ಅನ್ಯ ಗ್ರಹ ಜೀವಿ ಅಂತ ಹೇಳ್ಕೊಂಡು ಬೆತ್ತಲೆ ಓಡಾಡ್ತಿದ್ದ ಭೂಪ ಅರೆಸ್ಟ್..!

Published : Mar 14, 2023, 03:47 PM ISTUpdated : Mar 14, 2023, 03:55 PM IST
ಅನ್ಯ ಗ್ರಹ ಜೀವಿ ಅಂತ ಹೇಳ್ಕೊಂಡು ಬೆತ್ತಲೆ ಓಡಾಡ್ತಿದ್ದ ಭೂಪ ಅರೆಸ್ಟ್..!

ಸಾರಾಂಶ

ಆತ ಆರಂಭದಲ್ಲಿ ತನ್ನ ಹೆಸರು ಮತ್ತು ಜನ್ಮ ದಿನಾಂಕದಂತಹ ತನ್ನ ವೈಯಕ್ತಿಕ ಮಾಹಿತಿಯನ್ನು ಒದಗಿಸಲು ನಿರಾಕರಿಸಿದ್ದರು. ಇನ್ನು, ತಾನು ಯಾವುದೇ ರಾಜ್ಯದ ಸಾಮಾಜಿಕ ಭದ್ರತೆ ಸಂಖ್ಯೆ ಅಥವಾ ಗುರುತಿನ ಚೀಟಿ ಹೊಂದಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಫ್ಲೋರಿಡಾ (ಮಾರ್ಚ್‌ 14, 2023): ನೀವು ಬಾಲಿವುಡ್‌ ಹಾಗೂ ಆಮೀರ್‌ ಖಾನ್‌ ಚಿತ್ರಗಳ ಪ್ರೇಮಿಯಾದ್ರೆ ಅವರ ‘PK’ ಚಿತ್ರವನ್ನು ನೋಡೇ ಇರ್ತೀರಾ. ಅದ್ರಲ್ಲಿ ಆಮೀರ್‌ ಖಾನ್‌ ಅನ್ರಗ್ರಹ ಜೀವಿಯ ಪಾತ್ರ ಮಾಡಿದ್ರು. ಆ ಚಿತ್ರ ಬಂದು 8 ವರ್ಷ ಆಗಿದೆ.  ನಿಷ್ಕಪಟ ಮತ್ತು ಮಾನವ ನಡವಳಿಕೆ ಹಾಗೂ ನಂಬಿಕೆಗಳ ಬಗ್ಗೆ ಕುತೂಹಲ ಹೊಂದಿದ್ದ ‘ಪಿಕೆ’ ವಿಡಂಬನಾತ್ಮಕ ಚಿತ್ರವಾಗಿದ್ದು,  ಹಾಸ್ಯಮಯ ಸನ್ನಿವೇಶಗಳಲ್ಲಿ ಆಮೀರ್‌ ಖಾನ್‌ ಹೆಚ್ಚಾಗಿ ಕಾಣಿಸಿಕೊಂಡರು. ಅಲ್ಲದೆ, ಪ್ರಮುಖವಾಗಿ ಬೆತ್ತಲಾಗಿ ರೇಡಿಯೋವನ್ನು ಮಾತ್ರ ಇಟ್ಟುಕೊಂಡು ಓಡಾಡಿದ್ದು ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಚಿತ್ರ ಬಿಡುಗಡೆಗೂ ಮುನ್ನ ರಿಲೀಸ್‌ ಅಗಿದ್ದ ಪೋಸ್ಟರ್‌ ಕೂಡ ಸಾಕಷ್ಟು ಸದ್ದು ಮಾಡಿತ್ತು. ಈಗ್ಯಾಕೆ ಬಾಲಿವುಡ್‌ ಸ್ಟೋರಿ ಅಂತೀರಾ.. ನಾವು ಹೇಳಲು ಹೊರಟಿರೋ ಸ್ಟೋರಿಯಲ್ಲೂ ವ್ಯಕ್ತಿಯೊಬ್ಬ ತಾನು ಅನ್ಯಗ್ರಹ ಜೀವಿ ಅಂತ ಹೇಳ್ಕೊಂಡು ಬೆತ್ತಲೆ ಓಡಾಡಿದ್ದಾನೆ ನೋಡಿ..

ಅಮೆರಿಕದ (United States) ಫ್ಲೋರಿಡಾದಲ್ಲಿ (Florida) ಸಾರ್ವಜನಿಕವಾಗಿ ಈ ರೀತಿ ಬೆತ್ತಲೆಯಾಗಿ (Naked) ಓಡಾಡಿದ್ದು, ನಂತರ ಪೊಲೀಸರು (Police) ಈತನನ್ನು ಬಂಧಿಸಿದ್ದು (Arrest) ಈಗ ಕಂಬಿ ಹಿಂದೆ ಸೇರಿಕೊಂಡಿದ್ದಾರೆ, ಅಂದ್ರೆ ಜೈಲು (Jail) ಪಾಲಾಗಿದ್ದಾನೆ. ಮಾರ್ಚ್ 8 ರಂದು ಸರಿಸುಮಾರು ಅಮೆರಿಕ ಕಾಲಮಾನ ರಾತ್ರಿ 9 ಗಂಟೆಗೆ ಫ್ಲೋರಿಡಾದ ವಾರ್ತ್ ಅವೆನ್ಯೂನ ಅಂಗಡಿಯ ಹಿಂದೆ ಬೆತ್ತಲೆಯಾಗಿ ನಡೆದುಕೊಂಡು ಹೋಗುತ್ತಿರುವ ಬಿಳಿಯ ಪುರುಷನ ಬಗ್ಗೆ ಉದ್ಯೋಗಿಯೊಬ್ಬರು ಪೊಲೀಸರರಿಗೆ ಕಂಪ್ಲೇಂಟ್‌ ಮಾಡಿದ್ದಾರೆ. ನಂತರ 44 ವರ್ಷದ ಪುರುಷ ಜೇಸನ್ ಸ್ಮಿತ್‌ ಎಂಬಾತ ಬಟ್ಟೆ ಇಲ್ಲದೆ ನಡೆದು ಹೋಗುತ್ತಿದ್ದದ್ದನ್ನು ಹಾಗೂ ಸಾರ್ವಜನಿಕರಿಗೆ ತನ್ನ ಜನನಾಂಗಗಳನ್ನು ಬಹಿರಂಗಪಡಿಸುವುದನ್ನು ಪೊಲೀಸರು ಕಂಡುಕೊಂಡಿದ್ದಾರೆ.

ಇದನ್ನು ಓದಿ: ಕೈದಿಗಳೊಂದಿಗೆ ಜೈಲಲ್ಲೇ ಮಹಿಳಾ ಗಾರ್ಡ್ಸ್‌ ಸೆಕ್ಸ್‌: 18 ಮಂದಿ ವಜಾ, ಮೂವರು ಕಂಬಿ ಹಿಂದೆ..!

ಈ ಘಟನೆಯ ನಂತರ, ಆರೋಪಿಯನ್ನು ಬಂಧಿಸಿ ಪಾಮ್ ಬೀಚ್ ಪೊಲೀಸ್ ಇಲಾಖೆಗೆ ಕರೆತರಲಾಗಿದೆ. ಆದರೂ, ಆತ ಆರಂಭದಲ್ಲಿ ತನ್ನ ಹೆಸರು ಮತ್ತು ಜನ್ಮ ದಿನಾಂಕದಂತಹ ತನ್ನ ವೈಯಕ್ತಿಕ ಮಾಹಿತಿಯನ್ನು ಒದಗಿಸಲು ನಿರಾಕರಿಸಿದ್ದರು. ಇನ್ನು, ತಾನು ಯಾವುದೇ ರಾಜ್ಯದ ಸಾಮಾಜಿಕ ಭದ್ರತೆ ಸಂಖ್ಯೆ ಅಥವಾ ಗುರುತಿನ ಚೀಟಿ ಹೊಂದಿರಲಿಲ್ಲ ಎಂದು ಆರಂಭದಲ್ಲಿ ಹೇಳಿಕೊಂಡಿದ್ದಾರೆ. ಹಾಗೆ, ತನ್ನ ಬಳಿ ಯಾವುದೇ ಗುರುತು ಇಲ್ಲ, ತಾನು ಬೇರೆ ಗ್ರಹದಲ್ಲಿ ವಾಸಿಸುತ್ತಿದ್ದೆ ಎಂದೂ ಹೇಳಿದ್ದಾರೆ. ಆದರೆ, ನಂತರ, ತಾನು ವಾಸ್ತವವಾಗಿ ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿ ವಾಸಿಸುತ್ತಿದ್ದೇನೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. 

ಇನ್ನು, ಅಸಭ್ಯವಾಗಿ ಜನನಾಂಗ ಬಹಿರಂಗಪಡಿಸಿದ್ದಕ್ಕೆ, ಅನೈತಿಕ ನಡವಳಿಕೆಗೆ ಮತ್ತು ಹಿಂಸಾಚಾರವನ್ನು ಬಳಸದೆ ಅಧಿಕಾರಿಯನ್ನು ವಿರೋಧಿಸಿದ್ದು ಸೇರಿದಂತೆ ಮೂರು ಕ್ರಿಮಿನಲ್ ಅಪರಾಧಗಳನ್ನು ಆತನ ಮೇಲೆ ಹೊರಿಸಲಾಗಿದೆ ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: ಚಾಕು ಹಿಡಿದು ಮಗನನ್ನೇ ದರೋಡೆ ಮಾಡಲು ಹೋದ ತಂದೆ..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!