ಜಗತ್ತಿನ ಅತ್ಯಂತ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನ ಪಡೆದ ಈ ನಗರ

By Anusha Kb  |  First Published Aug 16, 2024, 12:37 PM IST

2024ರ ವಿಶ್ವದ ಅತ್ಯಂತ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಅಬುಧಾಬಿ ಮೊದಲ ಸ್ಥಾನ ಪಡೆದಿದೆ. ನಂಬಿಯೋ ಸಂಸ್ಥೆ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಒಟ್ಟು 329 ನಗರಗಳನ್ನು ಪರಿಗಣಿಸಲಾಗಿದೆ. ಅಬುಧಾಬಿಯ ಉತ್ತಮ ಭದ್ರತಾ ಮಾನದಂಡಗಳಿಗೆ ಈ ಗೌರವ ದೊರೆತಿದೆ.


ವಿಶ್ವದ ಅತ್ಯಂತ ಸುರಕ್ಷಿತ ಸ್ಥಳಗಳ ಪಟ್ಟಿ ಬಿಡುಗಡೆಯಾಗಿದ್ದು, ಅರಬ್ ರಾಷ್ಟ್ರ ಸೌದಿ ಅರೇಬಿಯಾದ ಅಬುಧಾಬಿ ಮೊದಲ ಸ್ಥಾನದಲ್ಲಿದೆ. 2017ರಿಂದಲೂ ಸೌದಿ ಅರೇಬಿಯಾ ಜಗತ್ತಿನ ಅತ್ಯಂತ ಸುರಕ್ಷಿತ ನಗರಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಆದರೆ ಈ ಬಾರಿ 2024ರ ಪಟ್ಟಿಯಲ್ಲಿ ಅದು ಮೊದಲ ಸ್ಥಾನ ಗಳಿಸಿದೆ. ಒಟ್ಟು 329 ಜಾಗತಿಕ ನಗರಗಳನ್ನು ಹಿಂದಿಕ್ಕಿ ಅಬುಧಾಬಿ ಮೊದಲ ಸ್ಥಾನಕ್ಕೇರಿದೆ. 

ಜಾಗತಿಕವಾಗಿ ಆರ್ಥಿಕತೆ ಹಾಗೂ ಸಾಮಾಜಿಕ ಸ್ಥಿತಿಗತಿ ಹಾಗೂ ಸುರಕ್ಷತೆಯ ಬಗ್ಗೆ ಮಾಹಿತಿ ನೀಡುವ ನಂಬಿಯೋ ಎಂಬ ಸಂಸ್ಥೆ ಈ ಪಟ್ಟಿಯನ್ನು ರಿಲೀಸ್ ಮಾಡಿದ್ದು, ಯನೈಟೆಡ್ ಅರಬ್ ಎಮಿರೇಟ್ಸ್‌ನ ರಾಜಧಾನಿಯಾಗಿರುವ ಅಬುಧಾಬಿಯೂ ಮೊದಲ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಅಬುಧಾಬಿ 86.8 ಅಂಕಗಳನ್ನು ಪಡೆದಿದ್ದು, ಅದರ ನಂತರದ ಸ್ಥಾನದಲ್ಲಿ 84.4 ಅಂಕಗಳೊಂದಿಗೆತೈಪೈ ಹಾಗೂ ತೈವಾನ್ ನಗರಗಳಿವೆ. ಉತ್ತಮವಾದ ಭದ್ರತಾ ಮಾನದಂಡಗಳನ್ನು ಜಾರಿಗೆ ತರುವ ಅದರ ಜಾಗತಿಕ ನಾಯಕತ್ವದಿಂದಾಗಿ  ಅಬುಧಾಬಿಗೆ ಈ ಗರಿಮೆ ದೊರಕಿದೆ. 

Tap to resize

Latest Videos

undefined

ಜಗತ್ತಿನ ಟಾಪ್‌ 10 ಮದ್ಯ ಉತ್ಪಾದಕ ಕಂಪನಿಗಳು, ಭಾರತದ ಬ್ರ್ಯಾಂಡ್‌ ಲಿಸ್ಟ್‌ನಲ್ಲಿ ಇದ್ಯಾ?

ಈ ವಿಚಾರಕ್ಕೆ ಸಂಬಂಧಿಸಿದಂತೆ ಅಬುಧಾಬಿ ಪೊಲೀಸ್‌ ಇಲಾಖೆಯ ಮಹಾ ನಿರ್ದೇಶಕ  ಮೇಜರ್ ಜನರಲ್ ಮಕ್ತುಂಮ್ ಅಲಿ ಅಲ್ ಶರಿಫಿ ಸಂತಸ ವ್ಯಕ್ತಪಡಿಸಿದ್ದು, ಎಮಿರೇಟ್ಸ್‌ನಲ್ಲಿ ಭದ್ರತೆಯ ನಿರ್ವಹಣೆಗೆ ಅತ್ಯಂತ ಹೆಚ್ಚು ಪ್ರಾಶಸ್ತ್ಯ ನೀಡುತ್ತಿರುವ ಜೊತೆ ಸೀಮೆಮೀರಿ ಬೆಂಬಲ ನೀಡುತ್ತಿರುವ ಬುದ್ಧಿವಂತ ನಾಯಕತ್ವಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.  ಅಬುಧಾಬಿಯ ಜೊತೆ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಜ್ಮನ್‌ ದುಬೈ ಹಾಗೂ ರಾಸ್ ಅಲ್ ಖೈಮಾ ನಗರಗಲೂ ಕೂಡ ಜಾಗತಿಕವಾಗಿ ಸುರಕ್ಷಿತ ನಗರಗಳ ಪಟ್ಟಿಯ ಟಾಪ್ 10 ರಲ್ಲಿ ಸ್ಥಾನ ಪಡೆದಿವೆ. ಹಾಗೆಯೇ ಸೌದಿ ಅರೇಬಿಯಾದ ರಿಯಾದ ಹಾಗೂ ಜೆಡ್ಡ ಕ್ರಮವಾಗಿ 40 ಹಾಗೂ 50ನೇ ಸ್ಥಾನದಲ್ಲಿವೆ. ಹಾಗೆಯೇ ಕುವೈತ್ ಸಿಟಿ 81ರಿಂದ 67ನೇ ಸ್ಥಾನಕ್ಕೇರಿದೆ. 

ಇದು ಜಗತ್ತಿನ ಬಲು ಅಗ್ಗದ ದೇಶ, ನಿಮ್ ಕೈಯಲ್ಲಿ 1000 ರೂ. ಇದ್ರೂ ಕೋಟ್ಯಾಧಿಪತಿ ತರ ಜೀವಿಸಬಹುದು

click me!