ಸುಮ್ಮನಿರಲಾರದೇ ಕೋತಿ ಜೊತೆ ಚೆಲ್ಲಾಟ: ಮುಂದೇನಾಯ್ತು ನೋಡಿ viral video

Published : Jul 25, 2022, 12:16 PM ISTUpdated : Jul 25, 2022, 12:50 PM IST
ಸುಮ್ಮನಿರಲಾರದೇ ಕೋತಿ ಜೊತೆ ಚೆಲ್ಲಾಟ: ಮುಂದೇನಾಯ್ತು ನೋಡಿ viral video

ಸಾರಾಂಶ

ಯುವತಿಯೊಬ್ಬಳು ಕೋತಿಯೊಂದನ್ನು ಕೆಣಕಲು ಹೋಗಿ ಸರಿಯಾಗಿ ಗುಮ್ಮಿಸಿಕೊಂಡಿದ್ದಾಳೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

ಕೆಲವೊಮ್ಮೆ ಕೆಲವರು ಸುಮ್ಮನಿರಲಾರದೇ ಏನೇನೋ ಮಾಡಲು ಹೋಗಿ ಸಂಕಷ್ಟವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಕೆಲ ದಿನಗಳ ಹಿಂದೆ ವ್ಯಕ್ತಿಯೋರ್ವ ಬೋನಿನಲ್ಲಿದ್ದ ಸಿಂಹವನ್ನು ಕೆಣಕಲು ಹೋಗಿ ತನ್ನ ಕೈ ಬೆರಳನ್ನೇ ಕಳೆದುಕೊಂಡಿದ್ದ. ಅದೇ ರೀತಿ ಈಗ ಯುವತಿಯೊಬ್ಬಳು ಕೋತಿಯೊಂದನ್ನು ಕೆಣಕಲು ಹೋಗಿ ಸರಿಯಾಗಿ ಗುಮ್ಮಿಸಿಕೊಂಡಿದ್ದಾಳೆ. ಮೃಗಾಲಯವೊಂದಕ್ಕೆ ತೆರಳಿದ ಯುವತಿಯೊಬ್ಬಳು ಮಂಗ ಕುಳಿತಿದ್ದ ನೆಟ್‌ನ ಬೇಲಿಯನ್ನು ಮತ್ತೆ ಮತ್ತೆ ಕೈಯಲ್ಲಿ ಹೊಡೆದು ಕೋತಿಯನ್ನು ಕೆಣಕಲು ನೋಡಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಕೋತಿ ಆಕೆಯ ಕೂದಲಿಗೆ ಕೈ ಹಾಕಿ ಹಿಡಿದು ಎಳೆದಾಡಿದೆ. ಈ ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ ಮೊದಲಿಗೆ ಶೇರ್ ಮಾಡಲಾಗಿತ್ತು. ನಂತರ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿದ್ದು, ವೈರಲ್‌ ಆಗಿದೆ.  

ವಿಡಿಯೋದಲ್ಲಿ ಕಾಣಿಸುವಂತೆ ಬಾಲಕಿಯೊಬ್ಬಳು ಒಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡಿದ್ದು, ಮತ್ತೊಂದು ಕೈಯಲ್ಲಿ ಕೋತಿ ಇರುವ ಪ್ರದೇಶದ ನೆಟ್‌ ಬೇಲಿಯನ್ನು ಕೈಯಿಂದ ಜೋರಾಗಿ ಹೊಡೆಯುತ್ತಿರುತ್ತಾಳೆ. ಈ ವೇಳೆ ದೂರದಲ್ಲಿದ್ದ ಕೋತಿಯೊಂದು ನೆಟ್ ಮೇಲೆ ಹತ್ತಿಕೊಂಡು ಯುವತಿ ಇದ್ದಲ್ಲಿಗೆ ಬಂದಿದ್ದು, ಕೆಳ ಬಾಗಿ ಆಕೆಯ ತಲೆಕೂದಲನ್ನು ಜೋರಾಗಿ ಹಿಡಿದು ಎಳೆದಾಡಿದೆ. ಈ ವೇಳೆ ಯುವತಿ ಜೋರಾಗಿ ಕಿರುಚಿಕೊಂಡಿದ್ದಾಳೆ. ನಂತರ ಅಲ್ಲೇ ಇದ್ದ ಯುವಕನೋರ್ವ ಈ ಯುವತಿಯನ್ನು ಕೋತಿಯ ಕೈಯಿಂದ ಬಿಡಿಸಿದ್ದಾಳೆ. ಅಲ್ಲದೇ ಅದು ಆ ಕ್ಷಣಕ್ಕೆ ಮುಕ್ತಾಯಗೊಂಡಿಲ್ಲ, ಮೊದಲಿಗೆ ಕೂದಲೆಳೆದ ಕೋತಿಯಿಂದ ಬಿಡಿಸಿಕೊಂಡು ಮತ್ತಷ್ಟು ದೂರ ಸಾಗುವಷ್ಟರಲ್ಲಿ ಮತ್ತೊಂದು ಕೋತಿ ಆಕೆಯ ಕೂದಲಿಗೆ ಕೈ ಹಾಕಿದೆ. ಆದರೆ ಹುಡುಗಿ ಕೋತಿ ಕೈಯಿಂದ ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ಆದರೆ ಈ ದೃಶ್ಯವನ್ನು ಎಲ್ಲಿ ಸೆರೆ ಹಿಡಿಯಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. 

4 ತಿಂಗಳ ಮಗುವನ್ನು ಕಟ್ಟಡದಿಂದ ಕೆಳಗೆಸೆದು ಕೊಂದ ಕೋತಿ

ಪ್ರಾಣಿಗಳನ್ನು ಪ್ರಚೋದಿಸಬಾರದು ಎಂದು ಮೃಗಾಲಯದಲ್ಲಿ ಮೃಗಾಲಯ ಪಾಲಕರು ಅಲ್ಲಲ್ಲಿ ಸೂಚನಾ ಫಲಕಗಳನ್ನು ಅಳವಡಿಸುತ್ತಾರೆ. ಆದಾಗ್ಯೂ ಕೆಲ ಪ್ರವಾಸಿಗರು ಪ್ರಾಣಿಗಳನ್ನು ಕೆಣಕಲು ಹೋಗಿ ಪ್ರಾಣಕ್ಕೆ ಸಂಚಾಕಾರ ತಂದುಕೊಳ್ಳುತ್ತಾರೆ. 

ಸಿಂಹದ ಜೊತೆ ಚೆಲ್ಲಾಟ : ಬೆರಳು ಕಳೆದುಕೊಂಡ ಯುವಕ

ಹೀಗೆಯೇ ಯುವಕನೋರ್ವ ಸಿಂಹದ (Lion) ಜೊತೆ ಚೆಲ್ಲಾಟವಾಡಲು ಹೋಗಿ ತನ್ನ ಬೆರಳನ್ನೇ ಕಳೆದುಕೊಂಡ ಘಟನೆ ಜಮೈಕಾದ (Jamaica) ಮೃಗಾಲಯದಲ್ಲಿ (Zoo) ಕೆಲ ದಿನಗಳ ಹಿಂದೆ ನಡೆದಿತ್ತು. ಯುವಕನೋರ್ವ ಮೃಗಾಲಯದಲ್ಲಿದ್ದ ಸಿಂಹದ ಜೊತೆ ಆಟವಾಡಲು ಹೋಗಿದ್ದಾನೆ. ಸಿಂಹ ಇದ್ದ ಗೂಡಿಗೆ ಅಳವಡಿಸಿದ ಕಬ್ಬಿಣದ ನೆಟ್‌ನ ಸೆರೆಯಲ್ಲಿ ಬೆರಳು ತೂರಿಸಿ ಸಿಂಹವನ್ನು ಮುಟ್ಟಲು ತಲೆ ಸವರಲು ಯತ್ನಿಸಿದ್ದಾನೆ. ಈತನ ಉಪಟಳದಿಂದ ಸಿಂಹ ವ್ಯಾಘ್ರಗೊಂಡಿದ್ದು, ಈತನ ಮೇಲೆ ಮುಗಿ ಬೀಳುವ ಯತ್ನ ಮಾಡಿದೆ. ಸಿಂಹ ಕೋಪಗೊಂಡಿದ್ದು ತಿಳಿದರು ಆತ ಮಾತ್ರ ತನ್ನ ಚೆಲ್ಲಾಟವಾಡುವುದನ್ನು ನಿಲ್ಲಿಸದೇ ಪದೇ ಪದೇ ಕಬ್ಬಿಣದ ನೆಟ್ಟೊಳಗೆ ಬೆರಳು ತೂರಿಸಿ ಸಿಂಹವನ್ನು ಮುಟ್ಟಲು ಯತ್ನಿಸಿದ್ದಾನೆ.

ಕೋತಿಗಳ ತಾಣವಾಯ್ತಾ ನಮ್ಮ ಮೆಟ್ರೋ..?

ಸುಮ್ಮನಿದ್ದ ತನ್ನನ್ನು ಪದೇ ಪದೇ ಕೆಣಕಿ ಕಿರುಕುಳ ನೀಡುತ್ತಿರುವ ಈತನಿಗೆ ಬುದ್ಧಿ ಕಲಿಸಬೇಕು ಎಂದು ನಿರ್ಧರಿಸಿದ ಸಿಂಹ ಹೊಂಚು ಹಾಕಿ ಈತನ ಬೆರಳನ್ನು ತನ್ನ ಬಾಯಲ್ಲಿ ಕಚ್ಚಿ ಹಿಡಿದಿದೆ. ಈಗ ಆಟವಾಡುವ ಟೈಮ್ ಸಿಂಹದ್ದಾಗಿದ್ದು ಯುವಕ ಏನೇ ಮಾಡಿದ್ದು ಸಿಂಹ ಮಾತ್ರ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದ್ದು, ಬೆರಳು ತುಂಡಾಗುವವರೆಗೂ ಆತನನ್ನು ಬಿಟ್ಟಿಲ್ಲ. ಪರಿಣಾಮ ಬೆರಳಿನ ಮೂಳೆ ಮಾತ್ರ ಉಳಿದಿದ್ದು, ಹೊರಭಾಗದ ಮಾಂಸವೆಲ್ಲಾ ಸಿಂಹದ ಪಾಲಾಗಿದೆ. ಒಂದು ವೇಳೆ ಇವರಿಬ್ಬರ ಕಾದಾಟದ ಸಮಯದಲ್ಲಿ ಕಬ್ಬಿಣದ ನೆಟ್ ಎಲ್ಲಾದರೂ ಜಾರಿದ್ದಾರೆ. ಕೇವಲ ಬೆರಳು ಮಾತ್ರವಲ್ಲ. ಇಡೀ ದೇಹವೇ ಸಿಂಹದ ಪಾಲಾಗುತ್ತಿದ್ದಿದ್ದಂತು ಸುಳ್ಳಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತೀಯರ ಎಚ್‌-1ಬಿ ವೀಸಾ ಸಂದರ್ಶನ ದಿಢೀರ್‌ ರದ್ದು : ಕಿಡಿ
ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!