
ವಾಷಿಂಗ್ಟನ್ (ಜೂ.2): ಸೊಳ್ಳೆಗಳಿಂದ ಮುಕ್ತಿಗೆ ಜಗತ್ತೇ ಯತ್ನಿಸುತ್ತಿರುವ ನಡುವೆ ಗೂಗಲ್ ಕಂಪನಿಯು 3.2 ಕೋಟಿ ಸೊಳ್ಳೆಗಳನ್ನು ಸೃಷ್ಟಿಸಿ ಬಿಡುಗಡೆ ಮಾಡಲು ಮುಂದಾಗಿದೆ. ವಿಚಿತ್ರವೆನಿಸುವ ಈ ಯೋಜನೆಯ ಉದ್ದೇಶ ಸೊಳ್ಳೆಗಳ ಸಂತತಿಯನ್ನು ನಿರ್ನಾಮ ಮಾಡುವುದೇ ಆಗಿದೆ.
ಕಂಪನಿಯು ರೋಗಕಾರಕ ಸೊಳ್ಳೆಗಳಿಂದ ಮುಕ್ತಿಗಾಗಿ ದಶಕದ ಹಿಂದೆ ‘ಡೀಬಗ್’ ಎಂಬ ಯೋಜನೆ ಆರಂಭಿಸಿದ್ದು, ಇದರ ಭಾಗವಾಗಿ ಫ್ಲೋರಿಡಾ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಕಳೆದ 2 ವರ್ಷಗಳಲ್ಲಿ 3.2 ಕೋಟಿ ಸೊಳ್ಳೆಗಳನ್ನು ಸೃಷ್ಟಿಸಿತ್ತು. ಈಗ ಅವುಗಳನ್ನು 2 ಹಂತದಲ್ಲಿ ಬಿಡುಗಡೆಗೆ ಅನುಮತಿಗಾಗಿ ಅಮೆರಿಕದ ಪರಿಸರ ಸಂರಕ್ಷಣಾ ಇಲಾಖೆಗೆ ಮನವಿ ಮಾಡಿದೆ.
ಈ ತಂತ್ರವನ್ನು ಈಗಾಗಲೇ ಸ್ಕ್ರೂವರ್ಮ ಎಂಬ ನೊಣದ ರೀತಿಯ ಜೀವಿಯ ಮೇಲೆ ಪ್ರಯೋಗ ಮಾಡಲಾಗಿದೆ.
ಗೂಗಲ್‌ನ ಸೊಳ್ಳೆಗಳಲ್ಲಿ ವೋಲ್ಬಾಚಿಯಾ ಪೈಪಿಯೆಂಟಿಸ್ ಬ್ಯಾಕ್ಟೀರಿಯಾ ಇರುತ್ತದೆ. ಇವುಗಳ ಜತೆಗಿನ ಸಂಭೋಗದಿಂದ ಹೆಣ್ಣುಸೊಳ್ಳೆಗಳಿಡುವ ಮೊಟ್ಟೆಗಳು ಒಡೆಯುವುದೇ ಇಲ್ಲ. ಹೀಗೆ ಕ್ರಮೇಣ ಸೊಳ್ಳೆಗಳ ಜನನವೇ ನಿಂತು ಅವು ನಿರ್ನಾಮವಾಗುತ್ತವೆ ಎಂಬುದು ಈ ಯೋಜನೆಯ ಲೆಕ್ಕಾಚಾರ.
ಇದಕ್ಕೆಂದು ಬಿಡುಗಡೆ ಮಾಡಲಾಗುವ 3.2 ಕೋಟಿ ಗಂಡು ಸೊಳ್ಳೆಗಳಿಂದ ಮನುಷ್ಯರಿಗೆ ಯಾವುದೇ ಅಪಾಯವಾಗದು. ಕಾರಣ ಕಚ್ಚುವುದು ಹೆಣ್ಣುಸೊಳ್ಳೆಗಳು ಮಾತ್ರ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ