ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಇರಾನ್; ಕಾಫಿಗೆ 40 ಸಾವಿರ, ಹೇರ್ ಕಟಿಂಗ್‌ಗೆ 1 ಲಕ್ಷ

Published : Jun 03, 2026, 07:17 AM IST
Iran

ಸಾರಾಂಶ

ಇಸ್ರೇಲ್ ಮತ್ತು ಅಮೆರಿಕದೊಂದಿಗಿನ ಸಂಘರ್ಷ ಹಾಗೂ ಆರ್ಥಿಕ ನಿರ್ಬಂಧಗಳಿಂದಾಗಿ ಇರಾನ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ದೇಶದ ಹಣದುಬ್ಬರ ದರವು ಎರಡನೇ ವಿಶ್ವಯುದ್ಧದ ಸಮಯದ ಮಟ್ಟವಾದ ಶೇ.77ಕ್ಕೆ ಏರಿದ್ದು, ಅಲ್ಲಿನ ಕರೆನ್ಸಿ 'ರಿಯಾಲ್‌' ಮೌಲ್ಯ ದಾಖಲೆಯ ಕುಸಿತ ಕಂಡಿದೆ.

ದುಬೈ: ಹಣದುಬ್ಬರ ದರ ಶೇ.6 ಮೀರಬಾರದು ಎಂದು ಭಾರತ ನೋಡಿಕೊಳ್ಳುತ್ತಿದೆ. ಅಷ್ಟಾದರೂ ದೇಶದ ಜನ ಬೆಲೆ ಏರಿಕೆ ಹೊಡೆತಕ್ಕೆ ಸಿಲುಕಿದ್ದಾರೆ. ಇಂಥದ್ದರಲ್ಲಿ ಇಸ್ರೇಲ್ ಹಾಗೂ ಅಮೆರಿಕದ ಜತೆಗಿನ ಸಂಘರ್ಷದಿಂದಾಗಿ ತತ್ತರಿಸುತ್ತಿರುವ ಇರಾನ್ ಹಣದುಬ್ಬರ ಈಗ ಶೇ.77ಕ್ಕೆ ಎರಿದೆ. ಇದು 2ನೇ ವಿಶ್ವಯುದ್ಧ ಕಾಲದಲ್ಲಿ ದೇಶ ಎದುರಿಸಿದ್ದ ಹಣದುಬ್ಬರಕ್ಕೆ ಸಮ.

ಮಧ್ಯಪ್ರಾಚ್ಯ ದೇಶದಲ್ಲೀಗ ವಿಶ್ವಯುದ್ಧ 2ರ ಕಾಲದ ಹಣದುಬ್ಬರ

ಯುದ್ಧ ಹಾಗೂ ಆರ್ಥಿಕ ನಿರ್ಬಂಧಗಳಿಂದಾಗಿ ಅಲ್ಲಿನ ಕರೆನ್ಸಿ ‘ರಿಯಾಲ್‌’ ಮೌಲ್ಯ ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ ಬಂದಿದೆ. 2015ರಲ್ಲಿ ಡಾಲರ್‌ ಎದುರು 32,000 ರಿಯಾಲ್‌ನಷ್ಟಿದ್ದ ಇರಾನಿಯನ್‌ ಕರೆನ್ಸಿ ಮೌಲ್ಯ ಈಗ 13.5 ಲಕ್ಷ ರಿಯಾಲ್‌ಗೆ ಏರಿದೆ. ತಂಬಾಕು, ಟ್ಯಾಕ್ಸಿ ದರ, ಸಂಪರ್ಕ ಸಾಧನ ಸೇರಿದಂತೆ ಅಗತ್ಯ ವಸ್ತು/ಸೇವೆಗಳ ದರ ಒಂದೇ ವರ್ಷದಲ್ಲಿ ಶೇ.113.8ರಷ್ಟೇರಿದೆ.

1942ರ ಬಳಿಕ ಇದೇ ಮೊದಲು

1942ರ ಎರಡನೇ ವಿಶ್ವಯುದ್ಧದ ವೇಳೆ ಇರಾನ್‌ನಲ್ಲಿ ಭಾರೀ ಹಣದುಬ್ಬರ ಉಂಟಾಗಿತ್ತು. ಹಲವು ಮಂದಿ ಹಸಿವೆಯಿಂದಲೇ ಆಗ ಮೃತಪಟ್ಟಿದ್ದರು. ಇದೀಗ ಅದೇ ಸ್ಥಿತಿ ನಿರ್ಮಾಣವಾಗುವ ಆತಂಕ ಶುರುವಾಗಿದೆ. ಇರಾನ್‌ನ ತೈಲ ಉದ್ದಿಮೆ ಭಾರೀ ಹಾನಿಗೊಳಗಾಗಿದೆ.

ಇದೀಗ 1 ಕಪ್‌ ಟೀಗೆ ಇರಾನ್‌ನಲ್ಲಿ 20 ಸಾವಿರ ಇರಾನಿಯನ್‌ ರಿಯಾಲ್‌, ಬೆಳಗ್ಗಿನ ಸಾಮಾನ್ಯ ಉಪಹಾರಕ್ಕೆ 50 ಸಾವಿರ ರಿಯಾಲ್‌ ದರವಿದೆ. ಒಂದು ರಿಯಾಲ್ ಎಂದರೆ ಭಾರತದಲ್ಲಿ 0.000071 ರು.ಗೆ ಸಮ.

ಈ ಹಿಂದೆ ಇರಾನ್‌ನಾದ್ಯಂತ ಹಣದುಬ್ಬರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿ ಪ್ರತಿಭಟನೆಗೆ ಕಾರಣವಾಗಿತ್ತು. ಜನವರಿಯಲ್ಲಿ ಇದೇ ರೀತಿ ಪ್ರತಿಭಟನೆಗಿಳಿದ 7,000 ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಪರಿಸ್ಥಿತಿ ಕೆಲ ದಿನ ಇದೇ ರೀತಿ ಮುಂದುವರೆದರೆ ಜನ ಮತ್ತೆ ಬೀದಿಗಿಳಿಯುವ ಸಾಧ್ಯತೆ ಹೆಚ್ಚಾಗಿದೆ.

ಇರಾನ್‌ನಲ್ಲಿ ಯಾವ್ಯಾವ ವಸ್ತುಗಳ ದರ ಎಷ್ಟಿದೆ?

ವಸ್ತುಬೆಲೆ
1 ಲೀ. ಪೆಟ್ರೋಲ್‌10,000 ರಿಯಾಲ್
1 ಲೀ. ಡೀಸೆಲ್‌5,000  ರಿಯಾಲ್
ಸಿಟಿ ಬಸ್‌ ಪ್ರಯಾಣ5,000 ರಿಯಾಲ್
ಮೆಟ್ರೋ ಪ್ರಯಾಣ5,000 ರಿಯಾಲ್
1.5 ಲೀ. ನೀರು10,000 ರಿಯಾಲ್
ಕಾಫಿ40,000 ರಿಯಾಲ್‌
ಹೇರ್ ಕಟ್‌1,00,000  ರಿಯಾಲ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಫೆಡರಲ್ ಕೋರ್ಟ್ ಆವರಣದಲ್ಲಿ ಪೊಲೀಸ್ ಜೊತೆ ಮಹಿಳಾ ಜಡ್ಜ್ ಸರಸ, ಸುಳ್ಳು ಹೇಳಿದ್ರೂ ಸಿಕ್ಕಿತು ಸಾಕ್ಷ್ಯ
ವಿದೇಶದಲ್ಲಿ ಭಾರತದ ಮಾನ ಕಳೆದ ಮಹಿಳೆ: ಜಪಾನ್ ಜೈಲು ಪಾಲಾಗುವುದರಿಂದ ಬಚಾವ್ ಮಾಡಿದ್ದು ಇದೊಂದೇ ಕಾರಣ!