ದಾಳಿ ಮಾಡಲು ಬಂದ ಮೊಸಳೆಯನ್ನು ದೋಸೆ ಕಾವಲಿಯಿಂದ ಹೊಡೆದು ಓಡಿಸಿದ: ವಿಡಿಯೋ ವೈರಲ್

By Anusha KbFirst Published Jun 23, 2022, 2:00 PM IST
Highlights

ಮೊಸಳೆ ತುಂಬಾ ಅಪಾಯಕಾರಿ ಪ್ರಾಣಿ, ಆಹಾರ ಅರಸಿ ಕೆಲವೊಮ್ಮೆ ನೀರಿನಿಂದ ಮೇಲೆ ಬರುವ ಮೊಸಳೆ ಎದುರು ಸಿಕ್ಕವರ ಮೇಲೆ ದಾಳಿ ಮಾಡದೇ ಬಿಡದು. ಹೀಗಾಗಿ ಮೊಸಳೆ ಕಂಡರೆ ಭಯ ಬಿದ್ದು ಜೀವ ಉಳಿಸಿಕೊಳ್ಳಲು ದೂರ ಓಡುವವರೇ ಹೆಚ್ಚು.

ಮೊಸಳೆ ತುಂಬಾ ಅಪಾಯಕಾರಿ ಪ್ರಾಣಿ, ಆಹಾರ ಅರಸಿ ಕೆಲವೊಮ್ಮೆ ನೀರಿನಿಂದ ಮೇಲೆ ಬರುವ ಮೊಸಳೆ ಎದುರು ಸಿಕ್ಕವರ ಮೇಲೆ ದಾಳಿ ಮಾಡದೇ ಬಿಡದು. ಹೀಗಾಗಿ ಮೊಸಳೆ ಕಂಡರೆ ಭಯ ಬಿದ್ದು ಜೀವ ಉಳಿಸಿಕೊಳ್ಳಲು ದೂರ ಓಡುವವರೇ ಹೆಚ್ಚು. ಆದರೆ ಹೀಗೆ ದಾಳಿ ಮಾಡಲು ಬಂದ ಮೊಸಳೆಯೊಂದನ್ನು ವ್ಯಕ್ತಿಯೊಬ್ಬರು ದೋಸೆ ಮಾಡುವ ಕಾವಲಿಯಿಂದ ಹೊಡೆದು ಓಡಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವ್ಯಕ್ತಿಯ ಧೈರ್ಯಕ್ಕೆ ಶಹಭಾಷ್ ಎಂದಿದ್ದಾರೆ. 

ಆಸ್ಟ್ರೇಲಿಯಾದ ಪ್ರಾಂತ್ಯದ ಡಾರ್ವಿನ್‌ನಲ್ಲಿ ಗೋಟ್ ಐಲ್ಯಾಂಡ್‌ನಲ್ಲಿ ನಡೆದ ಘಟನೆ ಇದಾಗಿದೆ. ಪಬ್ಬೊಂದರ ಮುಂಭಾಗದ ಅಂಗಳದಲ್ಲಿ ಮೊಸಳೆಯು ತೆವಳುತ್ತಾ ಬರುತ್ತಿದ್ದು ಇದನ್ನು ನೋಡಿದ ಕೋಡಲೇ ಪಬ್  ಮಾಲೀಕರು ಭಯಪಡುವ ಬದಲು, ತಮ್ಮ ಕೈಯಲ್ಲಿದ್ದ ದೋಸೆ ಕಾವಲಿಯಲ್ಲಿ ಅದರ ತಲೆಗೆ ಸರಿಯಾಗಿ ಬಾರಿಸಿದ್ದಾರೆ. ಈ ವೇಳೆ ಮೊಸಳೆ ಹೆದರಿ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹೊರಟು ಹೋಗುವುದು. ಈತನ ಅಚಾನಕ್ ದಾಳಿಯಿಂದ ಮೊಸಳೆಯೇ ಕಂಗೆಟ್ಟಿದೆ. ಕೂಡಲೇ ಅದು ಜಲಮೂಲದ ಕಡೆ ಬಿರ ಬಿರನೇ ಸಾಗಿ ಹೋಗಿದೆ. 

Bagalkote: ಬೇಸಿಗೆಯಲ್ಲಿ ನದಿಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಶುರುವಾಗ್ತಿದೆ ಕಿಲ್ಲರ್ ಮೊಸಳೆಗಳ ಕಾಟ!

ಈ ಗೋಟ್ ಐಲ್ಯಾಂಡ್ (Goat Island) ಸಾಮಾನ್ಯ ಪಬ್ ಅಲ್ಲ. ಅಲ್ಲಿ ಅವರು ನಿಮಗೆ ಏನು ನೀಡುತ್ತಾರೆ ಎಂದು ಹೇಳಲಾಗದು ಎಂದು ಬರೆದು ಫೇಸ್‌ಬುಕ್‌ನಲ್ಲಿ ಏರ್‌ಬೋರ್ನ್ ಸೊಲ್ಯೂಷನ್ಸ್ ಹೆಲಿಕಾಪ್ಟರ್ (Airborne Solutions Helicopter) ಟೂರ್ಸ್  ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಈ ವೀಡಿಯೊ ವೈರಲ್ ಆಗುತ್ತಿದ್ದಂತೆ, ಮೊಸಳೆಗೆ ಹೊಡೆದ ವ್ಯಕ್ತಿಯನ್ನು ಗೋಟ್ ಐಲ್ಯಾಂಡ್ ಲಾಡ್ಜ್ (Goat Island Lodge) ಮಾಲೀಕ ಕೈ ಹ್ಯಾನ್ಸೆನ್ (Kai Hansen) ಎಂದು ಗುರುತಿಸಲಾಗಿದೆ. 

 

ಈ ಮೊಸಳೆಯ ಬಗ್ಗೆ ಅವರಿಗೆ ಮೊದಲಿನಿಂದಲೂ ತಿಳಿದಿದೆಯಂತೆ. ಫ್ರೆಡ್ (Fred) ಎಂಬ ಹೆಸರಿನಿಂದ ಅವರು ಇದನ್ನು ಕರೆಯುತ್ತಿದ್ದರು ಎನ್ನಲಾಗಿದೆ. 9 ನ್ಯೂಸ್ ಪ್ರಕಾರ, ಕಿಂಗ್ ಕೈ ಎಂದೂ ಕೂಡ ಸ್ಥಳೀಯವಾಗಿ ಕರೆಯಲ್ಪಡುವ ಹ್ಯಾನ್ಸೆನ್ (Hansen) ತನ್ನ ಪ್ರೀತಿಯ ಸಾಕುಪ್ರಾಣಿ ಮೊಸಳೆ ಕ್ಯಾಸಿ (crocodile Casey) ಜೊತೆಗೆ ದ್ವೀಪದಲ್ಲಿ ವಾಸಿಸುತ್ತಾರೆ. ಅವರ ಆಸ್ತಿಯಲ್ಲಿ ಕೇವಲ ಒಂದು ಸರೀಸೃಪವನ್ನು ಸಾಕಲು ಮಾತ್ರ ಅನುಮತಿಸಲಾಗಿದೆಯಂತೆ.

ಮೂರು ಸಿಂಹಗಳೊಂದಿಗೆ ಜೀವಕ್ಕಾಗಿ ಕಾದಾಡುತ್ತಿರುವ ಮೊಸಳೆ: ವಿಡಿಯೋ ವೈರಲ್
 

ನನ್ನ ರಾಜ್ಯವು  ಸುತ್ತಲೂ ಮೊಸಳೆಯಿಂದ ಮುತ್ತಿಕೊಂಡಿರುವ ಏಕೈಕ ಪ್ರದೇಶ ಎಂದು ಅವರು ಸುದ್ದಿ ವಾಹಿನಿಗೆ ವಿವರಿಸಿದರು. ಮೊಸಳೆ ಫ್ರೆಡ್ ಅಲ್ಲಿಂದ ತೆರಳಿದಾಗ ಇನ್ನೊಂದು ಮೊಸಳೆ ಕ್ಯಾಸಿ (Casey), ದ್ವೀಪದ ಹೆಲಿಪೋರ್ಟ್‌ನ (heliport) ಸಮೀಪವಿರುವ ಕಾಲುದಾರಿಯ ಮೇಲೆ ಏರಲು ಪ್ರಾರಂಭಿಸಿತು. ಈಗ ಫ್ರೆಡ್‌ ಕ್ಯಾಸಿಗಿಂತ ದೊಡ್ಡವನಾಗಿದ್ದಾನೆ  ಅದು ಸಮಸ್ಯೆಯಾಗಿದೆ ಎಂದು  ಹ್ಯಾನ್ಸೆನ್ ವಿವರಿಸಿದ್ದಾರೆ..

ಇದು ದೈನಂದಿನ ದಿನಚರಿ ಎಂದು ನಾನು ಹೇಳುವುದಿಲ್ಲ, ಆದರೆ ನಾನು ಸುರಕ್ಷಿತವಾಗಿರಲು ನನ್ನಿಂದ ಸಾಧ್ಯವಾಗುವದನ್ನು ಮಾಡಬೇಕಾಗಿದೆ ಎಂದು ಹ್ಯಾನ್ಸೆನ್ ಡೈಲಿ ಮೇಲ್‌ಗೆ ತಿಳಿಸಿದರು. ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಮತ್ತು ಮೊಸಳೆಗೆ ಉತ್ತಮ ಪಾಠ ಸಿಕ್ಕಿತು ಎಂದು ಅವರು ಹೇಳಿದರು. ಈ ಹಿಂದೆ ಈ ಮೊಸಳೆ ಹ್ಯಾನ್ಸೆನ್ ಅವರ ಮುದ್ದಿನ ಶ್ವಾನವನ್ನು ತಿಂದು ಹಾಕಿತ್ತಂತೆ. ಹೀಗಾಗಿ ಅವರು ಈ ರೀತಿ ಮೊಸಳೆ ಮೇಲೆ ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
 

click me!