
ಇಸ್ಲಾಮಾಬಾದ್ (ಜೂ.2): ಮಧ್ಯಪ್ರಾಚ್ಯ ಸಂಘರ್ಷ(Middle east conflict)ದ ಬಳಿಕ ತೀವ್ರ ಇಂಧನ ಹಾಗೂ ವಿದ್ಯುತ್ ಸಮಸ್ಯೆ ಎದುರಿಸುತ್ತಿರುವ ಪಾಕಿಸ್ತಾನ(Pakistan), ಇದೀಗ ರಾಜಧಾನಿ ಇಸ್ಲಾಮಾಬಾದ್(Islamabad) ಸೇರಿ ಹಲವು ಕಡೆ ಶಾಪಿಂಗ್ ಮಾಲ್, ಮತ್ತಿತರ ಅಂಗಡಿಗಳನ್ನು ರಾತ್ರಿ 8 ಗಂಟೆಗೆ ಬಂದ್ ಮಾಡಲು ಆದೇಶಿಸಿದೆ.
ಈ ಮೊದಲು ಅಮೆರಿಕ-ಇರಾನ್ ಕದನ(US-Iran war) ತೀವ್ರಗೊಂಡಾಗ ಇದೇ ರೀತಿಯ ಕ್ರಮಗಳನ್ನು ಪಾಕ್ ಜಾರಿ ಮಾಡಿತ್ತಾದರೂ ನಂತರ ಬಕ್ರೀದ್ ವೇಳೆ ಕೈಬಿಟ್ಟಿತ್ತು. ಇದೀಗ ಪುನಃ ಅದೇ ಮಾದರಿಯ ಕ್ರಮಗಳಿಗೆ ಆದೇಶಿಸಿದೆ.
ಅದರಂತೆ ಶಾಪಿಂಗ್ ಮಾಲ್‌ಗಳು, ಮಾರ್ಕೆಟ್‌ಗಳು, ಅಂಗಡಿಗಳನ್ನು 8 ಗಂಟೆಗೇ ಬಂದ್ ಮಾಡಬೇಕು. ಬೇಕರಿಗಳು, ರೆಸ್ಟೋರೆಂಟ್‌ಗಳು, ದಿನಸಿ ಅಂಗಡಿಗಳು, ಆಹಾರದ ಮಳಿಗೆಗಳು 10 ಗಂಟೆವರೆಗೆ ತೆರೆಯಲು ಅವಕಾಶವಿದೆ. ಮದುವೆ ಸಭಾಂಗಣಗಳು ಮತ್ತು ಇತರ ಕಾರ್ಯಕ್ರಮ ನಡೆಯುವ ಸ್ಥಳಗಳು ರಾತ್ರಿ 10 ಗಂಟೆಗೆ ಮುಚ್ಚಬೇಕು. ತುರ್ತು ಸೇವೆಗಳಾದ ಮೆಡಿಕಲ್, ಆಸ್ಪತ್ರೆಗಳು, ಪೆಟ್ರೋಲ್ ಪಂಪ್‌ಗಳು, ಐಟಿ ಕಂಪನಿಗಳಿಗೆ ಈ ನಿರ್ದೇಶನದಿಂದ ವಿನಾಯ್ತಿ ಇರಲಿದೆ.
ಮಧ್ಯಪ್ರಾಚ್ಯ ಸಂಘರ್ಷದಿಂದ ಪೆಟ್ರೋಲ್, ಡೀಸೆಲ್ ದರ ಏರಿಕೆ ಹಾಗೂ ವಿದ್ಯುತ್ ಸಮಸ್ಯೆಯಿಂದಾಗಿ ಪಾಕ್ ಸರ್ಕಾರ ಕಂಗಾಲಾಗಿದೆ. ರಾತ್ರಿ ವೇಳೆ ವಿದ್ಯುತ್ ಬಳಕೆ ಹೆಚ್ಚಿದರೆ ವೆಚ್ಚ ಸರ್ಕಾರಕ್ಕೆ ವೆಚ್ಚ ಹೆಚ್ಚಾಗುತ್ತದೆ. ಹೀಗಾಗಿ ವೆಚ್ಚ ಕಡಿತದಂಥ ಮಾರ್ಗಗಳತ್ತ ಮುಂದಾಗಿದೆ. ಇದರ ಭಾಗವಾಗಿ ಈ ಆದೇಶ ಹೊರಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ