ಪ್ರಧಾನಿ ಮೋದಿ ತುಂಬಾ ಸ್ಮಾರ್ಟ್ ವ್ಯಕ್ತಿ, ನನ್ನ ಆತ್ಮೀಯ ಗೆಳೆಯ ಎಂದ ಡೋನಾಲ್ಡ್ ಟ್ರಂಪ್

ಪ್ರಧಾನಿ ನರೇಂದ್ರ ಮೋದಿಯನ್ನು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೊಂಡಾಡಿದ್ದಾರೆ. ಮೋದಿ ತುಂಬಾ ಸ್ಮಾರ್ಟ್ ಎಂದಿದ್ದಾರೆ. ಪ್ರಮುಖವಾಗಿ ಟಾರಿಫ್, ಆಮದು ಸುಂಕ ಸೇರಿದಂತೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಕುರಿತು ಟ್ರಂಪ್, ಪ್ರಧಾನಿ ಮೋದಿಯನ್ನು ಹೊಗಳಿದ್ದೇಕೆ?

Modi smart man and good friend of mine Donald trump praise Indian PM

ನವದೆಹಲಿ(ಮಾ.29) ಡೋನಾಲ್ಡ್ ಟ್ರಂಪ್ ಆಡಳಿತ ಭಿನ್ನ. ಇದುವರೆಗೆ ಅಮೆರಿಕದ ಅಧ್ಯಕ್ಷರ ಆಡಳಿತಕ್ಕೂ ಟ್ರಂಪ್ ಆಡಳಿತಕ್ಕೂ ಭಾರಿ ವ್ಯತ್ಯಾಸಗಳಿವೆ. ಟ್ರಂಪ್ 2.0 ನೇರಾನೇರಾ. ಇದರ ಪರಿಣಾಮ ಹಲವು ದೇಶಗಳು ಟ್ರಂಪ್ ವಿರುದ್ಧ ಅಸಮಾಧಾನಗೊಂಡಿದೆ. ಒಂದಷ್ಟು ದೇಶಗಳು ಟ್ರಂಪ್ ಕೆಂಗಣ್ಣಿಗೆ ಗುರಿಯಾಗದಂತೆ ನಿಧಾನವಾಗಿ ಹೆಜ್ಜೆ ಹಾಕುತ್ತಿದೆ. ಇದರ ನಡುವೆ ಡೋನಾಲ್ಡ್ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ್ದಾರೆ. ನರೇಂದ್ರ ಮೋದಿ ತುಂಬಾ ಚಾಣಾಕ್ಷ ವ್ಯಕ್ತಿ ಎಂದಿದ್ದಾರೆ. ಭಾರತದ ಜೊತೆಗಿನ ಟಾರಿಫ್ ಡೀಲ್ ಕುರಿತು ಟ್ರಂಪ್ ಈ ಮಾತು ಹೇಳಿದ್ದಾರೆ. 

ಭಾರತದ ಜೊತೆಗಿನ ಟ್ಯಾರಿಫ್ ಡೀಲ್ ಕುರಿತು ಮಾತನಾಡಿದ ಟ್ರಂಪ್, ಮೋದಿ ಬಹಳ ಚಾಣಾಕ್ಷ ವ್ಯಕ್ತಿ, ಇಷ್ಟೇ ಅಲ್ಲ ನನ್ನ ಒಳ್ಳೆಯ ಸ್ನೇಹಿತ ಎಂದು ಕರೆದಿದ್ದಾರೆ. ಪ್ರಧಾನಿ ಮೋದಿ ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿ ಮಹತ್ವದ ಮಾತಕತೆ ನಡೆಸಿದ್ರು.ಮೋದಿ  ಯಾವಾಗಲೂ ಒಳ್ಳೆಯ ಸ್ನೇಹಿತರಾಗಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ. ನ್ಯೂ ಜರ್ಸಿಯಲ್ಲಿ ಅಮೆರಿಕದ ಅಟಾರ್ನಿ ಎಲಿನಾ ಹಬ್ಬಾ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಟ್ರಂಪ್ ಅವರು ಪ್ರಧಾನಿ ಮೋದಿಯವರನ್ನು ಹೊಗಳಿದ್ದಾರೆ. ಇದೇ ವೇಳೆ ಮೋದಿ ಶ್ರೇಷ್ಠ ಪ್ರಧಾನಿ ಎಂದಿದ್ದಾರೆ. 

Latest Videos

ವಾಹನಗಳ ಪ್ರಮುಖ ಬಿಡಿಭಾಗಗಳಿಗೆ ಟ್ರಂಪ್‌ ಶೇ.25ರಷ್ಟು ತೆರಿಗೆ: ಹಲವು ಭಾರತೀಯ ಕಂಪನಿಗಳಿಗೆ ಸಂಕಷ್ಟ

ಭಾರತವು ಜಗತ್ತಿನ ಆ ದೇಶಗಳಲ್ಲಿ ಒಂದು
ಭಾರತವು ಜಗತ್ತಿನ ಅತಿ ಹೆಚ್ಚು ಟ್ಯಾರಿಫ್ ವಿಧಿಸುವ ದೇಶಗಳಲ್ಲಿ ಒಂದಾಗಿದೆ.  ಆದರೆ ಪ್ರಧಾನಿ ಮೋದಿ ಬಹಳ ಚಾಣಾಕ್ಷರು. ನಮ್ಮ ಮಾತುಕತೆ ಬಹಳ ಚೆನ್ನಾಗಿತ್ತು. ಜೊತೆ ಉಭಯ ದೇಶಗಳಿಗೂ ಫಲಪ್ರದವಾಗಿದೆ.  ಇದರಿಂದ ಭಾರತ ಮತ್ತು ಅಮೆರಿಕದ ಸಂಬಂಧಗಳು ಗಟ್ಟಿಯಾಗಿರುತ್ತವೆ ಎಂದು ನನಗೆ ನಂಬಿಕೆ ಇದೆ ಎಂದಿದ್ದಾರೆ. ನಿಮ್ಮ ಬಳಿ ಅತ್ಯುತ್ತಮ ಪ್ರಧಾನ ಮಂತ್ರಿ ಇದ್ದಾರೆ ಮತ್ತು ಭಾರತ-ಅಮೆರಿಕ ನಡುವಿನ ಟ್ಯಾರಿಫ್ ಉತ್ತಮ ಫಲಿತಾಂಶ ನೀಡುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. 
 
ಟ್ಯಾರಿಫ್ ಕುರಿತು ಟ್ರಂಪ್ ಮಾತು
ಡೊನಾಲ್ಡ್ ಟ್ರಂಪ್ ಗುರುವಾರ ಓವಲ್ ಆಫೀಸ್‌ನಿಂದ ಒಂದು ಮಹತ್ವದ ಘೋಷಣೆ ಮಾಡುತ್ತಾ ಎಲ್ಲಾ ಆಮದು ವಾಹನಗಳ ಮೇಲೆ 25 ಪ್ರತಿಶತ ಟ್ಯಾರಿಫ್ ವಿಧಿಸುವುದಾಗಿ ಘೋಷಿಸಿದರು. ಇದು ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಒಂದು ದೊಡ್ಡ ಹೆಜ್ಜೆ ಎಂದು ಟ್ರಂಪ್ ಹೇಳಿದರು. ಇದಕ್ಕೂ ಮೊದಲು, ಭಾರತವು ಅಮೆರಿಕದ ಮೇಲೆ ಅತಿ ಹೆಚ್ಚು ಟ್ಯಾರಿಫ್ ವಿಧಿಸುತ್ತದೆ ಮತ್ತು ವ್ಯಾಪಾರ ಮಾಡಲು ಇದು ಕಷ್ಟಕರವಾದ ಸ್ಥಳ ಎಂದು ಆರೋಪಿಸಿದ್ದರು. ಫೆಬ್ರವರಿಯಲ್ಲಿ, ಟ್ರಂಪ್ ಅವರು ಭಾರತ ಮತ್ತು ಚೀನಾದಂತಹ ದೇಶಗಳ ಮೇಲೆ ಪರಸ್ಪರ ಟ್ಯಾರಿಫ್ ವಿಧಿಸುವುದಾಗಿ ಘೋಷಿಸಿದ್ದರು, ಜೊತೆಗೆ ಅಮೆರಿಕವು ಆ ದೇಶಗಳು ಅಮೆರಿಕದ ಉತ್ಪನ್ನಗಳ ಮೇಲೆ ವಿಧಿಸುವ ಟ್ಯಾರಿಫ್ ಆಧಾರದಲ್ಲಿ ಪ್ರತಿಯಾಗಿ ಟ್ಯಾರಿಫ್ ವಿಧಿಸಲಾಗುತ್ತದೆ ಎಂದಿದ್ದರು.

ಭಾರತದಲ್ಲಿನ ಚುನಾವಣಾ ವ್ಯವಸ್ಥೆ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೆಚ್ಚುಗೆ
 

vuukle one pixel image
click me!