ಮಾರ್ಕ್ ಜುಕರ್‌ಬರ್ಗ್ ಖರೀದಿಸಿದ ₹335 ಕೋಟಿ ಐಷಾರಾಮಿ ಅರಮನೆ! ಇದರ ವಿಶೇಷತೆ ತಿಳಿದರೆ ಅಚ್ಚರಿಯಾಗುತ್ತೆ

Published : Aug 22, 2026, 06:42 PM IST
mark zuckerberg

ಸಾರಾಂಶ

Mark Zuckerberg: ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಐರ್ಲೆಂಡ್‌ನಲ್ಲಿ ಅತ್ಯಂತ ಐಷಾರಾಮಿ ಅರಮನೆಯನ್ನು ಖರೀದಿಸಿದ್ದು, ಈ ಭವ್ಯ ಬಂಗಲೆಯು ಸುಮಾರು 440 ಎಕರೆ ಜಮೀನನ್ನು ಒಳಗೊಂಡಿದೆ. ಈ ಅರಮನೆಯ ಕುರಿತಾದ ಮಹತ್ವದ ಹಾಗೂ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

₹335 ಕೋಟಿ ಕೊಟ್ಟು ಬಂಗಲೆ ಖರೀದಿಸಿದ ಜುಕರ್‌ಬರ್ಗ್

ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಐರ್ಲೆಂಡ್‌ನಲ್ಲಿ ಅತ್ಯಂತ ಐಷಾರಾಮಿ ಅರಮನೆಯನ್ನು ಖರೀದಿಸಿದ್ದು, ಇದೀಗ ಈ ಅರಮನೆ ಸಾಕಷ್ಟು ಸುದ್ದಿಯಲ್ಲಿದೆ. ವರದಿಗಳ ಪ್ರಕಾರ, ಈ ಮಹಲಿನ ಬೆಲೆ ಸುಮಾರು 30 ಮಿಲಿಯನ್ ಯುರೋ, ಅಂದರೆ ಸುಮಾರು ₹335 ಕೋಟಿ ಎಂದು ಹೇಳಲಾಗುತ್ತಿದೆ. ಮಾರ್ಕ್ ಜುಕರ್‌ಬರ್ಗ್ ಅವರ ಹೊಸ ಐಷಾರಾಮಿ ಅರಮನೆಯ ಹೆಸರು Strancally Castle. ಇದು ಆಗ್ನೇಯ ಐರ್ಲೆಂಡ್‌ನಲ್ಲಿದ್ದು, ಈ ಆಸ್ತಿಯೊಂದಿಗೆ ಬರೋಬ್ಬರಿ 440 ಎಕರೆ ಜಮೀನು ಕೂಡ ಇದೆ. ಐರಿಶ್ ಟೈಮ್ಸ್ ವರದಿ ಪ್ರಕಾರ, ಜುಕರ್‌ಬರ್ಗ್ ಮತ್ತು ಅವರ ಪತ್ನಿ ಸುಮಾರು ಒಂದು ವಾರದ ಹಿಂದೆಯಷ್ಟೇ ಈ ಭವ್ಯ ಮಹಲನ್ನು ಖರೀದಿಸಿದ್ದಾರೆ. ಆದರೆ ಈ ಒಪ್ಪಂದ ಇನ್ನೂ ಐರ್ಲೆಂಡ್‌ನ ಪ್ರಾಪರ್ಟಿ ಪ್ರೈಸ್ ರಿಜಿಸ್ಟರ್‌ನಲ್ಲಿ ದಾಖಲಾಗಿಲ್ಲ.

ಈ ಭವ್ಯ ಮಹಲಿನ ವಿಶೇಷತೆ ಏನು?

ಜುಕರ್‌ಬರ್ಗ್ ಖರೀದಿಸಿರುವ Strancally Castle, ಬ್ಲ್ಯಾಕ್‌ವಾಟರ್ ವ್ಯಾಲಿಯಲ್ಲಿ ನದಿಯ ದಡದಲ್ಲಿದೆ. 19ನೇ ಶತಮಾನದಲ್ಲಿ ಇದನ್ನು ಗೋಥಿಕ್ ಶೈಲಿಯಲ್ಲಿ ನಿರ್ಮಿಸಲಾಗಿತ್ತು. ಸುಮಾರು 1830ರ ವೇಳೆಯಲ್ಲಿ ಟೋರಿ ಸಂಸದ ಜಾನ್ ಕೀಲಿ ಅವರಿಗಾಗಿ ಈ ಮಹಲನ್ನು ನಿರ್ಮಿಸಲಾಯಿತು. ಬ್ರಿಯಾನ್ ಡಿ ಬ್ರೆಫ್ನಿ ಮತ್ತು ರೋಸ್ಮೆರಿ ಫೋಲಿಯಟ್ ಬರೆದ ‘ದಿ ಹೌಸೆಸ್ ಆಫ್ ಐರ್ಲ್ಯಾಂಡ್’ ಪುಸ್ತಕದ ಪ್ರಕಾರ, ಈ ಕೋಟೆಯನ್ನು ಪೆನ್ ಬ್ರದರ್ಸ್ ವಿನ್ಯಾಸಗೊಳಿಸಿದ್ದರು. ಈ ಮಹಲಿನ ವಿಸ್ತೀರ್ಣ ಸುಮಾರು 16,000 ಚದರ ಅಡಿ. ಇದು ಎಷ್ಟು ದೊಡ್ಡದಾಗಿದೆ ಎಂದರೆ, ಅಡುಗೆಮನೆಯಿಂದ ಡೈನಿಂಗ್ ರೂಮ್‌ಗೆ ವೇಗವಾಗಿ ನಡೆದುಕೊಂಡು ಹೋದರೂ ಸುಮಾರು 4.5 ನಿಮಿಷ ಬೇಕಾಗುತ್ತದೆ!

ಜುಕರ್‌ಬರ್ಗ್ ಖರೀದಿಸಿರುವ ಈ ಭವ್ಯ ಅರಮನೆಯ ನಿಖರ ಬೆಲೆ ಇನ್ನೂ ಸ್ಪಷ್ಟವಾಗಿಲ್ಲ. ಇದರ ನಿಜವಾದ ಬೆಲೆ ಸುಮಾರು ₹223 ಕೋಟಿಯಿಂದ ₹335 ಕೋಟಿಯವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಮಾರ್ಕ್ ಜುಕರ್‌ಬರ್ಗ್ ಅವರ ಈ ಹೊಸ ಕೋಟೆ, ಮೆಟಾದ ಅಂತಾರಾಷ್ಟ್ರೀಯ ಪ್ರಧಾನ ಕಚೇರಿಯಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿದೆ. ಮೆಟಾ ಸಿಇಒ ಅವರ ವಕ್ತಾರರ ಪ್ರಕಾರ, ಜುಕರ್‌ಬರ್ಗ್ ಮತ್ತು ಅವರ ಕುಟುಂಬ ತಮ್ಮ ಹೊಸ ಐಷಾರಾಮಿ ನಿವಾಸದ ಬಗ್ಗೆ ಬಹಳ ಉತ್ಸುಕರಾಗಿದ್ದಾರೆ.

ಮಾರ್ಕ್ ಜುಕರ್‌ಬರ್ಗ್ ಯಾರಿಂದ ಈ ಮಹಲು ಖರೀದಿಸಿದರು?

ಈ ಮಹಲನ್ನು ಸುಮಾರು 25 ವರ್ಷಗಳ ಹಿಂದೆ ಪ್ರೈವೇಟ್ ಇನ್ವೆಸ್ಟ್‌ಮೆಂಟ್ ಸಂಸ್ಥೆ RAB Capitalನ ಸಹ-ಸಂಸ್ಥಾಪಕ ಮೈಕೆಲ್ ಅಲೆನ್-ಬಕ್ಲಿ ಮತ್ತು ಅವರ ಪತ್ನಿ ಜಿಯಾನ್ಕಾರ್ಲಾ ಖರೀದಿಸಿದ್ದರು. 25 ವರ್ಷಗಳಿಂದ ತಾವು ವಾಸಿಸುತ್ತಿದ್ದ ಮನೆಯನ್ನು ಪ್ರೀತಿಯಿಂದ ಬಿಟ್ಟು ಕೊಡುತ್ತಿರುವುದಾಗಿ ಅವರು ಹೇಳಿದ್ದಾರೆ. ಜೊತೆಗೆ, ಈ ಭವ್ಯ ಅರಮನೆಯನ್ನು ಸಂರಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು ಅವಕಾಶ ಸಿಕ್ಕಿರುವುದಕ್ಕೆ ಸಂತೋಷವಿದೆ ಎಂದು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಮಾರ್ಕ್ ಜುಕರ್‌ಬರ್ಗ್ ತಮ್ಮ ಪತ್ನಿಯೊಂದಿಗೆ ಅಮೆರಿಕದಲ್ಲೇ ವಾಸಿಸಲಿದ್ದಾರೆ. ಅವರು ಐರ್ಲೆಂಡ್‌ಗೆ ಬಂದಾಗ ಈ ಮಹಲನ್ನು ತಮ್ಮ ನಿವಾಸವಾಗಿ ಬಳಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗುರುವಾರ-ಶುಕ್ರವಾರದ ಬದಲು 'ಬುಧವಾರ' ರಿಲೀಸ್ ಆಗ್ತಿರೋದ್ಯಾಕೆ? ಯಶ್‌ 'ಟಾಕ್ಸಿಕ್' ಸೀಕ್ರೆಟ್ ಇರೋದೇ ಇದ್ರಲ್ಲಿ!
ಮಗು ಗಂಡೋ, ಹೆಣ್ಣೋ ಗೊತ್ತಾಗೋದೇ 12 ವರ್ಷ ಆದ್ಮೇಲೆ! ವಿಜ್ಞಾನ ಲೋಕವನ್ನೇ ಬೆಚ್ಚಿಬೀಳಿಸಿರೋ ಊರಿದು