
ಗಾಜಾ: ಹಮಾಸ್ ಉಗ್ರರ ಆಡಳಿತದ ಗಾಜಾಪಟ್ಟಿ ಪ್ರದೇಶದ ಮೇಲೆ ಏಕಕಾಲಕ್ಕೆ ಭೂ, ವೈಮಾನಿಕ ಮತ್ತು ಜಲದಾಳಿ ನಡೆಸಲು ಇಸ್ರೇಲ್ ಸಜ್ಜಾಗಿದೆ ಎಂಬ ವರದಿಗಳ ನಡುವೆಯೇ, ಇರಾನ್, ಲೆಬನಾನ್ ಬೆಂಬಲಿತ ಉಗ್ರ ಸಂಘಟನೆಯಾದ ಹಿಜ್ಬುಲ್ಲಾದ ಮುಖ್ಯಸ್ಥ ಸಯ್ಯದ್ ಹಸ್ಸನ್ ನಸ್ರಲ್ಲಾಹ್, ಇನ್ನೆರಡು ಕುಖ್ಯಾತ ಪ್ಯಾಲೆಸ್ತೀನ್ ಪರ ಉಗ್ರ ಸಂಘಟನೆಗಳಾದ ‘ಹಮಾಸ್’ ಮತ್ತು ‘ಇಸ್ಲಾಮಿಕ್ ಜಿಹಾದ್’ ಮುಖ್ಯಸ್ಥರ ಜೊತೆ ರಹಸ್ಯ ಸಭೆ ನಡೆಸಿದ್ದಾನೆ.
ಸಯ್ಯದ್ ಅಸ್ಸನ್, ಹಮಾಸ್‌ನ ಉಪನಾಯಕ ಸಲೇಹ್ ಅಲ್ ಅರೌರಿ ಮತ್ತು ಇಸ್ಲಾಮಿಕ್ ಜಿಹಾದ್‌ನ ನಾಯಕ ಜೈದ್ ಅಲ್ ನಖ್ಲಾ ಜೊತೆ ಸಭೆ ನಡೆಸುತ್ತಿರುವ ಫೋಟೋವನ್ನು ಇಸ್ರೇಲಿ ಮಾಧ್ಯಮವೊಂದು ಪ್ರಕಟಿಸಿದೆ. ಈ ಸಭೆಯಲ್ಲಿ ಗಾಜಾವನ್ನು ಗೆಲ್ಲಲು ಮತ್ತು ಪ್ಯಾಲೆಸ್ತೀನಿಯರ ಮೇಲೆ ನಡೆದ ದಾಳಿಗೆ ಕೈಗೊಳ್ಳಬೇಕಾದ ಸೂಕ್ತ ಕ್ರಮಗಳ ಬಗ್ಗೆ ಚರ್ಚಿಸಲಾಯಿತು ಎಂದು ಪತ್ರಿಕೆ ವರದಿ ಮಾಡಿದೆ.
ಅಪ್ಪಾ ನಾನು ಯಹೂದಿಗಳ ಕೊಂದೆ: ಹಮಾಸ್ ಉಗ್ರನ ಸಂಭಾಷಣೆ ವೈರಲ್
ಗಾಜಾ: ಅಪ್ಪಾ ನಾನು ನನ್ನ ಕೈಯಿಂದಲೇ ಎಷ್ಟು ಜನರನ್ನು ಕೊಲೆಗೈದಿದ್ದೇನೆ. ನಿಮ್ಮ ಮಗ ಯಹೂದಿಗಳನ್ನು ಕೊಂದಿದ್ದಾನೆ. ವಾಟ್ಸಾಪ್ ತೆಗೆದು ನೋಡಿ ನಾನು ಕೊಲೆ ಮಾಡಿದ್ದೇನೆ ನೋಡಿ. ಇದು ಅ.7 ರಂದು ಇಸ್ರೇಲ್ ಮೇಲೆ ಏಕಾಏಕಿ ದಾಳಿ ಮಾಡಿ ಹತ್ಯಾಕಾಂಡ ಮಾಡಿದ ಹಮಾಸ್ ಉಗ್ರನೋರ್ವ ತನ್ನ ತಂದೆಗೆ ಹೇಳಿರುವ ಮಾತು. ಅಂದಿನ ನಾಗರಿಕರ ಹತ್ಯಾಕಾಂಡದ ಬಳಿಕ ಒರ್ವ ಹಮಾಸ್ ಉಗ್ರ ಮತ್ತು ಆತನ ಕುಟುಂಬದ ನಡುವಿನ ಸಂಭಾಷಣೆಯ ಆಡಿಯೋವನ್ನು ಇಸ್ರೇಲ್ ಸೇನೆ ಬಿಡುಗಡೆ ಮಾಡಿದೆ.
ಇದರಲ್ಲಿ ಹಮಾಸ್ ಉಗ್ರನು ಆತನ ತಂದೆಗೆ ಕರೆ ಮಾಡಿ ‘ಅಪ್ಪಾ ನಾನು ಕೊಲೆ ಮಾಡಿದ ಯಹೂದಿ ಮಹಿಳೆಯ ಫೋನ್‌ನಿಂದ ನಿನಗೆ ಕರೆ ಮಾಡಿದ್ದೇನೆ. ಅವಳ ಗಂಡನನ್ನೂ ಕೊಲೆ ಮಾಡಿದೆ. ನನ್ನ ಕೈಯಿಂದ ನಾನು ಹಲವಾರು ಯಹೂದಿಗಳನ್ನು ಕೊಲೆ ಮಾಡಿದ್ದೇನೆ. ನೀನು ತಲೆ ಎತ್ತು ಅಪ್ಪಾ ಎನ್ನುತ್ತಾನೆ.
ಇದಕ್ಕೆ ಪ್ರತಿಕ್ರಿಯಿಸಿದ ಆತನ ತಂದೆ ‘ಓ ನನ್ನ ಮಗನೇ ದೇವರು ನಿನ್ನನ್ನು ಆಶಿರ್ವದಿಸಲಿ’ ಎನ್ನುತ್ತಾನೆ. ಬಳಿಕ ತನ್ನ ತಾಯಿ ಜತೆ ಮಾತನಾಡಿ ‘ನಾನು ಕೊಲೆ ಮಾಡಿದ್ದನ್ನು ವಾಟ್ಸಾಪ್‌ನಲ್ಲಿ ಕಳಿಸಿದ್ದೇನೆ. ತೆರೆದು ನೋಡಿ. ಅಮ್ಮಾ ನಿಮ್ಮ ಮಗ ಹೀರೋ’ ಎನ್ನುತ್ತಾನೆ. ಇದಕ್ಕೆ ತಾಯಿಯು ಮಗನಿಗೆ ಶಹಬ್ಬಾಸ್‌ಗಿರಿ ಹೇಳುತ್ತಾಳೆ.
ಈ ಆಡಿಯೋವು ಅಂದು ಇಸ್ರೇಲ್ ಮೇಲೆ ದಾಳಿ ಮಾಡಿದ ಹಮಾಸ್ ಉಗ್ರರ ಮನಸ್ಥಿತಿ ಎಷ್ಟು ಭಯಂಕರವಾಗಿತ್ತು ಹಾಗೂ ಯಹೂದಿಗಳ ಕೊಲೆಯನ್ನು ಅವರು ಹೇಗೆ ವೈಭವೀಕರಿಸಿದರು ಎಂಬುದನ್ನು ತೋರಿಸುತ್ತಿದೆ. ಇಸ್ರೇಲ್ ಸೇನೆಯು ಆಕ್ರೋಶದಿಂದ ಇದನ್ನು ಬಿಡುಗಡೆ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ