ಅಧ್ಯಯನ ಬಿಟ್ಟಿಟ್ಟ ಕಟುಸತ್ಯ; 2022ರವರೆಗೆ ಲಾಕ್ ಡೌನ್, ಹೊಸ ಕಾನೂನು ಬರ್ಬಹುದು!

Published : Apr 14, 2020, 06:19 PM ISTUpdated : Apr 14, 2020, 06:20 PM IST
ಅಧ್ಯಯನ ಬಿಟ್ಟಿಟ್ಟ ಕಟುಸತ್ಯ; 2022ರವರೆಗೆ  ಲಾಕ್ ಡೌನ್, ಹೊಸ ಕಾನೂನು ಬರ್ಬಹುದು!

ಸಾರಾಂಶ

ಲಾಕ್ ಡೌನ್ ಯಾವಾಗ ಮುಗಿಯುತ್ತದೆ? ಈ ಅಧ್ಯಯನ ಬಿಚ್ಚಿಟ್ಟ ಆತಂಕಕಾರಿ ವಿಚಾರ/  2022ರವರೆಗೂ ಒಂದರ್ಥದ ಲಾಕ್ ಡೌನ್/ ಹೊಸ ಹೊಸ ಕಾನೂನುಗಳು ಜಾರಿಯಾಗಬಹುದು. 

ನವದೆಹಲಿ(ಏ. 14) 21 ದಿನ, ಒಂದು ತಿಂಗಳು, ಒಂದುವರೆ ತಿಂಗಳ ಲಾಕ್ ಡೌನ್ ಗೆ ನಾವೆಲ್ಲ ಬೆಚ್ಚಿ ಬಿದ್ದಿದ್ದೇವೆ. ಮುಂದೆ ಏನು ಮಾಡಬೇಕು ಎಂಬ ಪ್ರಶ್ನೆ ಕೇಳಿಕೊಳ್ಳುತ್ತಿದ್ದೇವೆ. ಆದರೆ ಇಲ್ಲೊಂದು ಅಧ್ಯಯನ ತೆರೆದಿಟ್ಟ ಮಾಹಿತಿಯನ್ನು ಸ್ವಲ್ಪ ಕಷ್ಟಪಟ್ಟು ಅರಗಿಸಿಕೊಳ್ಳಬೇಕಾದ ಸ್ಥಿತಿ ಇದೆ.

ಹಲವರು ಕೆಲಸ ಕಳೆದುಕೊಳ್ಳುತ್ತಿದ್ದಾರೆ, ಕೆಲವರಿಗೆ ಹೊತ್ತಿನ ಆಹಾರಕ್ಕೂ ಪರಿತಪಿಸಬೇಕಾದ ಸ್ಥಿತಿ.. ಲಕ್ಷ ಲಕ್ಷವಿದ್ದರೂ ಆಹಾರಕ್ಕೆ ಹುಡುಕಬೇಕಾಗಿದೆ.

ಅಮೆರಿಕದ ಮಾಸ ಪ್ರತಿಕೆ ವೆರ್ಡ್ ಪ್ರಧಾನ ಸಂಪಾದಕ ನಿಕೋಲೋಸ್ ತಾಮ್ಸನ್ ಮತ್ತು ಹಿರಿಯ ವರದಿಗಾರ ಆಡಮ್ ರೋಜರ್ಸ್ ಮಾಡಿರುವ ಅಧ್ಯಯನದ ವರದಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. 

ಒಂದು ವೇಳೆ ಈಗ ಇರುವ ಲಾಕ್ ಡೌನ್ ಸಂಪೂರ್ಣವಾಗಿ ತೆಗೆದರೆ ಅದು ಇದಕ್ಕಿಂತಲೂ ದೊಡ್ಡದಾದ ಇನ್ನೊಂದು ಲಾಕ್ ಡೌನ್ ಗೆ ದಾರಿ ಮಾಡಿಕೊಡುತ್ತದೆ ಎಂದು ಎಚ್ಚರಿಸಿದ್ದಾರೆ.

ಮನೆ ಕೊಳಾಯಿ ತಿರುಗಿಸಿದ್ರೆ ಮೂರು ಗಂಟೆ ಕಾಲ ನೀರಿನ ಬದಲು ಎಣ್ಣೆ

ಲಾಕ್ ಡೌನ್ ಎಫೆಕ್ಟ್ ಒಂದೆಲ್ಲಾ ಒಂದು ರೀತಿ ಕಾಡುತ್ತ ಮುಂದುವರಿಯುತ್ತಲೇ ಹೋಗುತ್ತದೆ. ಈ ಸೈಕಲ್ 2022ರವರೆಗೆ ತಿರುಗಬಹುದು ಎಂಬ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಸಾನಿಟೈಜೇಶನ್, ಮಾಸ್ಕ್ ಧರಿಸುವುದು, ನಿರಂತರವಾಗಿ ಕೈ ತೊಳೆಯುವುದು ಮತ್ತು ಸೋಶಿಯಲ್ ಡಿಸ್ಟಂಸಿಂಗ್ ಕಡ್ಢಾಯ ಮಾಡಿಕೊಳ್ಳಬೇಕಾಗುವುದು. ಚೀನಾ ಮತ್ತು ಏಷ್ಯಾದ ಕೆಲ ರಾಷ್ಟ್ಯಗಳು ಈ ಬಗ್ಗೆ ಈಗಾಗಲೇ ಚಿಂತನೆ ನಡೆಸಿವೆ ಎಂಬುದನ್ನು ತಿಳಿಸಿದ್ದಾರೆ.

ನಾಲ್ಕು ದಿನ ಕೆಲಸ ನಂತರ 10 ದಿನ ಶಡ್ ಡೌನ್, ಕಡ್ಡಾಯ ಸಾಮಾಜಿಕ ಅಂತರ, ವರ್ಕಿಂಗ್ ಜಾಗದಲ್ಲಿ ಉಷ್ಟತೆಗೆ ಮಾನದಂಡದಂತಹ ವಿಚಾರಗಳು ಜಾರಿಯಾಗಬಹುದು ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಕೊರೋನಾ ಮಾರಿ ಕಂಟ್ರೋಲ್ ಗೆ ತರುವುದೇ ಒಂದು ಸವಾಲಾಗಿದೆ. ಲಾಕ್ ಡೌನ್ ಅವಧಿ ವಿಸ್ತರಣೆ ಆದಂತೆ ಹೊಸ ಹೊಸ ಸಮಸ್ಯೆಗಳು ಉದ್ಭವವಾಗುತ್ತಿವೆ.


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರತೀಯರ ಎಚ್‌-1ಬಿ ವೀಸಾ ಸಂದರ್ಶನ ದಿಢೀರ್‌ ರದ್ದು : ಕಿಡಿ
ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!