Maryland : ಹಾವುಗಳಿಗೆ ಬೆಂಕಿ ಇಟ್ಟ, 13 ಕೋಟಿ ಬೆಲೆಬಾಳುವ ತನ್ನದೇ ಮನೆ ಸುಟ್ಟು ಕೆಟ್ಟ!

By Suvarna NewsFirst Published Dec 7, 2021, 11:10 AM IST
Highlights

ಅಮೆರಿಕದ ಮೇರಿಲ್ಯಾಂಡ್‌ ನಲ್ಲಿ ನಡೆದ ಘಟನೆ
ಹಾವುಗಳ ದಾಳಿಗೆ ಬೇಸತ್ತು  ಮನೆಯಿಂದ ಹಾವು ಓಡಿಸಲು ನಿರ್ಧಾರ
ಕಲ್ಲಿದ್ದಲು ಉರಿಸಲು ಹೋಗಿ ಮನೆಗೆ ಹತ್ತಿಕೊಂಡ ಬೆಂಕಿ
 

ಮೇರಿಲ್ಯಾಂಡ್‌ (ಡಿ.7): ನೀವು ವಾಸಿಸುವ ಸುತ್ತಮುತ್ತ ಅಥವಾ ಇತರ ಯಾವುದೇ ಕಡೆಗಳಲ್ಲಿ ಹಾವನ್ನು ಕಂಡರೆ ನೀವೇನು ಮಾಡುತ್ತೀರಿ? ಬಹುತೇಕರು ತಕ್ಷಣವೇ ತಮಗೆ ತಿಳಿದಿರುವ ಅಥವಾ ಹತ್ತಿರದಲ್ಲಿ ವಾಸಿಸುತ್ತಿರುವ ಉರಗತಜ್ಞರ ಮೊರೆ ಹೋಗುತ್ತಾರೆ. ಹಾವನ್ನು ಸುರಕ್ಷಿತವಾಗಿ ಕಾಡಿಗೆ ಸೇರಲು ಪ್ರಯತ್ನಿಸುತ್ತಾರೆ. ಆದರೆ ಅಮೆರಿಕದ ಮೇರಿಲ್ಯಾಂಡ್‌ (Maryland)ನಲ್ಲಿ ವಿಚಿತ್ರವಾದ ಆಲೋಚನೆ ಮಾಡಿ ವ್ಯಕ್ತಿಯೋರ್ವ ತನ್ನ 13 ಕೋಟಿ ಬೆಲೆಬಾಳುವ ಮನೆಯನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ.  ಮೇರಿಲ್ಯಾಂಡ್‌ನ ಮಾಂಟ್ಗೊಮೆರಿ (Montgomery)ಯಲ್ಲಿ ವ್ಯಕ್ತಿಯೋರ್ವನ ಮನೆಯೊಳಗೆ ಹಾವು (snake) ಬಂದಿತ್ತು. ಹಾವನ್ನು ಕಂಡ ತಕ್ಷಣ ಈ ವ್ಯಕ್ತಿ ಉರಗರಕ್ಷಕರ ಸಹಾಯ ಪಡೆಯುವ ಬದಲು ಹಿಂದೂ-ಮುಂದೂ ಯೋಚಿಸದೆ ತಾನೇ ಹಾವನ್ನು ಓಡಿಸುವ ಪ್ರಯತ್ನ ಮಾಡಿದ್ದಾನೆ. ಆದರೆ ಇದರಿಂದ ಅಪಾರ ನಷ್ಟ ಅನುಭವಿಸಿದ್ದಾನೆ.

ವರದಿಗಳ ಪ್ರಕಾರ, ದಿನಂಪ್ರತಿ ಮನೆಗೆ ಹಾವುಗಳು ಬರುತ್ತಿದ್ದವಂತೆ,  ಕಣ್ಣು ಹಾಯಿಸಿದಲ್ಲೆಲ್ಲ ಹಾವುಗಳೂ ಕಾಣ ಸಿಗುತ್ತಿದ್ದವಂತೆ. ಕಂಗಾಲಾಗಿ ಹಾವುಗಳ ಹಾವಳಿಯಿಂದ ಬೇಸತ್ತ ಮನೆಯ ಮಾಲೀಕ ಕಲ್ಲಿದ್ದಲ್ಲನ್ನು(coal) ಉರಿಸಿ ಅದರ ಶಾಖಕ್ಕೆ ಹಾವುಗಳನ್ನು ಓಡಿಸಲು ನಿರ್ಧರಿಸಿದ. ಕಲ್ಲಿದ್ದಲಿನಿಂದ ಏಳುವ ಹೊಗೆ ತಾಳಲಾರದೇ ಸರ್ಪಗಳು ಓಡಿಹೋಗಬಹುದು ಎನ್ನುವುದು ಅವನ ಲೆಕ್ಕಾಚಾರವಾಗಿತ್ತು.  ಆದರೆ ಉರಿಯುತ್ತಿರುವ ಕಲ್ಲಿದ್ದಲು ಮನೆಯಲ್ಲಿರುವ ಇತರೆ ವಸ್ತುಗಳಿಗೆ ಆಕಸ್ಮಿಕವಾಗಿ ತಗುಲಿದೆ. ಪರಿಣಾಮ ಬಹುಬೇಗ ಬೆಂಕಿ ಮನೆ ತುಂಬಾ ವ್ಯಾಪಿಸಿ 10,000 ಚದರ ಅಡಿ ಉದ್ದದ ವಿಸ್ತಾರವಾದ ಮನೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. 

 

ICYMI - Update Big Woods Rd, house fire 11/23; CAUSE, accidental, homeowner using smoke to manage snake infestation, it is believed heat source (coals) too close to combustibles; AREA of ORIGIN, basement, walls/floor; DAMAGE, >$1M; no human injures; status of snakes undetermined https://t.co/65OVYAzj4G pic.twitter.com/xSFYi4ElmT

— Pete Piringer (@mcfrsPIO)

ಮನೆ ಮಾಲಿಕ ತಕ್ಷಣ ಮಾಂಟ್ಗೊಮೆರಿ ಕೌಂಟಿ (Montgomery County) ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಯತ್ನ ಮಾಡಿತ್ತು. ಇದೀಗ, ಅಗ್ನಿಶಾಮಕ ಇಲಾಖೆ ಬೆಂಕಿಗೆ ಸುಟ್ಟುಹೋದ ಮನೆಯ ಫೋಟೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

Snake Bite Medicine | ಹಾವು ಕಡಿತಕ್ಕೆ ಬೆಂಗಳೂರಲ್ಲಿ ಔಷಧಿ ತಯಾರಿಕೆ

ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.  ಆದರೆ, ಈ ಅವಘಡದಿಂದ ಒಂದು ಮಿಲಿಯನ್ ಯುಎಸ್‌ ಡಾಲರ್‌ಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜತೆಗೆ, ಎಲ್ಲರೂ ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಕೆಲವೊಮ್ಮೆ ಮನುಷ್ಯ ತೆಗೆದುಕೊಳ್ಳುವ ನಿರ್ಧಾರಗಳು  ಅವರಿಗೇ ಮುಳುವಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

Woman Breastfeeds Cat: ವಿಮಾನದಲ್ಲಿ ಬೆಕ್ಕಿಗೆ ಎದೆಹಾಲುಣಿಸಿದ ಮಹಿಳೆ!

ಹಾವುಗಳು ವಸತಿ ಪ್ರದೇಶದಲ್ಲಿ ಏಕಿದೆ?
ಇತ್ತೀಚೆಗೆ ಹಸಿರು ಮಾಯವಾಗಿ ಎಲ್ಲೆಡೆ ಕಾಂಕ್ರಿಟ್ ‘ಕಾಡು’ ನಿರ್ಮಾಣವಾಗುತ್ತಿರುವುದರಿಂದ ಹಾವುಗಳ ಆವಾಸ ಸ್ಥಾನಗಳು ನಾಶಗೊಂಡಿವೆ. ಖಾಲಿ ಪ್ರದೇಶದಲ್ಲಿ ಕಟ್ಟಡಗಳು ನಿರ್ಮಾಣವಾಗಿವೆ. ಪರಿಣಾಮವಾಗಿ ವಸತಿ ಪ್ರದೇಶದಲ್ಲಿ ಹಾವು ಕಡಿತ ಹೆಚ್ಚಾಗಿ ಜನರ ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸಿದೆ.

Indian SaaS and Italian bahu: ನೆಟ್ಟಿಗರ ಹೃದಯ ಗೆದ್ದ ಇಟಾಲಿಯನ್ ಸೊಸೆ ಮತ್ತು ಇಂಡಿಯನ್ ಅತ್ತೆ

ಭಾರತದಲ್ಲಿ ಎಷ್ಟು ಜಾತಿಯ ಹಾವುಗಳಿವೆ?
ಹಾವುಗಳು ತಮಗೆ ಭಯವುಂಟಾದಾಗ, ಅವುಗಳು ಬೆಚ್ಚಿಬಿದ್ದಾಗ, ಕೆರಳಿಸಲ್ಪಟ್ಟಾಗ, ಅಥವಾ ಮೂಲೆಯಲ್ಲಿ ಸಿಲುಕಿಕೊಂಡು ತಪ್ಪಿಸಿಕೊಳ್ಳುವುದಕ್ಕೆ ಯಾವುದೇ ದಾರಿಯಿಲ್ಲದ ಸಂದರ್ಭಗಳಲ್ಲಿ ಕಚ್ಚುತ್ತವೆ.  ಪ್ರಪಂಚದಾದ್ಯಂತ 3,500 ಕ್ಕೂ ಹೆಚ್ಚು ಜಾತಿಯ ಹಾವುಗಳಿವೆ. ಭಾರತದಲ್ಲಿ ಸುಮಾರು 256ಕ್ಕೂ ಅಧಿಕ ಜಾತಿಯ ಹಾವುಗಳಿವೆ. ಈ ಪೈಕಿ 10 ರಿಂದ15 ಜಾತಿಯ ಹಾವುಗಳು ಮಾತ್ರ ವಿಷಜಂತುಗಳು. ಇವು ಶೀತ-ರಕ್ತದ ಪ್ರಾಣಿಗಳ ವರ್ಗಕ್ಕೆ ಸೇರಿವೆ.

ಹಾವುಗಳ ಆಯಸ್ಸು ಎಷ್ಟು?:  ಕೆಲವು ಜಾತಿಯ ಹಾವುಗಳು ಅರ್ಧ ಶತಮಾನದವರೆಗೆ ಬದುಕಲು ಸಾಕಷ್ಟು ಸಮರ್ಥವಾಗಿವೆ ಎಂದು ನಂಬಲಾಗಿದೆ. ಸೆರೆಯಲ್ಲಿ ಇರಿಸಲಾಗಿರುವ ಶೀತ-ರಕ್ತದ ಸರೀಸೃಪಗಳು ಮಾತ್ರ ದೀರ್ಘಕಾಲೀನವಾಗುತ್ತವೆ.  ಹೆಬ್ಬಾವುಗಳು ನೂರು ವರ್ಷಗಳಿಗಿಂತ ಹೆಚ್ಚು ಜೀವಿಸುವುದಿಲ್ಲ, ಆದರೆ ಇತರ ಜಾತಿಯ ಹಾವುಗಳು ಸುಮಾರು 30-40 ವರ್ಷಗಳವರೆಗೆ ಜೀವಿಸುತ್ತವೆ.

click me!