
ಒಂಟಿಯಾಗಿ ಮನುಷ್ಯರೇ ಇಲ್ಲದ ಸ್ಥಳವೊಂದರಲ್ಲಿ ಬದುಕಲು ಸಾಧ್ಯವಾ ? ಸೋಷಿಯಾಲಜಿ ವ್ಯಕ್ತಿ ಮೊದಲು ಹೇಳುವುದೇ ಮ್ಯಾನ್ ಈಸ್ ಎ ಸೋಷಿಯಲ್ ಎನಿಮಲ್. ಸಮಾಜದ ಒಟ್ಟಿಗೇ, ಸಮಾಜದ ಮಧ್ಯೆಯೇ ಆತ ಬದುಕುತ್ತಾನೆ. ಅದು ಕೆಟ್ಟದೋ, ಒಳ್ಳೆಯದೋ ಆತ ಒಂಟಿಯಾಗಿ ಬದುಕಲಾರ. ಆದರೆ ಇಲ್ಲೊಬ್ಬ ವ್ಯಕ್ತಿ ನೋಡಿ. ತನ್ನ ಜೀವನದ 33 ವರ್ಷಗಳನ್ನು ಒಂಟಿಯಾಗಿ ಕಳೆದಿದ್ದಾನೆ.
ಮೌರೊ ಮೊರಾಂಡಿ ಎಂಬ ವ್ಯಕ್ತಿ 33 ವರ್ಷಗಳ ಕಾಲ ಸಾರ್ಡಿನಿಯನ್ ದ್ವೀಪದಲ್ಲಿ ಒಂಟಿಯಾಗಿ ಕಳೆದಿದ್ದಾನೆ. ಕಾಡು(Forest) ಬೆಕ್ಕುಗಳು ಮತ್ತು ಕಾಡು ಹಕ್ಕಿಗಳ ಜೊತೆ ಈತ ಬುಡೆಲಿಯಲ್ಲಿರುವ ದ್ವೀಪದಲ್ಲಿ(Island) ಒಬ್ಬನೇ ಬದುಕಿದ್ದಾನೆ. ಬರೋಬ್ಬರಿ ಮೂರು ದಶಕಗಳ ಕಾಲ ಆತನಿಗೆ ಸ್ನೇಹಿತರೂ ಇಲ್ಲ ಸಂಬಂಧಿಗಳೂ ಇಲ್ಲ ಮನುಷ್ಯ ಸಂಪರ್ಕವೇ ಇಲ್ಲ.
ಕೋವಿಶೀಲ್ಡ್ ಪಡೆದವರಿಗೆ ಅನೇಕ ದೇಶಗಳ ಕೆಂಪುಹಾಸಿನ ಸ್ವಾಗತ!
ತನ್ನ ಅರ್ಧಕ್ಕರ್ಧ ಬದುಕನ್ನೇ ದ್ವೀಪದಲ್ಲಿ ಕಳೆದ ಈತ 82 ವರ್ಷಕ್ಕೆ ಹೊಸ ಬದುಕು ಆರಂಭಿಸಿದ್ದಾನೆ. ಮರಳಿ ನಗರಕ್ಕೆ ಮುಖ ಮಾಡಿದ್ದಾನೆ. ಈತ ತನ್ನ ಏಕಾಂತ ಅಸ್ತಿತ್ವದ ಬದುಕನ್ನು ಸ್ವಯಂಪ್ರೇರಣೆಯಾಗಿ ಕೊನೆಗೊಳಿಸಲಿಲ್ಲ. ಇದು ಅನಿವಾರ್ಯವಾಗಿ ಸಂಭವಿಸಿತು. ಇತ್ತೀಚೆಗೆ ದ್ವೀಪವನ್ನು ಪರಿಸರ ವೀಕ್ಷಣಾಲಯವನ್ನಾಗಿ ಮಾಡುವುದಾಗಿ ಘೋಷಿಸಿದ್ದಾರೆ. ಇದರರ್ಥ ಮೌರೋ ತನ್ನ ಮನೆಯನ್ನು ಖಾಲಿ ಮಾಡಬೇಕಿತ್ತು.
ಮೌರೋ ಮೇನಲ್ಲಿ ಲಾ ಮದ್ದಲೆನಾ ದ್ವೀಪಕ್ಕೆ ತೆರಳಿದರು. ಅವರು ಹೊಸ ಮನೆ ಖರೀದಿಸಲು ತಮ್ಮ ಪಿಂಚಣಿಯನ್ನು ಬಳಸಿದರು. ಅಂತಿಮವಾಗಿ ಇತರ ಜನರೊಂದಿಗೆ ಸಮಯ ಕಳೆಯಲು ಪ್ರಾರಂಭಿಸಿದರು. 82 ವರ್ಷದ ಅವರು ಯಾರೊಂದಿಗೂ ಬಹಳ ಹೊತ್ತು ಮಾತನಾಡುವ ಮನಸ್ಸಿಲ್ಲ ಎಂದು ಹೇಳಿದ್ದಾರೆ.
ನಾನು ದೀರ್ಘಕಾಲ ಏಕಾಂಗಿಯಾಗಿ ವಾಸಿಸುತ್ತಿದ್ದೆ. ನಾನು ಬುಡೆಲ್ಲಿಗೆ ಬಂದ ನಂತರ ಬಹಳ ವರ್ಷಗಳ ನಂತರ ನನಗೆ ಯಾರೊಂದಿಗೂ ಮಾತನಾಡಬೇಕೆಂದು ಅನಿಸುವುದಿಲ್ಲ. ನಾನು ಇನ್ನು ಮುಂದೆ ದ್ವೀಪದ ಏಕಾಂತತೆಯನ್ನು ಆನಂದಿಸಲು ಸಾಧ್ಯವಿಲ್ಲ, ಆದರೆ ನನ್ನ ಜೀವನ(Life) ಈಗ ಹೊಸ ತಿರುವು ಪಡೆದುಕೊಂಡಿದೆ. ಇತರರೊಂದಿಗೆ ಸಂವಹನ ನಡೆಸುವಲ್ಲಿ ಮತ್ತು ಇತರ ಜನರ ಜೊತೆ ಇರುವುದರಲ್ಲಿ ಗಮನ ಕೇಂದ್ರೀಕರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ