಿಗೆ ಹಂಚಿಕೊಂಡಿದ್ದಾರೆ. ಈ ಬಾರಿ ಶೇಖ್ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. 2021ರಲ್ಲಿ ಅವಳಿ ರಾಶಿದ್ ಮತ್ತು ಶಾಹಿಖಾ, 2023ರಲ್ಲಿ
ಮಗ ಜನಿಸಿದ್ದರು. ಇದೀಗ ನಾಲ್ಕನೇ ಮಗುವಿಗೆ ತಂದೆಯಾಗಿದ್ದಾರೆ. ಶೇಖ್ ತಮ್ಮ ನಾಲ್ಕನೇ ಮಗುವಿಗೆ ಇರಿಸಿದ ಹೆಸರು ಕೇಳಿ ಭಾರತೀಯರಲ್ಲಿ ಒಂದು ರೀತಿ ಖುಷಿಯಾಗುತ್ತದೆ. ಹಾಗಾದ್ರೆ ಮಗುವಿಗೆ ಶೇಖ್ ಇರಿಸಿದ ಹೆಸರೇನು ಗೊತ್ತಾ?
ಶೇಖ್ ತಮ್ಮ ನಾಲ್ಕನೇ ಮಗುವಿಗೆ 'ಹಿಂದ್' ಎಂದು ಹೆಸರಿಟಿದ್ದಾರೆ. ಮಗಳ ಪೂರ್ಣ ಹೆಸರು ಹಿಂದ್ ಬಿನ್ ಇಮ್ದಾದ್ ಬಿನ್ ಮೊಹಮ್ಮದ್ ಆಗಿದೆ. ಶೇಖ್ ಮಗಳ ಹಿಂದ್ ಹೆಸರಿನ ಅರ್ಥವೇನು ಎಂಬುದರ ಮಾಹಿತಿ ಇಲ್ಲಿದೆ. ಸಾಮಾನ್ಯವಾಗಿ ಹಿಂದ್ ಹೆಸರು ಕೇಳುತ್ತಲೇ ಭಾರತೀಯರಿಗೆ ಇದು ಹಿಂದೂಸ್ಥಾನದಿಂದ ಪ್ರೇರಿತ ಅಂತ ಅನ್ನಿಸುತ್ತದೆ. ಆದ್ರೆ ಹಿಂದ್ ಅನ್ನೋದು ಅರಬ್ ಮತ್ತು ಇಸ್ಲಾಂ ಪರಂಪರೆಯ ಸಾಂಸ್ಕೃತಿಕತೆಯ ಐತಿಹಾಸಿಕ ಮಹತ್ವವನ್ನು ಹೊಂದಿದೆ. ನೂರಾರು ವರ್ಷಗಳಿಂದ ಇಸ್ಲಾಂನಲ್ಲಿ ಹಿಂದ್ ಪದ ಬಳಕೆಯಲ್ಲಿದೆ.
ಹಿಂದ್ ಪದದ ಅರ್ಥ ಏನು ಗೊತ್ತಾ?
ಹಿಂದ್ ಪದದ ಅರ್ಥ ಶಕ್ತಿ, ಸ್ಮೃತಿ ಮತ್ತು ಪರಂಪರೆ ಎಂದರ್ಥ. ಪ್ರಾಚೀನ ಕಾಲದಿಂದಲೂ ಹಿಂದ್ ಎಂಬ ಪದವನ್ನು ಸಮೃದ್ಧಿ ಮತ್ತು ಹಣದ ಪ್ರತೀಕವಾಗಿ ಪರಿಗಣಿಸಲಾಗುತ್ತದೆ. ಹಾಗಾಗಿ ಪ್ರಾಚೀನ ಕಾಲದಿಂದಲೂ ಹಿಂದ್ ಎಂಬ ಹೆಸರು ಬಳಕೆಯಲ್ಲಿದೆ. ಹಿಂದ್ ಹೆಸರಿಡೋದು ಒಬ್ಬ ವ್ಯಕ್ತಿಗೆ ದೃಢತೆ, ಸಹಿಷ್ಣುತೆ ಮತ್ತು ಸಮೃದ್ಧಿಯಂತಹ ಗುಣಗಳನ್ನು ನೀಡುವ ಒಂದು ಮಾರ್ಗವಾಗಿತ್ತು.
ಇದನ್ನೂ ಓದಿ: ಈ ದೇಶದಲ್ಲಿ ಒಂದು ಕಸದ ಬುಟ್ಟಿಯೂ ಇಲ್ಲ! ಕಾರಣ ತಿಳಿದರೆ ಶಾಕ್ ಆಗ್ತೀರಾ!
ಹಿಂದ್ ಹೆಸರಿನ ಇತಿಹಾಸ
ಇಸ್ಲಾಮಿಕ್ ಪೂರ್ವ ಅರೇಬಿಯಾದಲ್ಲಿ ಹಿಂದ್ ಎಂಬ ಹೆಸರು ಸಾಕಷ್ಟು ಜನಪ್ರಿಯವಾಗಿತ್ತು. ಇಸ್ಲಾಂ ಉಗಮದ ಬಳಿಕವೂ ಈ ಹಿಂದ್ ಪದದ ಬಳಕೆ ಮುಂದುವರಿದಿದೆ. ಹಿಂದ್ ಬಿಂಟ್ ಉತ್ಬಾ ಎಂಬವರು ಇಸ್ಲಾಮಿಕ್ ಇತಿಹಾಸದಲ್ಲಿ ಪ್ರಭಾವಶಾಲಿ ಮಹಿಳೆ ಎಂದು ಗುರುತಿಸಿಕೊಂಡಿದ್ದಾರೆ. ಹಿಂದ್ ಬಿನ್ ಉತ್ಬಾ ತಮ್ಮ ಬುದ್ಧಿವಂತಿಕೆ, ನಾಯಕತ್ವದ ಸಾಮರ್ಥ್ಯಗಳು ಮತ್ತು ನಂತರ ಇಸ್ಲಾಂಗೆ ಮತಾಂತರಗೊಂಡಿದ್ದಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಹಿಂದ್ ಹೆಸರಿನ ಜನರು ಧೈರ್ಯ, ನಾಯಕತ್ವ ಮತ್ತು ಉದಾತ್ತತೆಯ ಗುಣವನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಇಂದಿಗೂ ಅರಬ್ ದೇಶಗಳಲ್ಲಿ ಹಿಂದ್ ಎಂಬ ಹೆಸರು ಬಹಳ ಜನಪ್ರಿಯವಾಗಿರುವ ಹಿಂದ್, ಅರ್ಥಪೂರ್ಣ ಮತ್ತು ಪ್ರತಿಷ್ಠಿತ ಹೆಸರಾಗಿ ಉಳಿದಿದೆ.
ನೀವು ನಿಮ್ಮ ಮಗಳಿಗೆ ಸುಂದರವಾದ ಮತ್ತು ಅರ್ಥಪೂರ್ಣವಾದ ಹೆಸರು ಹುಡುಕುತ್ತಿದ್ರೆ 'ಹಿಂದ್' ಆಯ್ಕೆ ಮಾಡಿಕೊಳ್ಳಬಹುದು. ಇಸ್ಲಾಮಿಕ್ ಇತಿಹಾಸದಲ್ಲಿ ಹಿಂದ್ ಎಂಬ ಪದ ಅತ್ಯಂತ ಪ್ರಭಾವಶಾಲಿ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿಯೇ ದುಬೈ ರಾಜ ಶೇಖ್ ಇಮ್ದಾನ್ ಬಿನ್ ಮೊಹಮ್ಮದ್ ತಮ್ಮ ಮಗಳಿಗೆ ಹಿಂದ್ ಎಂದು ಹೆಸರಿಟ್ಟಿದ್ದಾರೆ.
ಇದನ್ನೂ ಓದಿ: ಇದು ಕೋಳಿಯಲ್ಲ, ಕೊಕ್ಕೊಕ್ಕೋ ಎನ್ನೋ ಗಿಳಿ... ನಿಜಾರೀ... ಆನ್ಲೈನ್ನಲ್ಲೂ ಲಭ್ಯ! ಇಲ್ಲೇ ಟೆಸ್ಟ್ ಮಾಡಿ ನೋಡಿ...