ಪಾಕ್  ದುಸ್ಥಿತಿ;  ಜನ ಮಾತು ಕೇಳ್ತಿಲ್ಲ, ಹೀಗೆ ಆದ್ರೆ ಪರಿಸ್ಥಿತಿ!

Published : Apr 14, 2020, 08:08 PM ISTUpdated : Apr 14, 2020, 08:12 PM IST
ಪಾಕ್  ದುಸ್ಥಿತಿ;  ಜನ ಮಾತು ಕೇಳ್ತಿಲ್ಲ, ಹೀಗೆ ಆದ್ರೆ ಪರಿಸ್ಥಿತಿ!

ಸಾರಾಂಶ

ಪಾಕಿಸ್ತಾನದಲ್ಲಿಯೂ ಕೊರೋನಾ ಅಟ್ಟಹಾಸ/ ಜನರು ಮಾತು ಕೇಳುತ್ತಿಲ್ಲ/ ಸರ್ಕಾರದ ಆದೇಶಕ್ಕೆ ಕಿಮ್ಮತ್ತೇ ಇಲ್ಲ/ ಪ್ರಾಣಕ್ಕಿಂತ ಪ್ರಾರ್ಥನೆಯೇ ಹೆಚ್ಚು ಎನ್ನುತ್ತಿದ್ದಾರೆ.

ಇಸ್ಲಾಮಾದ್(ಏ. 14) ಪ್ರಪಂಚದ ಎಲ್ಲ ಕಡೆ ಕರೋನಾ ಲಾಕ್ ಡೌನ್ ಇದ್ದರೆ ಈ ದೇಶದಲ್ಲಿ ಮಾತ್ರ ಯಾವುದಕ್ಕೂ ಕಿಮ್ಮತ್ತೇ ಇಲ್ಲ.  ಇಲ್ಲಿನ ಮಸೀಸಿದಿಗಳಲ್ಲಿ ಪ್ರಾರ್ಥನೆ ನಡೆಯುತ್ತಲೇ ಇದೆ. 

ನಾನು ಪ್ರತಿದಿನ ಕೇಂದ್ರ ಪಾಕಿಸ್ತಾನದ ಮುಲ್ತಾನ್ ನ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ. ಒಂದು ಡಜನ್ ಗೂ ಹೆಚ್ಚು ಜನರಿರುತ್ತಾರೆ ಎಂದು ಸಬೀರ್ ದುರಾನಿ ಹೇಳಿದ್ದಾರೆ.
52 ವರ್ಷದ ದುರಾನಿ ಕಟ್ಟಾ ಮುಸ್ಲಿಂ  ಅನುಯಾಯಿ. ಧಾರ್ಮಿಕ ಕಾರ್ಯಕ್ರಮಗಳು ನಡೆಯಬಾರದು, ಜನರು ಒಂದಾಗಬಾರದು ಎಂದು ಸರ್ಕಾರ ಹೇಳಿದ್ದರೂ ಇವರು ಮಾತ್ರ ತಲೆಗೆ ಹಾಕಿಕೊಂಡಿಲ್ಲ.  ಪಾಕಿಸ್ತಾನದಲ್ಲಿ 5300 ಜನರು  ಸೋಂಕಿಗೆ ಒಳಗಾಗಿದ್ದು 93 ಜನರು ಸಾವನ್ನಪ್ಪಿದ್ದಾರೆ.

ಅಧ್ಯಯನ ಬಿಚ್ಚಿಟ್ಟ ಕಟು ಸತ್ಯ; 2022ರವರೆಗೆ ಲಾಕ್ ಡೌನ್

ಈ ವೈರಸ್ ನಮಗೆ ಏನು ಮಾಡುವುದಿಲ್ಲ, ಇದು ಕೇವಲ ಪಾಶ್ಚಿಮಾತ್ಯ ಜನರನ್ನು ಮಾತ್ರ ಕಾಡುತ್ತದೆ ಎಂದು ನಮ್ಮ ಧರ್ಮಗುರು ಹೇಳಿದ್ದಾರೆ ಎಂದು ದುರಾನಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಪ್ರಾರ್ಥನೆ ಕೂರುವ ಮುನ್ನ ನಮ್ಮ ಕೈಗಳನ್ನು ಐದು ಸಾರಿ, ಮುಖವನ್ನು ಐದು ಸಾರಿ ತೊಳೆದುಕೊಳ್ಳುತ್ತೇವೆ.  ಈ ವೈರಸ್ ನಮಗೆ ಯಾವ ತೊಂದರೆ ಮಾಡಲ್ಲ. ನಮ್ಮೊಂದಿಗೆ ದೇವರಿದ್ದಾನೆ ಎಂದು ದುರಾನಿ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಮೋದಿ ಮೇಲೆ ದೇವೇಗೌಡರ ಮುನಿಸು

ಪಾಕಿಸ್ತಾನದಲ್ಲಿ ಕಂಡುಬಂದ ಕೊರೊನಾ ವೈರ ಸ್ ಸೋಂಕು ಪ್ರಕರಣದಲ್ಲಿ ಶೇ. 60ಕ್ಕಿಂತ ಹೆಚ್ಚು ಪ್ರಕರಣಗಳು ಧಾರ್ಮಿಕ ಯಾತ್ರೆಗೆ ಸಂಬಂಧಿಸಿದ್ದವು.  ಮಧ್ಯಪ್ರಾಚ್ಯಕ್ಕೆ ಪ್ರವಾಸ ಹೋದವರಿಂದಲೇ , ತಬ್ಲಿಘಿ ಜಮಾತ್ ಕಾರಣಕ್ಕೆ ಸಂಬಂಧಿಸಿದ್ದವು ಎಂಬುದು ಆತಂಕಾರಿ ಅಂಶ.

ನಾವು ನನ್ಮ ಪ್ರಾಣವನ್ನು ಬೇಕಾದರೆ ತ್ಯಜಿಸಲು ಸಿದ್ಧರಿದ್ದೇವೆ. ಆದರೆ ಮಸೀದಿಯಲ್ಲಿ ಪ್ರಾರ್ಥನೆ ನಿಲ್ಲಿಸುವುದಿಲ್ಲ ಎಂದು ಮುಫ್ತಿ ಕಫಾಯಿತುಲ್ಲಾ ಎಂಬುವರು ಹೇಳುತ್ತಾರೆ.

ಕರಾಚಿಯಲ್ಲಿ ಜನರನ್ನು ನಿಯಂತ್ರಿಸಲು ಹೋದ ಪೊಲೀಸರ ಮೇಲೆಯೇ ದಾಳಿಯಾಗಿದೆ.  ಕಳೆದ ವಾರ ಪಾಕಿಸ್ತಾನಕ್ಕೆ ಸಂಬಂಧಿಸಿ ಟ್ವಿಟರ್ ನಲ್ಲಿ "Muslims, the mosque is calling you" # ಟ್ಯಾಗ್ ಟ್ರೆಂಡ್ ಆಗಿತ್ತು.

ಮಾರ್ಚ್ 27ಕ್ಕೆ ಕೊನೆಗೊಂಡಂತೆ ಮಸೀದಿಗಳ ಆಡಳಿತ ಮಂಡಳಿ ವಿರುದ್ಧ 88 ಪ್ರಕರಣಗಳು, ಲಾಖ್ ಡೌನ್ ಮುರಿದ 38 ಜನರ ಮೇಲೆಯೂ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಮಸೀದಿಗಳು ಸರ್ಕಾರದ ಆದೇಶ ಪಾಲನೆ ಮಾಡುತ್ತ ಸಹಕಾರ ನೀಡುತ್ತಿವೆ ಎಂದು ಪಾಕ್ ಪ್ರಧಾನಿಗಳ ವಿಷೇಶ ಸಹಾಯಕ ತಿಳಿಸಿದ್ದಾರೆ.  ಭಾರತದಲ್ಲಿಯೂ ತಬ್ಲಿಘಿಗಳ ಕಾರಣಕ್ಕೆ ಪ್ರಲಕರಣ ಅತಿ ಕಡಿಮೆ ದಿನದಲ್ಲಿ ದ್ವಿಗುಣಗೊಂಡಿದ್ದು ಎಂದು  ಅಂಕಿ ಅಂಶಗಳೇ ಹೇಳಿವೆ. ಅತ್ತ ಪಾಕಿಸ್ತಾನದಲ್ಲಿಯೂ ಜ ನ ಮಾತು ಕೇಳುತ್ತಿಲ್ಲ



 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರತೀಯರ ಎಚ್‌-1ಬಿ ವೀಸಾ ಸಂದರ್ಶನ ದಿಢೀರ್‌ ರದ್ದು : ಕಿಡಿ
ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!