MH370 ವಿಮಾನ ನಾಪತ್ತೆಯಲ್ಲ, ಸಾಮೂಹಿಕ ಹತ್ಯೆಗೆ ಪೈಲೆಟ್ ಝಾಹರಿ ಅಹಮ್ಮದ್ ನಡೆಸಿದ ಕೃತ್ಯ; ತಜ್ಞರು

By Suvarna NewsFirst Published Mar 10, 2024, 5:24 PM IST
Highlights

ಮಲೇಷಿಯಾ MH370 ವಿಮಾನ ನಾಪತ್ತೆಯಾಗಿ 10 ವರ್ಷಗಳು ಉರುಳಿದೆ. 239 ಪ್ರಯಾಣಿಕರನ್ನು ಹೊತ್ತ ಮಲೆಷಿಯಾ ವಿಮಾನಕ್ಕೆ ಏನಾಯಿತು ಅನ್ನೋ ಸಣ್ಣ ಸುಳಿವು ಪತ್ತೆಯಾಗಿಲ್ಲ. ಇದೀಗ ತಜ್ಞರು ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. 
 

ಮಲೆಷಿಯಾ(ಮಾ.10) ಮಲೇಷಿಯಾ ಏರ್‌ಲೈನ್ಸ್ MH370 ವಿಮಾನ ನಾಪತ್ತೆ ಪ್ರಕರಣದ ಕುರಿತು ಕೆಲ ಮಹತ್ವದ ಮಾಹಿತಿಗಳು ಬಹಿರಂಗವಾಗಿದೆ. 2014ರಲ್ಲಿ ನಾಪತ್ತೆಯಾದ ಈ ವಿಮಾನದ ಕುರಿತು ಮಲೇಷಿಯಾ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಎಜೆನ್ಸಿಗಳು ತನಿಖೆ ನಡೆಸಿದೆ. ಇದೀಗ ಪ್ರಕರಣಕ್ಕೆ 10 ವರ್ಷ ಕಳೆಯುತ್ತಿದ್ದಂತೆ ಸ್ಫೋಟಕ ಮಾಹಿತಿಯೊಂದು ಬಹಿರಂಗಾಗಿದೆ. ಬ್ರಿಟಿಷ್ ನಾಗರೀಕ ವಿಮಾನಯಾನ ತಜ್ಞ ಸಿಮೊನ್ ಹಾರ್ಡಿ ಈ ಮಾಹಿತಿ ಹಂಚಿಕೊಂಡಿದ್ದಾರೆ. MH370 ವಿಮಾನ ನಾಪತ್ತೆಯಲ್ಲ, ಇದು ಉದ್ದೇಶಪೂರ್ಕವಾಗಿ ನಡೆದ ಘಟನೆ. MH370 ವಿಮಾನದ ಪೈಲೆಟ್, ಕ್ಯಾಪ್ಟನ್ ಝಹಾರಿ ಅಹಮ್ಮದ್ ಶಾ ನಡೆಸಿದ ಸಾಮೂಹಿಕ ಹತ್ಯೆ ಎಂದು ಅಭಿಪ್ರಾಯಪಟ್ಟಿದ್ದಾರೆ.

239 ಪ್ರಯಾಣಿಕರನ್ನು ಹೊತ್ತ ಮಲೆಷಿಯಾ MH370 ವಿಮಾನ ಮಲೆಷಿಯಾದ ಕೌಲಾಲಾಂಪುರದಿಂದ ಚೀನಾದ ಬೀಜಿಂಗ್‌ ನತ್ತ ಹಾರಿತ್ತು. ಮಾರ್ಚ್ 8, 2014ರಲ್ಲಿ ಟೇಕ್ ಆಫ್ ಆದ ವಿಮಾನ, ಬೀಜಿಂಗ್‌ನಲ್ಲಿ ಲ್ಯಾಂಡ್ ಆಗಲಿಲ್ಲ. ಈ ಕುರಿತು ಹಲವು ತನಿಖೆಗಳು ಹೊರಬಂದಿದೆ. 2017ರಲ್ಲಿ ಮಲೆಷಿಯಾ ಸರ್ಕಾರ ತನಿಖೆಗೆ ಅಂತ್ಯಹಾಡಿತ್ತು. ಈ ತನಿಖಾ ವರದಿ, ಕಾಕ್‌ಪಿಟ್ ಸಂಭಾಷಣೆ ಸೇರಿದಂತೆ ಹಲವು ದಾಖಲೆಗಳನ್ನು ಸಂಗ್ರಹಿಸಿರುವ ಸಿಮೊನ್ ಹಾರ್ಡಿ ಇದು ಪೈಲೆಟ್ ನಡೆಸಿದ ಕೃತ್ಯ ಎಂದಿದ್ದಾರೆ.

227 ಜನರಿದ್ದ ವಿಮಾನ ನಾಪತ್ತೆಯಾಗಿ 10 ವರ್ಷ: ಮತ್ತೆ ಶೋಧಕ್ಕೆ ಮುಂದಾದ ಮಲೇಷ್ಯಾ

ವಿಮಾನ ಹಾರಾಟಕ್ಕೂ ಮೊದಲು ಪೈಲೆಟ್ ಝಹಾರಿ ಅಹಮ್ಮದ್ ಶಾ ಹೆಚ್ಚುವರಿ ಇಂಧನಕ್ಕೆ ಬೇಡಿಕೆ ಇಟ್ಟಿದ್ದ. ಇಷ್ಟೇ ಅಲ್ಲ ಕಾಕ್‌ಪಿಕ್‌ನಲ್ಲಿ ಹೆಚ್ಚುವರಿ ಆಕ್ಸಿನ್‌ಗೂ ಬೇಡಿಕೆ ಇಟ್ಟಿದ್ದ. ಹೆಚ್ಚುವರಿ ಇಂಧನ ಹಾಗೂ ಆಕ್ಸಿಜನ್ ಪಡೆದ ಪೈಲೆಟ್ ಹಾರಾಟಕ್ಕೂ ಮೊದಲೇ ಮಾಸ್ ಮರ್ಡರ್ ಪ್ಲಾನ್ ಮಾಡಿದ್ದ. ಟೇಕ್ ಆಫ್ ಆದ 38 ನಿಮಿಷಗಳ ಬಳಿಕ ಪೈಲೆಟ್ ವಿಮಾನ ಟ್ರಾಫಿಕ್ ಕಂಟ್ರೋಲ್ ರೂಂ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ್ದ ಈ ವೇಳೆ ವಿಮಾನ ಚೀನಾ ಸಮುದ್ರದ ಮೇಲೆ ಸಾಗುತ್ತಿತ್ತು ಎಂದು ಹಾರ್ಡಿ ಹಂತ ಹಂತವಾಗಿ ನಾಪತ್ತೆ ಪ್ರಕರಣದ ಮಾಹಿತಿ ನೀಡಿದ್ದಾರೆ. 

ಈ ಮಾತುಕತೆ ನಡೆದ ಕೆಲವೇ ನಿಮಿಷಗಳಲ್ಲಿ ವಿಮಾನ ಸಂಪರ್ಕ ಕಡಿದುಕೊಂಡಿದೆ. ರೇಡಾರ್ ಸಂಪರ್ಕಕ್ಕೆ ಸಿಗದ ವಿಮಾನವನನು ಪತ್ತೆ ಹಚ್ಚವು ಕಾರ್ಯ ಆಗಲೇ ಆರಂಭಗೊಂಡಿದೆ. ಆದರೆ ಯಾವುದು ಸುಳಿವು ಸಿಗಲಿಲ್ಲ. ದಕ್ಷಿಣ ಚೀನಾ ಸಮುದ್ರ ಹಾಗೂ ಅಂಡಮಾನ್ ಸಮುದ್ರಗಳ ನಡುವೆ ವಿಮಾನ ನಾಪತ್ತೆಯಾಗಿದೆ ಅನ್ನೋ ದಾಖಲೆಗಳ ಆಧರಿಸಿ ಶೋಧ ಕಾರ್ಯವೂ ನಡೆದಿದೆ ಎಂದು ಹಾರ್ಡಿ ಹೇಳಿದ್ದಾರೆ.

ತಾಂಜಾನಿಯಾದಲ್ಲಿ ಸಿಕ್ಕ ವಿಮಾನದ ರೆಕ್ಕೆಯು ಮಲೇಷ್ಯಾದ ಎಂಹೆಚ್370 ವಿಮಾನಕ್ಕೆ ಸೇರಿದ್ದು 

ಕೌಲಾಲಾಂಪುರದಿಂದ ಬೀಜಿಂಗ್ ಹೊರಟ ವಿಮಾನ ಕಂಟ್ರೋಲ್ ರೂಂ ಜೊತೆಗಿನ ಮಾತುಕತೆ ಬಳಿಕ ನಿಗದಿತ ಮಾರ್ಗದಿಂದ ಬೇರೆಡೆ ಹಾರಾಟ ಆರಂಭಿಸಿದೆ. ಉದ್ದೇಶಪೂರ್ವಕವಾಗಿ ರೇಡಾರ್ ಸಂಪರ್ಕ ಕಡಿದಕೊಂಡ ಪೈಲೆಟ್, ವಿಮಾನವನ್ನು ಪತನ ಮಾಡಿಸಿದ್ದಾನೆ ಎಂದ ಹಾರ್ಡಿ ಹೇಳಿದ್ದಾರೆ. ಹಾರ್ಡಿ ಹೇಳಿಕೆಯನ್ನು ಪೈಲೆಟ್ ಕುಟುಂಬಸ್ಥರು ಅಲ್ಲಗೆಳೆದಿದ್ದಾರೆ. 

click me!