ತಾಲಿಬಾನ್‌ ನಾಯಕತ್ವದ ಹಿಂದೆ ಯಾರಿದ್ದಾರೆ?

By Suvarna News  |  First Published Aug 16, 2021, 8:32 AM IST

* ತಾಲಿಬಾನ್‌ ಸಂಘಟನೆಗಳ ರಹಸ್ಯವಾಗಿಯೇ ನಡೆಯುತ್ತಿದೆ ಕಾರ್ಯ ಚಟುವಟಿಕೆ

* ಅದರ ಹಿಂದಿನ ನಿಜವಾದ ಶಕ್ತಿ ಯಾರು ಎಂಬುದು ಹೆಚ್ಚು ಕಡಿಮೆ ರಹಸ್ಯ


ಕಾಬೂಲ್‌(ಆ.16): ದಶಕಗಳಿಂದಲೂ ತಾಲಿಬಾನ್‌ ಸಂಘಟನೆಗಳ ರಹಸ್ಯವಾಗಿಯೇ ತನ್ನ ಕಾರ್ಯಚಟುವಟಿಕೆಗಳನ್ನು ನಡೆದುಕೊಂಡು ಬರುತ್ತಿದೆ. 1996-2001ರವರೆಗೆ ಅದು ಆಷ್ಘಾನಿಸ್ತಾನದಲ್ಲಿ ಆಡಳಿತದ ನಡೆಸಿದ ವೇಳೆಯೂ ಅದರ ಹಿಂದಿನ ನಿಜವಾದ ಶಕ್ತಿ ಯಾರು ಎಂಬುದು ಹೆಚ್ಚು ಕಡಿಮೆ ರಹಸ್ಯವಾಗಿಯೇ ಉಳಿದಿತ್ತು.

ಬಳಿಕ ಹೈಬತುಲ್ಲಾ ಅಖುಂದ್‌ಝಾದಾ:

Tap to resize

Latest Videos

undefined

2016ರಲ್ಲಿ ಅಂದಿನ ತಾಲಿಬಾನ್‌ ನಾಯಕ ಮುಲ್ಲಾ ಮನ್ಸೋರ್‌ ಅಖ್ತರ್‌ ಅಮೆರಿಕದ ನಡೆಸಿದ ವಾಯುದಾಳಿಯಲ್ಲಿ ಹತನಾದ ಬಳಿಕ ಹೈಬತುಲ್ಲಾ ಅಖುಂದ್‌ಝಾದಾ ಸಂಘಟನೆಯ ನೂತನ ನಾಯಕನಾಗಿ ಆಯ್ಕೆಯಾಗಿದ್ದ. ಸಂಘಟನೆಯ ನಾಯಕನಾಗುವ ಮುನ್ನ ಹೈಬುತುಲ್ಲಾ ಕೇವಲ ಪ್ರಖರ ಧಾರ್ಮಿಕ ನಾಯಕನಾಗಿಯಷ್ಟೇ ಗುರುತಿಸಿಕೊಂಡಿದ್ದ. ಆದರೆ ತಾಲಿಬಾನ್‌ ನಾಯಕನಾದ ನಂತರ ಈತನಿಗೆ ಅಲ್‌ಖೈದಾ ನಾಯಕ ಅಯ್ಮನ್‌ ಅಲ್‌ ಜವಾಹಿರಿಯ ಪೂರ್ಣ ಬೆಂಬಲ ಸಿಕ್ಕಿತು. ನಂತರ ಇತರೆ ಹಲವು ಉಗ್ರ ಸಂಘಟನೆಗಳೊಂದಿಗೂ ನಂಟು ಬೆಳೆದು, ಚದುರಿ ಹೋಗಿದ್ದ ತಾಲಿಬಾನ್‌ ಉಗ್ರರನ್ನು ಒಗ್ಗೂಡಿಸುವಲ್ಲಿ ಈತ ಯಶಸ್ವಿಯಾದ.

Video: ಸಾವಿನ ಭಯ: ಅಪ್ಘಾನಿಸ್ತಾನ ತೊರೆಯಲು ವಿಮಾನದಲ್ಲಿ ನೂಕು ನುಗ್ಗಲು!

ಮುಲ್ಲಾ ಬರದಾರ್‌:

ಈತ ಕಂದಹಾರ್‌ ಮೂಲದ ವ್ಯಕ್ತಿ. 1970ರಲ್ಲಿ ದೇಶದ ಮೇಲೆ ಸೋವಿಯತ್‌ ಒಕ್ಕೂಟದ ದಾಳಿ ಬಳಿಕ ಈತ ಕೂಡ ಉಗ್ರನಾಗಿ ಬದಲಾದ. ಈತ ಸಂಘಟನೆಯ ಮತ್ತೋರ್ವ ನಾಯಕ ಮುಲ್ಲಾ ಓಮರ್‌ನ ಸಹವರ್ತಿಯಾಗಿ ತಾಲಿಬಾನ್‌ನಲ್ಲಿ ಗುರುತಿಸಿಕೊಂಡಿದ್ದ. 1990ರ ದಶಕದಲ್ಲಿ ಸೋವಿಯತ್‌ ಪಡೆಗಳು ದೇಶ ತೊರೆದ ಬಳಿಕ, ಆಷ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರವಾದವನ್ನು ಬೆಳೆಸಿದ್ದೇ ಇವರಿಬ್ಬರು. 2010ರಲ್ಲಿ ಈತ ಪಾಕ್‌ನಲ್ಲಿ ಬಂಧನಕ್ಕೊಳಗಾಗಿದ್ದ, ಆದರೆ 2018ರಲ್ಲಿ ಅಮೆರಿಕದ ಸೂಚನೆ ಅನ್ವಯ ಈತನನ್ನು ಬಿಡುಗಡೆ ಮಾಡಲಾಗಿತ್ತು. ಹಾಲಿ ಈತ ಕತಾರ್‌ನಲ್ಲಿ ವಾಸವಿದ್ದಾನೆ ಎನ್ನಲಾಗಿದೆ. ಆಷ್ಘಾನಿಸ್ತಾನದಿಂದ ಅಮೆರಿಕದ ಸೇನೆ ಹಿಂಪಡೆತ ಕುರಿತ ಒಪ್ಪಂದಕ್ಕೆ, ಉಗ್ರ ಸಂಘಟನೆ ಪರವಾಗಿ ಸಹಿ ಹಾಕಿದ್ದು ಈತನೇ.

ಸಿರಾಜುದ್ದೀನ್‌ ಹಕ್ಕಾನಿ:

ಸೋವಿಯತ್‌ ವಿರೋಧಿ ಹೋರಾಟದ ಪ್ರಮುಖ ನಾಯಕ ಜಲಾಲುದ್ದೀನ್‌ ಹಕ್ಕಾನಿಯ ಪುತ್ರನೀತ. ಈತ ಹಕ್ಕಾನಿ ಸಮೂಹ ಮತ್ತು ತಾಲಿಬಾನ್‌ ಚಳವಳಿ ಎರಡರ ನೇತೃತ್ವವನ್ನೂ ವಹಿಸಿಕೊಂಡಿದ್ದಾನೆ. ಈತನ ಸಂಘಟನೆ ಆತ್ಮಹತ್ಮಾ ದಾಳಿಗೆ ಅತ್ಯಂತ ಕುಖ್ಯಾತಿ ಹೊಂದಿದೆ.

Video: ಸ್ಮಶಾನಗಳ ಸಾಮ್ರಾಜ್ಯ ಅಫ್ಘಾನ್: ಕಾಬೂಲ್ ಏರ್‌ಪೋರ್ಟ್‌ನಲ್ಲಿ ಶವವಾದ ನಾಗರಿಕರು!

ಮುಲ್ಲಾ ಯಾಕುಬ್‌:

ತಾಲಿಬಾನ್‌ ಸಂಸ್ಥಾಪಕ ಮುಲ್ಲಾ ಒಮರ್‌ನ ಪುತ್ರ. ಈತ ತಾಲಿಬಾನ್‌ನ ಸೇನಾಪಡೆಯ ಮುಖ್ಯಸ್ಥನಾಗಿದ್ದಾನೆ.

click me!