ಆನ್‌ಲೈನ್ ಫ್ರಿಡ್ಜ್‌ ಆರ್ಡರ್‌ ಮಾಡಿ ಲಕ್ಷಾಧಿಪತಿಯಾದ ಗ್ರಾಹಕ, 96 ಲಕ್ಷ ರೂ. ಬಂಡಲ್!

By Suvarna NewsFirst Published Aug 16, 2021, 9:37 AM IST
Highlights

* ಆನ್‌ಲೈನ್‌ ಮೂಲಕ ಖರೀದಿಸಿದ ಫ್ರಿಡ್ಜ್‌

* ಫ್ರಿಡ್ಜ್ ಖರೀದಿಸಿದ ವ್ಯಕ್ತಿ ಕೈ ಸೇರಿತು ಲಕ್ಷ ಲಕ್ಷ ಹಣ

* ಬರೋಬ್ಬರಿ 96 ಲಕ್ಷ ರೂ. ನಗದು ಪತ್ತೆ

ದ. ಕೊರಿಯಾ(ಆ.16): ಆನ್‌ಲೈನ್‌ ಮೂಲಕ ಖರೀದಿಸಿದ ಫ್ರಿಡ್ಜ್‌ನಿಂದ ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬನ ಅದೃಷ್ಟ ಖುಲಾಯಿಸಿದ್ದು, ಬರೋಬ್ಬರಿ 96 ಲಕ್ಷ ರೂ. ನಗದು ಪಡೆದಿದ್ದಾನೆ. ವರದಿಯನ್ವಯ, ಆ ವ್ಯಕ್ತಿ ದಕ್ಷಿಣ ಕೊರಿಯಾದ ಜೆಜು ದ್ವೀಪದ ನಿವಾಸಿಯಾಗಿದ್ದು, ಈ ಹಣದ ಬಗ್ಗೆ ಆತನಿಗೆ ತಿಳಿದಿರಲಿಲ್ಲ. ಆ ವ್ಯಕ್ತಿ ಆಗಸ್ಟ್ 6 ರಂದು ನಗದು ರಸೀದಿ ವರದಿ ಸಲ್ಲಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಫ್ರಿಜ್ ಸ್ವಚ್ಛಗೊಳಿಸುವಾಗ ಇದರಲ್ಲಿ 96 ಲಕ್ಷ ರೂಪಾಯಿ ಪತ್ತೆಯಾಗಿದೆ ಎಂದು ತಿಳಿಸಿದ್ದಾನೆ.

ತಾನು ಸ್ವಚ್ಛಗೊಳಿಸಿದ್ದ ಫ್ರಿಡ್ಜ್ ಇತ್ತೀಚೆಗಷ್ಟೇ ಆನ್‌ಲೈನ್ ಮೂಲಕ ಖರೀದಿಸಿದ್ದು ಎಂದು ಆತ ತಿಳಿಸಿದ್ದಾನೆ. ಎಂಬಿಸಿ ನ್ಯೂಸ್ ನಲ್ಲಿ ಬಂದ ವರದಿಯ ಪ್ರಕಾರ, ಹಣವನ್ನು ಪ್ಲಾಸ್ಟಿಕ್ ಹಾಳೆಯಲ್ಲಿ ಪ್ಯಾಕ್ ಮಾಡಿ ಫ್ರಿಜ್ ನ ಕೆಳಭಾಗಕ್ಕೆ ಅಂಟಿಸಲಾಗಿತ್ತು. ಈ ನೋಟುಗಳನ್ನು ಫ್ರಿಡ್ಜ್‌ಗೆ ಅಂಟಿಸಲಾಗಿತ್ತು.

ಹೀಗಿದ್ದರೂ ಆ ವ್ಯಕ್ತಿ ಈ ಹಣವನ್ನು ಪೊಲೀಸರಿಗೆ ನೀಡಿದ್ದಾನೆ. ಬಳಿಕ ಪೊಲೀಸರು ರೆಫ್ರಿಜರೇಟರ್‌ ಡೆಲಿವರಿ ಮಾಡಿದ ಆನ್‌ಲೈನ್ ಮಾರಾಟಗಾರರನ್ನು ಗುರುತಿಸಿ ವಿಚಾರಣೆಗೆ ಆದೇಶಿಸಲಾಗಿದೆ. ಪ್ರಕರಣದ ಬಗ್ಗೆ ಮಾತನಾಡಿದ ಪೊಲೀಸ್ ಅಧಿಕಾರಿಯೊಬ್ಬರು "ಇದು ಬಹಳ ದೊಡ್ಡ ಮೊತ್ತವಾಗಿದ್ದು, ಅಪರೂಪದ ಪ್ರಕರಣವಾಗಿದೆ. ಫ್ರಿಡ್ಜ್‌ನ ಮಾಲೀಕರು ಪೊಲೀಸರಿಗೆ ಹಣವನ್ನು ಹಿಂದಿರುಗಿಸಿದರೂ, ಗ್ರಾಹಕ ಮತ್ತೆ ಹಣವನ್ನು ಮರಳಿ ಪಡೆಯುವ ಸಾಧ್ಯತೆಯಿದೆ. ಏಕೆಂದರೆ ದಕ್ಷಿಣ ಕೊರಿಯಾದ ಲಾಸ್ಟ್ ಅಂಡ್ ಫೌಂಡ್ ಆಕ್ಟ್ ಅಡಿಯಲ್ಲಿ, ಮಾಲೀಕರನ್ನು ಪತ್ತೆ ಮಾಡಲಾಗದಿದ್ದರೆ, ಇದನ್ನು ಪಡೆದವರಿಗೆ ಈ ಹಣ ಉಳಿಸಿಕೊಳ್ಳುವ ಹಕ್ಕಿದೆ ಎಂದಿದ್ದಾರೆ.

ಇನ್ನು ಈ ಹಣದ ಮಾಲೀಕ ಪತ್ತೆಯಾದರೂ ಒಟ್ಟು ಮೊತ್ತದ 22% ಅನ್ನು ತೆರಿಗೆಯಾಗಿ ಪಾವತಿಸಬೇಕಾಗುತ್ತದೆ. ಬಳಿಕ ಬಾಕಿ ಮೊತ್ತವನ್ನು ನೀಡಲಾಗುತ್ತದೆ. ಇನ್ನು ಈ ಹಣದ ಹಿಂದೆ ಕ್ರಿಮಿನಲ್ ಸಂಪರ್ಕವಿದ್ದರೆ ಅದನ್ನು ಯಾರಿಗೂ ನಿಡಲಾಗುವುದಿಲ್ಲ. 

click me!