
ಅಟ್ಲಾಂಟಾ (ಜೂ.02) ಕೋರ್ಟ್‌ಗೆ ಪ್ರತಿ ದಿನ ಹಲವರು ನ್ಯಾಯ ಕೇಳಿಕೊಂಡು ಆಗಮಿಸುತ್ತಾರೆ. ನ್ಯಾಯದೇವತೆ ದೇಗುಲ ಎಂದೇ ಗುರುತಿಸಿಕೊಂಡಿರುವ ಅಮೆರಿಕದ ಫೆಡರಲ್ ಕೋರ್ಟ್ ಆವರಣದಲ್ಲಿ ನಡೆಯಬಾರದ್ದು ನಡೆದು ಹೋಗಿದೆ. ಫೆಡರಲ್ ಕೋರ್ಟ್‌ನ ಮಹಿಳಾ ಜಡ್ಜ್ ಕೋರ್ಟ್ ಛೇಂಬರ್‌ನಲ್ಲಿ ಪುರುಷ ಪೊಲೀಸ್ ಅಧಿಕಾರಿ ಜೊತೆ ಸರಸವಾಡಿದ್ದಾರೆ. ಬಳಿಕ ಸುಳ್ಳು ಹೇಳಿದ್ದಾರೆ. ಆದರೆ ಘಟನೆ ಜಗಜ್ಜಾಹೀರಾಗಿದ್ದು ಮಾತ್ರವಲ್ಲ, ಆರೋಪ ಸಾಬೀತಾಗಿದೆ. ಆದರೆ ಈ ಘಟನೆ ವಿವಾದಕ್ಕೆ ಕಾರಣಾಗಿದ್ದು ತೀರ್ಪಿನ ಬಳಿಕ. ನ್ಯಾಯದೇಗುಲದಲ್ಲಿ ತಪ್ಪು ಎಸೆಗಿದರೂ ಮಹಿಳಾ ಜಡ್ಜ್‌ಗೆ ಯಾವುದೇ ಶಿಕ್ಷೆ ನೀಡಿಲ್ಲ, ಅಮಾನತು ಮಾಡಿಲ್ಲ, ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಲಾಗಿದೆ. ಇದು ವಿವಾದಕ್ಕೆ ಗುರಿಯಾಗಿದೆ.
ಅಲಬಾಮಾ, ಫ್ಲೋರಿಡಾ ಮತ್ತು ಜಾರ್ಜಿಯಾ ರಾಜ್ಯಗಳನ್ನು ಒಳಗೊಂಡಿರುವ '11ನೇ ಜುಡಿಷಿಯಲ್ ಸರ್ಕ್ಯೂಟ್' ವ್ಯಾಪ್ತಿಯ ಫೆಡರಲ್ ಕೋರ್ಟ್‌ನಲ್ಲಿ ಈ ಘಟನೆ ನಡೆದಿದೆ. ಕೆಲಸದ ಅವಧಿಯಲ್ಲೇ ಛೇಂಬರ್ ಒಳಗೆ ಮಂಚದಾಟ ನಡೆದಿದೆ. ಬಳಿಕ ಮಹಿಳಾ ಜಡ್ಜ್ ಸುಳ್ಳು ಹೇಳಿ ಪ್ರಕರಣದ ದಾರಿ ತಪ್ಪಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ.
ನ್ಯಾಯಾಧೀಶರು ಮತ್ತು ಸಮವಸ್ತ್ರದಲ್ಲಿದ್ದ ಉನ್ನತ ಪೊಲೀಸ್ ಅಧಿಕಾರಿ ಕೆಲಸದ ಅವಧಿಯಲ್ಲೇ ದೈಹಿಕ ಸಂಪರ್ಕ ಶುರುಮಾಡಿದ್ದಾರೆ. ಮಧ್ಯಾಹ್ನ ಊಟದ ಸಮಯದಲ್ಲಿ ಹಲವು ಬಾರಿ ಇವರಿಬ್ಬರು ದೈಹಿಕ ಸಂಬಂಧದಲ್ಲಿ ತೊಡಗುತ್ತಿದ್ದರು. ಪಕ್ಕದಲ್ಲಿರುವ ಕ್ಲರ್ಕ್ ಹಾಗೂ ಇತರ ಸಿಬ್ಬಂದಿಗಳಿಗೆ ಕೇಳಿಸಿದ ಶಬ್ದದಿಂದ ಬೇಸತ್ತು ಮುಖ್ಯ ನ್ಯಾಯಾಧೀಶರಿಗೆ ದೂರು ನೀಡಿದ್ದಾರೆ. ಹೀಗಾಗಿ ತನಿಖೆ ಆರಂಭಗೊಂಡಿದೆ. 2025ರ ಸೆಪ್ಟೆಂಬರ್ ತಿಂಗಳಲ್ಲಿ ದೂರು ನೀಡಲಾಗಿತ್ತು.
ಹೀಗೆ ನಡೆದೇ ಇಲ್ಲ, ಇದು ವೈಯುಕ್ತಿಕ ದ್ವೇಷದಿಂದ ಸಲ್ಲಿಸಿದ ದೂರು ಎಂದು ಮಹಿಳಾ ಜಡ್ಜ್ ಹೇಳಿದ್ದರು. ಆದರೆ ಸಿಸಿಟಿವಿ ದೃಶ್ಯಗಳು ಸಾಕ್ಷ್ಯ ನುಡಿದಿತ್ತು. ಇತ್ತ ಹಲವು ಸಿಬ್ಬಂದಿಗಳು ತಮಗೆ ಕೇಳಿಸಿದ ಶಬ್ದ, ನಡೆ, ಪೊಲೀಸ್ ಅಧಿಕಾರಿ ಭೇಟಿ ಸಾಕ್ಷ್ಯ ನುಡಿದಿದ್ದಾರೆ. ಕೊನೆಗೆ ಮಹಿಳಾ ನ್ಯಾಯಾಧೀಶೆ ಸತ್ಯ ಒಪ್ಪಿಕೊಂಡಿದ್ದಾರೆ. ಇತ್ತ ಅಟ್ಲಾಂಟ ಪೊಲೀಸ್ ಅಧಿಕಾರಿ ಜಡ್ಜ್ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡ ಕಾರಣ ಅಟ್ಲಾಂಟ ಪೊಲೀಸರು ಆತಂರಿಕ ತನಿಖೆ ನಡೆಸಿದ್ದಾರೆ.
ಮುಖ್ಯ ನ್ಯಾಯಾಧೀಶೆ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. ಆದರೆ ಮಹಿಳಾ ಜಡ್ಜ್‌ಗೆ ಯಾವುದೇ ಶಿಕ್ಷೆ ನೀಡಿಲ್ಲ. ಹುದ್ದೆಯಿಂದ ಅಮಾನತು ಮಾಡಿಲ್ಲ. ಘಟನೆ ಖಂಡಿಸಿ ಮಹಿಳಾ ಜಡ್ಜ್ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಲಾಗಿದೆ. ಆದರೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ. ಮಹಿಳಾ ಜಡ್ಜ್ ಮುಖ್ಯ ನ್ಯಾಯಾಧೀಶೆ ಹುದ್ದೆಗೆ ಏರುವಂತಿಲ್ಲ. ನ್ಯಾಯಾಂಗ ಸಮಿತಿಗಳಲ್ಲಿ ಪಾಲ್ಗೊಳ್ಳುವಂತಿಲ್ಲ. 6 ಕ್ಲರ್ಕ್‌ಗಳಿಗೆ ಕ್ಷಮಾಪಣ ಪತ್ರ ಬರೆಯಬೇಕು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ