India Russia summit : ಎಕೆ-203 ರೈಫಲ್‌ ಉತ್ಪಾದನೆಗೆ ಭಾರತ-ರಷ್ಯಾ ಸಹಿ,  ಮತ್ತೊಂದು ಶಕ್ತಿ

Published : Dec 07, 2021, 03:17 AM ISTUpdated : Dec 07, 2021, 03:24 AM IST
India Russia summit : ಎಕೆ-203 ರೈಫಲ್‌ ಉತ್ಪಾದನೆಗೆ ಭಾರತ-ರಷ್ಯಾ ಸಹಿ,  ಮತ್ತೊಂದು ಶಕ್ತಿ

ಸಾರಾಂಶ

* ಎಕೆ-203 ರೈಫಲ್‌ ಉತ್ಪಾದನೆಗೆ ಭಾರತ-ರಷ್ಯಾ ಸಹಿ * ಆತ್ಮನಿರ್ಭರತೆಯತ್ತ ಇನ್ನೊಂದು ಹೆಜ್ಜೆ * ಚೀನಾ ಕ್ಯಾತೆ ಬಗ್ಗೆ ರಷ್ಯಾಗೆ ಭಾರತ ದೂರು * ಶಸ್ತ್ರಾಸ್ತ್ರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವತ್ತ ಹೆಜ್ಜೆ

ನವದೆಹಲಿ(ಡಿ. 07) 6 ಲಕ್ಷ ‘ಎಕೆ-203’ (AK 203) ಅತ್ಯಾಧುನಿಕ ರೈಫಲ್‌ ಉತ್ಪಾದಿಸುವ ಮಹತ್ವದ ಒಪ್ಪಂದಕ್ಕೆ ಭಾರತ (India) ಹಾಗೂ ರಷ್ಯಾ (Russia)ಸೋಮವಾರ ಸಹಿ ಹಾಕಿವೆ. ಉತ್ತರ ಪ್ರದೇಶದ (Uttar Pradesh) ಅಮೇಠಿಯಲ್ಲಿ ರಷ್ಯಾ ಸಹಯೋಗದಲ್ಲಿ ಮುಂದಿನ 10 ವರ್ಷದಲ್ಲಿ ಭಾರೀ ಪ್ರಮಾಣದ ಎಕೆ-203 ರೈಫಲ್‌ಗಳ ಉತ್ಪಾದನೆ ಆಗಲಿದೆ. ಉತ್ಪಾದನಾ ವೆಚ್ಚ 5 ಸಾವಿರ ಕೋಟಿ ರು.ಗಳಾಗಿದೆ. ಇದರಿಂದ ಭಾರತ ಶಸ್ತ್ರಾಸ್ತ್ರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವತ್ತ ಹೆಜ್ಜೆ ಇರಿಸಿದಂತಾಗಿದೆ. ಈ ನಡುವೆ, ‘2+2’ ಸಚಿವ ಮಟ್ಟದ ಮಾತುಕತೆ ನಡೆದಿದ್ದು, ಈ ವೇಳೆ ಭಾರತವು ‘ಚೀನಾ ಅನಗತ್ಯವಾಗಿ ಗಡಿಯಲ್ಲಿ ಕಾಲು ಕೆದರಿ ಜಗಳ ತೆಗೆಯುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಮಾತುಕತೆಯಲ್ಲಿ ಭಾರತದ ಪರವಾಗಿ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಮತ್ತು ರಷ್ಯಾ ಪರವಾಗಿ ವಿದೇಶಾಂಗ ಸಚಿವ ಸರ್ಗೈ ಲಾವ್‌ರೋವ್‌ ಹಾಗೂ ಜಸರ್ಗೈ ಶೊಯಿಗು ಭಾಗಿಯಾಗಿದ್ದರು. ಈ ವೇಳೆ, ಉಭಯ ದೇಶಗಳ ರಕ್ಷಣಾ ಸಹಕಾರವನ್ನೂ 2031ರವರೆಗೂ ವಿಸ್ತರಿಸಲು ಉಭಯ ದೇಶಗಳು ಸಮ್ಮತಿಸಿವೆ.

ಕೊರೋನಾ ರೂಪಾಂತರಿ ವಿರುದ್ಧವೂ ಕೆಲಸ ಮಾಡಲಿದೆ ರಷ್ಯಾ ಲಸಿಕೆ

ಭಾರತದತ್ತ ಪುಟಿನ್‌ ಸ್ನೇಹದ ಹಸ್ತ:  ವಿಶ್ವದಲ್ಲಿ ಕೋವಿಡ್‌ ಸಾಂಕ್ರಾಮಿಕ ತೀವ್ರಗೊಂಡ ಬಳಿಕ ರಷ್ಯಾ ಅಧ್ಯಕ್ಷ ಪುಟಿನ್‌ ಕೈಗೊಂಡ ಕೇವಲ 2ನೇ ವಿದೇಶ ಭೇಟಿ ಇದಾಗಿತ್ತು. ಜಿನೆವಾದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಜೊತೆಗಿನ ಭೇಟಿ ಬಳಿಕ ಪುಟಿನ್‌ ಅವರು ಜಿ20, ಕಾಪ್‌ 26 ಸೇರಿದಂತೆ ಹಲವು ಜಾಗತಿಕ ಸಭೆಗಳಿಗೆ ಅನ್‌ಲೈನ್‌ ಮೂಲಕವೇ ಹಾಜರಾಗಿದ್ದರು. ಆದರೆ ವಿಶೇಷವಾಗಿ ಮೋದಿ ಕರೆ ಮತ್ತು ಭಾರತದ ಜೊತೆಗಿನ ತಮ್ಮ ಸ್ನೇಹವನ್ನು ಜಗತ್ತಿನ ಮುಂದೆ ತೆರೆದಡಲು ಇದೀಗ ನವದೆಹಲಿಗೆ ಆಗಮಿಸಿದ್ದಾರೆ ಎನ್ನಲಾಗಿದೆ.

28 ಒಪ್ಪಂದಗಳಿಗೆ ಭಾರತ- ರಷ್ಯಾ ಸಹಿ:  ಭಾರತ ಮತ್ತು ರಷ್ಯಾ ಸೋಮವಾರ 28 ಒಪ್ಪಂದಗಳಿಗೆ ಸಹಿ ಹಾಕಿದವು. ರಷ್ಯಾ ಅಧ್ಯಕ್ಷ ಪುಟಿನ್‌ರ (Vladimir Putin)ಒಂದು ದಿನದ ಭಾರತ ಭೇಟಿ ವೇಳೆ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಪುಟಿನ್‌ರ ಭೇಟಿ ಕ್ಷಿಪ್ರ ಅವಧಿಯಾಗಿದ್ದರೂ ಅತ್ಯಂತ ಫಲಪ್ರದವಾಗಿತ್ತು ಎಂದು ಭಾರತ ಬಣ್ಣಿಸಿದೆ. ಭೇಟಿ ವೇಳೆ ಮೋದಿ (Narendra Modi) ಮತ್ತು ಪುಟಿನ್‌ ಭಯೋತ್ಪಾದನೆ, ಅಷ್ಘಾನಿಸ್ತಾನ, ಲಡಾಖ್‌ ಮೊದಲಾದ ವಿಷಯಗಳ ಬಗ್ಗೆ ಚರ್ಚಿಸಿದರು.

ಅಂತಾರತಾಷ್ಟ್ರೀಯ ಮಟ್ಟದಲ್ಲಿ ಮೊದಲಿದ್ದ ಅಮೆರಿಕಾ ಮತ್ತು ರಷ್ಯಾ ನಡುವಿನ  ಶೀತಲ ಸಮರ ಈಗ ಅಮೆರಿಕ ಮತ್ತು ಚೀನಾ  ನಡುವೆ ಆರಂಭವಾಗಿರುವುದು ಎಲ್ಲರಿಗೆ ಗೊತ್ತಿರುವ ವಿಚಾರ.  ಭಾರತ ಸಹ ಹಲವಾರು ಸಂದರ್ಭಗಳಲ್ಲಿ ಸ್ಪಷ್ಟ ಮತ್ತು ದಿಟ್ಟ ನಿಲುವನ್ನು ತೆಗೆದುಕೊಳ್ಳುತ್ತ ಬಂದಿದೆ. 

ಈ ಹಿಂದೆ ನಡೆದಿರುವ ಭಾರತ ಹಾಗೂ ರಷ್ಯಾ ನಡುವಿನ 20 ದ್ವಿಪಕ್ಷೀಯ ಸಭೆಗಳು ಯಶಸ್ವಿಯಾಗಿದೆ.  ಕಳೆದ ಕೆಲ ವರ್ಷಗಳಿಂದ ಭಾರತ ಹಾಗೂ ರಷ್ಯಾ ನಡುವಿನ ಪಾಲುದಾರಿಕೆ ಹಾಗೂ ಒಪ್ಪಂದ ಹೆಚ್ಚಾಗಿದೆ.  ರಕ್ಷಣಾ ಕ್ಷೇತ್ರ, ವ್ಯಾಪಾರ ವಹಿವಾಟು ಸೇರಿದಂತೆ ಹಲವು ಪಾಲುದಾರಿಕೆ ಗಟ್ಟಿಯಾಗಿದೆ. ಇದರಿಂದ ಈ ಬಾರಿಯ ಸಭೆ ಭಾರಿ ಮಹತ್ವ ಪಡೆದುಕೊಂಡಿದೆ.  ಕೊರೋನಾ ಸಂದರ್ಭದಲ್ಲಿ ಭಾರತ ಹಾಗೂ ರಷ್ಯಾ ಪರಸ್ಪರ ಸ್ಪಂದಿಸಿದೆ. ಭಾರತದ ಸಂಕಷ್ಟದಲ್ಲಿ ರಷ್ಯಾ ಸ್ಫುಟ್ನಿಕ್ ಲಸಿಕೆ ನೀಡುವ ಮೂಲಕ ಭಾರತಕ್ಕೆ ನೆರವಾಗಿದೆ.  ವಾರ್ಷಿಕ ಶೃಂಗಸಭೆಗಾಗಿ ಪುಟಿನ್ (Vladimir Putin) ಕೊನೆಯ ಬಾರಿ ಭಾರತಕ್ಕೆ  2018 ರಲ್ಲಿ ಭೇಟಿ ನೀಡಿದ್ದರು. ಈ  ಭೇಟಿಯ ಸಮಯದಲ್ಲಿ ಭಾರತ ಮತ್ತು ರಷ್ಯಾ ನಡುವೆ S400 ಸಿಸ್ಟಮ್‌ಗೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!