
ಸೌಥ್ ವೇಲ್ಸ್(ಮಾ.14): ಮನೆಯಲ್ಲಿ ಗಂಡ ಹೆಂಡತಿಗೆ ಜಗಳ ಆಗಿದೆ. ಒಂದೆರೆಡು ದಿನ ಪತ್ನಿ ಮಾತು ಬಿಟ್ಟಿದ್ದಾಳೆ. ಸಮಾಧಾನ ಪಡಿಸಲು ಪತಿ ಒಂದಷ್ಟು ಪ್ರಯತ್ನ ಮಾಡಿದ್ದಾನೆ. ಆದರೆ ಪತ್ನಿಯ ಕೋಪ ಮಾತ್ರ ತಣ್ಣಗಾಗಿಲ್ಲ. ಕೆಲಸದ ನಿಮಿತ್ತ ಮನೆಯಿಂದ ಹೊರಹೋದ ಪತಿ ವಾಪಸ್ ಬರುವಾಗ ಒಂದು ಪ್ಲಾನ್ ಮಾಡಿದ್ದಾನೆ. ಎರಡು ಲಾಟರಿ ಟಿಕೆಟ್ ಖರೀದಿಸಿ ಪತ್ನಿಯ ಕೋಪ ತಣಿಸುವ ಪ್ರಯತ್ನಕ್ಕೆ ಕೈಹಾಕಿದ್ದಾನೆ. ಇದರಿಂದ ಎರಡು ಟಿಕೆಟ್ ಖರೀದಿಸಿ ಮನೆಗೆ ಬಂದಿದ್ದಾನೆ. ಆದರೆ ಪತ್ನಿ ಕೋಪ ಮಾತ್ರ ತಣ್ಣಗಾಗಿಲ್ಲ. ಇತ್ತ ಪತಿ ಇನ್ನೇನು ಮಾಡಲು ಸಾಧ್ಯ ಎಂದು ಚಿಂತೆಯಲ್ಲೇ ಮುಳುಗಿದ. ಆದರೆ ಫಲಿತಾಂಶ ಬಂದಾಗ ಪತ್ನಿಯ ಕೋಪ ನೀರಾಗಿತ್ತು. ಕಾರಣ ಈತನ ಖರೀದಿಸಿದ 2 ಲಾಟರಿ ಟಿಕೆಟ್‌ಗೆ ಜಾಕ್‌ಪಾಟ್ ಹೊಡೆದಿತ್ತು. ಬರೋಬ್ಬರಿ 16 ಕೋಟಿ ರೂಪಾಯಿ ಗೆದ್ದ ಖುಷಿಯಲ್ಲಿ ಇದೀಗ ದಂಪತಿ ಪ್ಲಾನ್ ಮೇಲೆ ಪ್ಲಾನ್ ಮಾಡುತ್ತಿದ್ದಾರೆ. ಈ ಲಾಟರಿ ಜಾಕ್‌ಪಾಟ್ ಘಟನೆ ನಡೆದಿದ್ದು, ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ.
ಜಾಕ್‌ಪಾಟ್ ದಂಪತಿಗಳು ಪ್ರತಿ ವಾರ ಬೆಟ್ಟಿಂಗ್ ಆಡುತ್ತಾರೆ. ನಿಯಮಿತವಾಗಿ ಬೆಟ್ಟಿಂಗ್ ಆಡಿ ಖುಷಿ ಪಡುತ್ತಾರೆ. ಆದರೆ ಕಳೆದ ಒಂದು ವಾರ ಬೆಟ್ಟಿಂಗ್ ಆಡುವಾಗ ಪತ್ನಿ ನೋಂದಣಿ ನಂಬರ್ ಹಾಕಲು ಮರೆತಿದ್ದಾನೆ. ತಾನೊಬ್ಬನೆ ಬೆಟ್ಟಿಂಗ್ ಆಡಿದ್ದಾನೆ. ಇದು ಪತ್ನಿಯನ್ನು ಕೆರಳಿಸಿದೆ. ಇತ್ತೀಚೆಗೆ ನಾನು ಇದ್ದೇನೆ ಅನ್ನೋದೇ ಮರತಿದ್ದಾರೆ. ನನ್ನ ನಂಬರ್ ಹಾಕದೆ ಅವರೊಬ್ಬರೇ ಬೆಟ್ಟಿಂಗ್ ಆಡಿದ್ದಾರೆ. ಇಷ್ಟು ವರ್ಷ ನಾವಿಬ್ಬರು ಬೆಟ್ಟಿಂಗ್ ಆಡುತ್ತಿದ್ದೇವು. ಇದೀಗ ಪತಿ ಬದಲಾಗಿದ್ದಾರೆ ಎಂದು ಪತ್ನಿ ಒಂದೇ ಸಮನೆ ತರಾಟೆಗೆ ತೆಗೆದುಕೊಂಡಿದ್ದಾಳೆ.
ಅಮೆರಿಕದಲ್ಲೇ ಅತಿದೊಡ್ಡ 16.5 ಸಾವಿರ ಕೋಟಿಯ ಲಾಟರಿ ಗೆದ್ದ ವ್ಯಕ್ತಿ
ಪತ್ನಿಯನ್ನು ಸಮಾಧಾನಪಡಿಸಲು ಹಲವು ಪ್ರಯತ್ನ ಮಾಡಿದ್ದಾನೆ. ಆದರೆ ಯಾವುದೂ ಕೈಗೂಡಲಿಲ್ಲ. ಕೆಲದ ನಿಮಿತ್ತ ಹೊರಗೆ ಹೋದಾಗ ಬೆಟ್ಟಿಂಗ್ ಅಸಮಾಧಾನವನ್ನು ಇನ್ನೊಂದು ರೀತಿಯ ಬೆಟ್ಟಿಂಗ್ ಮೂಲಕ ಸರಿಪಡಿಸಲು ಪತಿ ಪ್ಲಾನ್ ಮಾಡಿದ್ದಾನೆ. ಹೀಗಾಗಿ ಎರಡು ಲಾಟರಿ ಟಿಕೆಟ್ ಖರೀದಿಸಿದ್ದಾನೆ. ಬಳಿಕ ಮನೆಗೆ ಬಂದು ಪತ್ನಿಗೆ ಲಾಟರಿ ಟಿಕೆಟ್ ನೀಡಿ, ಬೆಟ್ಟಿಂಗ್ ಮಿಸ್ ಮಾಡಿದ ಕಾರಣ ಅದಕ್ಕಿಂತ ದೊಡ್ಡ ಜಾಕ್‌ಪಾಟ್ ಲಾಟರಿ ತಂದಿದ್ದೇನೆ ಎಂದು ಸಮಾಧಾನ ಪಡಿಸಿದ್ದಾನೆ.
ಪತಿಯ ಲಾಟರಿ ಟಿಕೆಟ್ ನೋಡಿ ಪತ್ನಿಯ ಕೋಪ ಆರಿಲ್ಲ. ಮತ್ತೆ ಮತ್ತೆ ಪತಿಯನ್ನು ಚುಚ್ಚು ಮಾತುಗಳಿಂದ ತರಾಟೆಗೆ ತೆಗೆದುಕೊಂಡಿದ್ದಾಳೆ. ಒಂದೆರಡು ದಿನದ ಬಳಿಕ ಲಾಟರಿ ಫಲಿತಾಂಶ ಬಂದಿದೆ. ಮೊದಲ ಟಿಕೆಟ್ ನಂಬರ್ ಚೆಕ್ ಮಾಡಿದಾಗ ಜಾಕ್ ಪಾಟ್. 8 ಕೋಟಿ ರೂಪಾಯಿ ಬಹುಮಾನ. ಎರಡನೇ ಟಿಕೆಟ್ 8.4 ಕೋಟಿ ರೂಪಾಯಿ. ಒಟ್ಟು 16.4 ಕೋಟಿ ರೂಪಾಯಿ ಜಾಕ್‌ಪಾಟ್.
55 ಕೋಟಿ ರೂ ಲಾಟರಿ ಗೆದ್ದ ದುಬೈನಲ್ಲಿರುವ ಭಾರತೀಯ ಹೋಟೆಲ್ ಉದ್ಯೋಗಿ!
ಖುಷಿಯಿಂದಲೇ ಪತ್ನಿಗೆ ಹೇಳಿದ್ದಾನೆ. ಪತ್ನಿಗೆ ನಂಬಲು ಸಾಧ್ಯವಾಗಿಲ್ಲ. ಮತ್ತೆ ಮತ್ತೆ ನಂಬರ್ ನೋಡಿ ಖಚಿತಪಡಿಸಿಕೊಂಡಿದ್ದಾರೆ. ಇದೀಗ ಪತಿ ಪತ್ನಿ ನಡುವಿನ ಜಗಳ ಒಂದೇ ನಿಮಿಷದಲ್ಲಿ ಮಾಯವಾಗಿದೆ. ಇದೀಗ 16.4 ಕೋಟಿ ರೂಪಾಯಿ ಮೊತ್ತವನ್ನು ಎಲ್ಲಿ ಹೂಡಿಕೆ ಮಾಡಬೇಕು ಅನ್ನೋ ಚರ್ಚೆ ನಡೆಸುತ್ತಿದ್ದಾರೆ. ಮಕ್ಕಳಿಗಾಗಿ ಮನೆ ಖರೀದಿಸಲು ಮುಂದಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ