
ರಷ್ಯಾ(ಜು.06): ನಾಪತ್ತೆಯಾಗಿದ್ದ ರಷ್ಯಾದ AN-26 ವಿಮಾನ ಸಮುದ್ರದಲ್ಲಿ ಪತನವಾಗಿರುವುದಾಗಿ ಮಾಹಿತಿಗಳು ಲಭ್ಯವಾಗಿದೆ. ರಷ್ಯಾದ ಪೂರ್ವಭಾಗದ ಪೆಟ್ರೋಪವ್ಲೋಸ್ಕನಿಂದ ಟೇಕ್ ಆಫ್ ಆಗಿದ್ದ ವಿಮಾನ ಕಮ್‌ಚಾಟ್ಕಕಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ AN-26 ವಿಮಾನ ರೇಡಾರ್ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿತ್ತು. ಇದೀಗ ಈ ವಿಮಾನ ಸಮುದ್ರದಲ್ಲಿ ಪತನವಾಗಿದ್ದು, ವಿಮಾದಲ್ಲಿದ್ದ 28 ಮಂದಿ ಕಣ್ಮರೆಯಾಗಿದ್ದಾರೆ ಎಂಬ ಮಾಹಿತಿಯನ್ನು ರಷ್ಯಾ ಮಾಧ್ಯಮಗಳು ಬಹಿರಂಗಪಡಿಸಿದೆ.
ರಷ್ಯಾದ 29 ಪ್ರಯಾಣಿಕರಿದ್ದ ವಿಮಾನ ಏಕಾಏಕಿ ಕಣ್ಮರೆ!..
ಕಮ್‌ಚಾಟ್ಕದಲ್ಲಿರುವ ಒಕೋಸ್ಕ್ ಸಮುದ್ರ ತೀರದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿದೆ. ಒಕೋಸ್ಕ್ ಸಮುದ್ರ ತೀರದಲ್ಲಿರುವ ವಿಮಾನ ನಿಲ್ದಾಣವಾಗಿದ್ದು, ಈ ನಿಲ್ದಾಣದಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಸಮುದ್ರ ತೀರದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿರುವುದಾಗಿ ಮಾಧ್ಯಮ ವರದಿ ಮಾಡಿದೆ.
ವಿಮಾನದಲ್ಲಿ 6 ಸಿಬ್ಬಂದಿ, 22 ಪ್ರಯಾಣಿಕರಿದ್ದರು. ಸಮುದ್ರ ತೀರದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿದೆ. ಸಮುದ್ರದ ಕೆಲ ಭಾಗಗಳು ತೀರದಲ್ಲಿ ಪತ್ತೆಯಾಗಿವೆ. ಆದರೆ ವಿಮಾನದಲ್ಲಿನ ಪ್ರಯಾಣಿಕರ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಕಮ್‌ಚಾಟ್ಕಕಿ ಗವರ್ನರ್ ವಾಡಿಮೀರ್ ಸೊಲ್ಡೊವ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ