20 ವರ್ಷ ಗುಹೆಯಲ್ಲಿ ಇದ್ದವನಿಗೆ ಕೊರೋನಾ ಬಗ್ಗೆ ಗೊತ್ತೇ ಇರಲಿಲ್ಲ!

Published : Aug 16, 2021, 08:03 AM IST
20 ವರ್ಷ ಗುಹೆಯಲ್ಲಿ ಇದ್ದವನಿಗೆ ಕೊರೋನಾ ಬಗ್ಗೆ ಗೊತ್ತೇ ಇರಲಿಲ್ಲ!

ಸಾರಾಂಶ

* ಕೊರೋನಾ ಬಂದಿದ್ದು ಇಡೀ ಜಗತ್ತಿಗೇ ಗೊತ್ತಿದೆ * 20 ವರ್ಷ ಗುಹೆಯಲ್ಲಿ ಇದ್ದವನಿಗೆ ಕೊರೋನಾ ಬಗ್ಗೆ ಗೊತ್ತೇ ಇರಲಿಲ್ಲ * 20 ವರ್ಷಗಳಿಂದ ಸ್ಟಾರಾ ಪ್ಲಾಸಿನಾ ಪರ್ವತದ ತುದಿಯಲ್ಲಿರು ಗುಹೆಯಲ್ಲಿ ವಾಸಿಸುತ್ತಿದ್ದ

ಬೆಲ್‌ಗ್ರೇಡ್(ಆ.16): ಕೊರೋನಾ ಬಂದಿದ್ದು ಇಡೀ ಜಗತ್ತಿಗೇ ಗೊತ್ತಿದೆ. ಆದರೆ, ಸೈಬೀರಿಯಾದ ಗುಹೆಯೊಂದರಲ್ಲಿ ಕಳೆದ 20 ವರ್ಷದಿಂದ ವಾಸಿಸುತ್ತಿರುವ ವ್ಯಕ್ತಿಯೊಬ್ಬನಿಗೆ ಕೊರೋನಾ ವೈರಸ್‌ ಬಗ್ಗೆ ಗೊತ್ತೇ ಇರಲಿಲ್ಲ.

ಇತ್ತೀಚೆಗೆ ಆತ ತನ್ನ ಊರಿಗೆ ಹಿಂದಿರುಗಿದ ಸಂದರ್ಭದಲ್ಲಿ ಕೊರೋನಾ ವೈರಸ್‌ ಬಗ್ಗೆ ತಿಳಿದು ಲಸಿಕೆ ಹಾಕಿಸಿಕೊಂಡಿದ್ದಾನೆ. 70 ವರ್ಷದ ಪ್ಯಾಂಟಾ ಪೆಟ್ರೋವಿಕ್‌ ಎಂಬಾತನೇ ಈ ವ್ಯಕ್ತಿ. ಈತ ಕಳೆದ 20 ವರ್ಷಗಳಿಂದ ಸ್ಟಾರಾ ಪ್ಲಾಸಿನಾ ಪರ್ವತದ ತುದಿಯಲ್ಲಿರು ಗುಹೆಯಲ್ಲಿ ವಾಸಿಸುತ್ತಿದ್ದ.

ಇತರ ಜನರೊಂದಿಗೆ ಆತ ಸಂಪರ್ಕವನ್ನು ಸಂಪೂರ್ಣವಾಗಿ ಕಡಿದುಕೊಂಡಿದ್ದ. ಆದರೆ, ಪೈರೋಟ್‌ನಲ್ಲಿರುವ ಅಂಗಡಿಯೊಂದಕ್ಕೆ ಆತ ಬೇಟಿ ನೀಡಿದ ವೇಳೆ ಆತನಿಗೆ ಕೊರೋನಾ ವೈರಸ್‌ ಬಗ್ಗೆ ತಿಳಿದಿದೆ. ಇದೀಗ ಆತ ಲಸಿಕೆ ಹಾಕಿಸಿಕೊಂಡಿದ್ದು, ತನ್ನ ಗೂಡಿಗೆ ಮರಳಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ