ಬ್ರಿಟನ್‌ನಲ್ಲಿದೆ ಪಾಕ್ ಮೂಲದ ಲೈಂಗಿಕ ಶೋಷಕರ ಗ್ಯಾಂಗ್; ಸಂಸದನ ಶಾಕಿಂಗ್ ವರದಿಯಲ್ಲೇನಿದೆ?

Kannadaprabha News   | Kannada Prabha
Published : Jun 03, 2026, 07:40 AM IST
Pakistani gang in London

ಸಾರಾಂಶ

ಬ್ರಿಟಿಷ್ ಸಂಸದ ರೂಪರ್ಟ್ ಲೋವ್ ಅವರು ಪಾಕಿಸ್ತಾನ ಮೂಲದ ಗ್ಯಾಂಗ್‌ನಿಂದ ಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಆಘಾತಕಾರಿ ವರದಿಯನ್ನು ಬಹಿರಂಗಪಡಿಸಿದ್ದಾರೆ. ಅಪ್ರಾಪ್ತೆಯೊಬ್ಬಳ ಮೇಲೆ 600-700 ಮಂದಿ ಅತ್ಯಾ೧ಚಾರ ಎಸಗಿದ್ದು, ಈ ಜಾಲವು ದಶಕಗಳಿಂದ ಬ್ರಿಟನ್‌ನಾದ್ಯಂತ ಸಕ್ರಿಯವಾಗಿದೆ ಎಂದು ವರದಿ ಹೇಳಿದೆ.

ಲಂಡನ್‌ (ಜೂ.3) ಪಾಕಿಸ್ತಾನ(Pakistan) ಮೂಲದ ಟ್ಯಾಕ್ಸಿ ಚಾಲಕರು(Taxi Driver) ಮತ್ತು ಮಾರುಕಟ್ಟೆ ವ್ಯಾಪಾರಿಗಳನ್ನೊಳಗೊಂಡ ಗ್ಯಾಂಗ್‌ ಬ್ರಿಟನ್‌ನಾದ್ಯಂತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ(S *xual abuse of children) ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಅಪ್ರಾಪ್ತೆಯೊಬ್ಬಳ ಮೇಲೆ 600-700 ಜನ ಅತ್ಯಾ೧ಚಾರ ಎಸಗಿದ ಆಘಾತಕಾರಿ ವಿಷಯವನ್ನು ಬ್ರಿಟಿಷ್‌ ಸಂಸದ ರೂಪರ್ಟ್ ಲೋವ್(British MP Rupert Lowe) ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ತಾವು ವೈಯಕ್ತಿಕವಾಗಿ ನಡೆಸಿದ ಕನಿಷ್ಠ 85 ಪ್ರಕರಣಗಳ ತನಿಖಾ ವರದಿಯನ್ನು ಸಂಸತ್ತಿನಲ್ಲಿ ಹಂಚಿಕೊಂಡಿರುವ ಅವರು, ಸಂತ್ರಸ್ತರ ಮೇಲಿನ ತೀವ್ರ ಲೈ೦ಗಿಕ ಶೋಷಣೆ, ಅಪ್ರಾಪ್ತರ ಗರ್ಭಧಾರಣೆ, ಬೆದರಿಕೆ, ಪೊಲೀಸ್‌ ದುಷ್ಕೃತ್ಯ ಹಾಗೂ ಸಾಂಸ್ಥಿಕ ವೈಫಲ್ಯದ ಕುರಿತು ಸಾಕ್ಷ್ಯಗಳ ಸಮೇತ ಮಾಹಿತಿ ನೀಡಿದ್ದಾರೆ.

ಅಪ್ರಾಪ್ತೆ ಮೇಲೆ 600-700 ಜನರಿಂದ ಅತ್ಯಾ೧ಚಾರ:

ಸಂಸದ ಲೋವ್ ಅತ್ಯಾ೧ಚಾರ ಸಂತ್ರಸ್ತೆಯರ ಹೇಳಿಕೆಗಳನ್ನು ವರದಿ ಮಾಡಿದ್ದಾರೆ. ‘ನಾನು 13 ವರ್ಷದವಳಿದ್ದಾಗ ಲೈಂಗಿಕ ದೌರ್ಜನ್ಯ ಆರಂಭವಾಯಿತು. 600-700 ಜನ 3 ವರ್ಷಗಳ ಕಾಲ ನನ್ನ ಮೇಲೆ ಅತ್ಯಾ೧ಚಾರ ಎಸಗಿದ್ಧಾರೆ’ ಎಂದು ಯುವತಿಯೊಬ್ಬಳು ಹೇಳಿಕೊಂಡಿದ್ದಾಳೆ. ‘ನನ್ನ ಯೋನಿಯಿಂದ ರಕ್ತಸ್ರಾವವಾಗುತ್ತಿತ್ತು. ಕುಳಿತುಕೊಳ್ಳಲು ಸಾಧ್ಯವಾಗದಷ್ಟು ಊದಿಕೊಂಡಿತ್ತು. ಪಾನೀಯದಲ್ಲಿ ಮದ್ಯ ಬೆರೆಸಿ ನನಗೆ ಕುಡಿಸಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿಗೆ ಹೇಳಿದೆ. ಅವರು ಯಾವುದೇ ಪ್ರಶ್ನೆಗಳನ್ನು ಕೇಳಲಿಲ್ಲ. ಮಾತ್ರೆಗಳನ್ನು ನೀಡಿ ನನ್ನನ್ನು ಬಿಡುಗಡೆ ಮಾಡಿದರು.

ನನಗೆ ಆಗ 15 ವರ್ಷ ವಯಸ್ಸಾಗಿತ್ತು’ ಎಂದು ಇನ್ನೊಬ್ಬ ಸಂತ್ರಸ್ತೆ ತಿಳಿಸಿದ್ದಾರೆ.‘ನನ್ನ ಸುತ್ತಲೂ ಪುರುಷರಿದ್ದರು. ಅವರು ವಿಡಿಯೋ ಚಿತ್ರೀಕರಿಸುತ್ತಾ ನಗುತ್ತಿದ್ದರು. ನಾಯಿ ನಿಜವಾಗಿಯೂ ನನ್ನ ಮೇಲೆ ಅತ್ಯಾ೧ಚಾರ ಮಾಡಬಹುದೇ ಅಥವಾ ಇಲ್ಲವೇ ಎಂದು ಅವರು ಪಂದ್ಯ ಕಟ್ಟಿದ್ದರು. ಕೊನೆಗೆ ನಾಯಿ ನನ್ನ ಮೇಲೆ ಅತ್ಯಾ೧ಚಾರ ಮಾಡಿತು’ ಎಂದು ಮತ್ತೊಬ್ಬ ಮಹಿಳೆ ಭಯಾನಕ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಈ ಗ್ಯಾಂಗ್ 25 ವರ್ಷಗಳ ಹಿಂದಿನಿಂದ ಸಕ್ರಿಯ

1997ರ ಅವಧಿಯಿಂದಲೇ ಈ ಗ್ಯಾಂಗ್‌ ಸಕ್ರಿಯವಾಗಿದೆ. 2010ರಲ್ಲಿ ಬಾಲಕಿಯರ ಮೇಲಿನ ಅತ್ಯಾ೧ಚಾರ ಆರೋಪದಲ್ಲಿ ಐವರು ಪಾಕಿಸ್ತಾನೀಯರನ್ನು ಬಂಧಿಸಲಾಯಿತು. ಆ ಬಳಿಕ ಇವರ ಜಾಲ ಬೆಳಕಿಗೆ ಬಂತು. ಬ್ರಿಟನ್‌ನ ಸುಮಾರು 50 ನಗರಗಳಲ್ಲಿ ಇವರ ಜಾಲ ಸಕ್ರಿಯವಾಗಿದೆ ಎನ್ನಲಾಗಿದೆ. 1997ರಿಂದ 2013ರ ಅವಧಿಯಲ್ಲಿ 1,400 ಮಕ್ಕಳ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು 2014ರಲ್ಲಿ ಪ್ರೊ. ಅಲೆಕ್ಸಿಸ್‌ ಜೈ ಅವರು ನೀಡಿದ ವರದಿ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಇರಾನ್; ಕಾಫಿಗೆ 40 ಸಾವಿರ, ಹೇರ್ ಕಟಿಂಗ್‌ಗೆ 1 ಲಕ್ಷ
ಫೆಡರಲ್ ಕೋರ್ಟ್ ಆವರಣದಲ್ಲಿ ಪೊಲೀಸ್ ಜೊತೆ ಮಹಿಳಾ ಜಡ್ಜ್ ಸರಸ, ಸುಳ್ಳು ಹೇಳಿದ್ರೂ ಸಿಕ್ಕಿತು ಸಾಕ್ಷ್ಯ