Covid Crisis: ಶಾಂಘೈ ಲಾಕ್‌ಡೌನ್‌: ನಾಯಿ ಜತೆಗೂ ಹೊರಬರುವಂತಿಲ್ಲ..!

Published : Mar 30, 2022, 04:28 AM IST
Covid Crisis: ಶಾಂಘೈ ಲಾಕ್‌ಡೌನ್‌: ನಾಯಿ ಜತೆಗೂ ಹೊರಬರುವಂತಿಲ್ಲ..!

ಸಾರಾಂಶ

*   ಮನೆಯಿಂದ ಹೊರಬರದಂತೆ ಸರ್ಕಾರ ಆದೇಶ ಹಿನ್ನೆಲೆ *  ಕೋವಿಡ್‌ ಟೆಸ್ಟ್‌ಗಾಗಿ ಮಾತ್ರ ಮನೆಯಿಂದ ಹೊರಬರಬೇಕು *  ಎಲ್ಲರಿಗೂ ಮನೆಯಲ್ಲೇ ಕಡ್ಡಾಯ ಕ್ವಾರಂಟೈನ್‌ ಆಗಲು ಸೂಚನೆ  

ಶಾಂಘೈ(ಮಾ.30):  ಚೀನಾದ(China) ಶಾಂಘೈ ನಗರದಲ್ಲಿ ಕೋವಿಡ್‌(Covid-19) ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ. ಚೀನಾದಲ್ಲಿ ಮಂಗಳವಾರ ಒಂದೇ ದಿನ 6,886 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಶಾಂಘೈಯಲ್ಲೇ 4,477 ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಸೋಂಕಿನ ಹರಡುವಿಕೆ ತಡೆಗಟ್ಟಲು ಎಲ್ಲ ನಾಗರಿಕರನ್ನು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಅಲ್ಲದೇ ಸಾಕುನಾಯಿಯನ್ನು(Dog) ಹೊರಗಡೆ ಕರೆದೊಯ್ಯುವುದರ ಮೇಲೂ ನಿರ್ಬಂಧ ವಿಧಿಸಲಾಗಿದೆ.

‘ಸುಮಾರು 2.6 ಕೋಟಿ ಜನಸಂಖ್ಯೆಯಿರುವ ಚೀನಾದ ಅತ್ಯಂತ ದೊಡ್ಡ ನಗರಗಳಲ್ಲಿ ಒಂದಾದ ಶಾಂಘೈನಲ್ಲಿ(Shanghai) ಎರಡು ಹಂತದಲ್ಲಿ ಲಾಕ್‌ಡೌನ್‌(Lockdown) ಘೋಷಿಸಲಾಗಿದೆ. ಮೊದಲನೇ ಹಂತದಲ್ಲಿ 4 ದಿನಗಳ ಕಾಲ ನಗರದ ಒಂದು ಭಾಗವನ್ನು ಲಾಕ್‌ಡೌನ್‌ ಮಾಡಿದರೆ, ಎರಡನೇ ಹಂತದಲ್ಲಿ ಇನ್ನರ್ಧ ನಗರದಲ್ಲಿ ಲಾಕ್‌ಡೌನ್‌ ಘೋಷಿಸಲಾಗುವುದು. ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಮನೆಯಲ್ಲೇ ಕಡ್ಡಾಯವಾಗಿ ಕ್ವಾರಂಟೈನ್‌(Quarantine) ಆಗಬೇಕು. ನಾಗರಿಕರು ಕೇವಲ ಕೋವಿಡ್‌ ಪರೀಕ್ಷೆಯನ್ನು(Covid Test) ಮಾಡಿಸಿಕೊಳ್ಳಲು ಮನೆಯಿಂದ ಹೊರಗಡೆ ಹೋಗಬಹುದಾಗಿದೆ. ತಮ್ಮ ಮನೆಯ ಆವರಣ, ತೆರೆದ ಬಯಲುಗಳಲ್ಲೂ ಜನರ ಓಡಾಟದ ಮೇಲೆ ನಿರ್ಬಂಧ ಹೇರಲಾಗಿದೆ. ಈ ವೇಳೆ ಸಾಕುನಾಯಿಯನ್ನು ಹೊರಗಡೆ ಸಂಚಾರಕ್ಕೆ ಕರೆದೊಯ್ಯುವಂತಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Covid Crisis: ಚೀನಾದ ಶಾಂಘೈ ಸಂಪೂರ್ಣ ಲಾಕ್‌ಡೌನ್‌: ಎಲ್ಲ 2.6 ಕೋಟಿ ಜನಕ್ಕೆ ಕೋವಿಡ್‌ ಟೆಸ್ಟ್‌

ವಾಣಿಜ್ಯ ನಗರಿಯಾದ ಶಾಂಘೈನಲ್ಲಿ ಲಾಕ್‌ಡೌನ್‌ ಹೇರಿಕೆಯಿಂದಾಗಿ ಉದ್ಯಮಕ್ಕೆ ತೀವ್ರ ಪೆಟ್ಟಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರವು ಉದ್ಯಮಿಗಳು ಹಾಗೂ ಸಣ್ಣ ವ್ಯಾಪಾರಸ್ಥರಿಗೆ ತೆರಿಗೆ ವಿನಾಯಿತಿ, ಬಾಡಿಗೆಯಲ್ಲಿ ಕಡಿತ, ಹಾಗೂ ಉದ್ಯಮಿಗಳಿಗೆ ಸಾಲದ ನೆರವನ್ನು ಘೋಷಿಸಲು ಮುಂದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶಾಂಘೈ ಲಾಕ್‌ಡೌನ್‌: ಕಚೇರಿಯಲ್ಲೇ ನೆಲೆಸಿದ ಬ್ಯಾಂಕರ್‌, ಸಿಬ್ಬಂದಿ!

ಶಾಂಘೈ: ವಾಣಿಜ್ಯ ನಗರಿಯಾದ ಶಾಂಘೈನಲ್ಲಿ ಸೋಮವಾರ ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆ 20,000ಕ್ಕೂ ಹೆಚ್ಚಿನ ಬ್ಯಾಂಕರ್‌ಗಳು, ವ್ಯಾಪಾರಿ ಹಾಗೂ ಇನ್ನಿತರ ಸಿಬ್ಬಂದಿ ಕಚೇರಿಯಲ್ಲೇ ತಂಗಿದ್ದಾರೆ ಎಂದು ಸ್ಥಳೀಯ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

Covid Crisis: ಫ್ರಾನ್ಸ್‌, ಜರ್ಮನಿ, ಬ್ರಿಟನ್‌ನಲ್ಲಿ ಕೊರೋನಾ ಸೋಂಕು ಏರಿಕೆ

ಶಾಂಘೈ ಷೇರು ಪೇಟೆ, 285 ಇನ್ನಿತರ ಪ್ರಮುಖ ವಾಣಿಜ್ಯ ಸಂಸ್ಥೆಗಳ ಕಚೇರಿಗಳು ಶಾಂಘೈನ ಲುಜಿಯಾಝುಯಿ ಆರ್ಥಿಕ ನಗರದಲ್ಲಿವೆ. ಈ ಕಚೇರಿಗಳಲ್ಲಿ 20,000ಕ್ಕೂ ಹೆಚ್ಚಿನ ಸಿಬ್ಬಂದಿ, ಮ್ಯಾನೇಜರ್‌, ಬ್ಯಾಂಕರ್‌ಗಳು ನೆಲೆಸಿದ್ದಾರೆ. ಇವರಿಗೆ ಕಚೇರಿಯಲ್ಲೇ ಮಲಗುವ ವ್ಯವಸ್ಥೆ ಮಾಡಲಾಗಿದೆ. ವ್ಯಾಪಾರ- ವಹಿವಾಟಿನಲ್ಲಿ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಲು 2 ಪಾಳಿಯಲ್ಲಿ ಕೆಲಸ ನಡೆಸಲಾಗುತ್ತಿದೆ. ಶಾಂಘೈ ವಿದೇಶಿ ಬ್ಯಾಂಕ್‌ನಲ್ಲಿ ಹೈಬ್ರಿಡ್‌ ಮಾದರಿಯಲ್ಲಿ ಕೆಲಸ ನಿರ್ವಹಿಸಲಾಗುತ್ತಿದ್ದು, ಕೆಲವು ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುತ್ತಿದ್ದರೆ, ಪ್ರಮುಖ ಹುದ್ದೆಯಲ್ಲಿರುವ ಅಧಿಕಾರಿಗಳು ಕಚೇರಿಯಲ್ಲೇ ನೆಲೆಸಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾದಲ್ಲಿ ಕರೋನಾ ಆರ್ಭಟ, ಶಾಂಘೈನಲ್ಲಿ ಕಳೆದ 48 ಗಂಟೆಗಳಲ್ಲಿ ದಾಖಲೆಯ ಹೊಸ ಕೇಸ್!

ಶಾಂಘೈ ಚೀನಾದ ಅತಿದೊಡ್ಡ ಕೋವಿಡ್ -19 ಹಾಟ್‌ಸ್ಪಾಟ್ ಆಗಿ ಮಾರ್ಪಾಡಾಗಿದ್ದು, ಈಶಾನ್ಯ ಪ್ರಾಂತ್ಯದ ಜಿಲಿನ್ ಅನ್ನು (Jilin) ಈ ನಿಟ್ಟಿನಲ್ಲಿ ಹಿಂದಿಕ್ಕಿದೆ. ದೇಶದ ಪೂರ್ವ ಕರಾವಳಿಯ ಹಣಕಾಸು ರಾಜಧಾನಿ ಎಂದೇ ಗುರುತಿಸಿಕೊಳ್ಳುವ ಶಾಂಘೈನಲ್ಲಿ ಶನಿವಾರ 2,676 ಹೊಸ ಪ್ರಕರಣಗಳು ವರದಿಯಾಗಿದ್ದು, ಶುಕ್ರವಾರಕ್ಕಿಂತ ಶೇ. 18ರಷ್ಟು ಏರಿಕೆಯಾಗಿದೆ ಎಂದು ವಿದೇಶಿ ಪತ್ರಿಕೆಗಳು ವರದಿ ಮಾಡಿದ್ದವು. 

ಕಳೆದ ಮೂರು ದಿನಗಳಲ್ಲಿ 26 ಮಿಲಿಯನ್ ಜನಸಂಖ್ಯೆ ಹೊಂದಿರುವ ನಗರದಲ್ಲಿ ಪ್ರಕರಣಗಳು ತೀವ್ರವಾಗಿ ಏರಿಕೆಯಾಗಿವೆ. ಗುರುವಾರ ಅಂದಿನ ದಾಖಲೆಯ 1609 ಪ್ರಕರಣಗಳಿಂದ ಶುಕ್ರವಾರಕ್ಕೆ 2267 ಪ್ರಕರಣಕ್ಕೆ ಏರಿಕೆಯಾಗಿತ್ತು. ಶನಿವಾರ ಈ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗಿದೆ.  ಇದು ಸೋಂಕಿತ ನೆರೆಹೊರೆಗಳು ಮತ್ತು ಅಪಾರ್ಟ್ಮೆಂಟ್ ಬ್ಲಾಕ್‌ಗಳ ಕಟ್ಟುನಿಟ್ಟಾದ ರೋಲಿಂಗ್ ಲಾಕ್‌ಡೌನ್‌ಗಳನ್ನು ಜಾರಿ ಮಾಡಿದ ಹೊರತಾಗಿಯೂ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!