ಬಾಂಗ್ಲಾದೇಶದಲ್ಲಿ ರಾಮನ ವಿಗ್ರಹ ನಿರ್ಮಿಸುತ್ತಿದ್ದ ವ್ಯಕ್ತಿ ಅರೆಸ್ಟ್! ಯಾರು ಈ ಹರಿದಾಸ್ ಚಂದ್ರ?

Published : Jul 13, 2026, 10:13 PM IST
Man Arrested in Bangladesh for Building Ram Statue Amid Suspicious Financial Activity

ಸಾರಾಂಶ

ಬಾಂಗ್ಲಾದೇಶದಲ್ಲಿ ಶ್ರೀರಾಮನ ವಿಗ್ರಹ ನಿರ್ಮಿಸುತ್ತಿದ್ದ ಹರಿದಾಸ್ ಅಲಿಯಾಸ್ 'ತೌಹೀದ್ ಇಸ್ಲಾಂ' ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಬ್ಯಾಂಕ್ ಖಾತೆಯಲ್ಲಿ ಯಾವುದೇ ಆದಾಯದ ಮೂಲವಿಲ್ಲದೆ ಅನುಮಾನಾಸ್ಪದ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಶ್ರೀರಾಮನ ವಿಗ್ರಹವನ್ನು ನಿರ್ಮಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ. ಬಂಧಿತ ವ್ಯಕ್ತಿಯನ್ನು ಹರಿದಾಸ್ ಎಂದು ಗುರುತಿಸಲಾಗಿದ್ದು, ಈತ 'ತೌಹೀದ್ ಇಸ್ಲಾಂ' ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ದ್ವಂದ್ವ ಹೆಸರೇ ಪೊಲೀಸರ ತನಿಖೆಯ ದಿಕ್ಕನ್ನು ಬದಲಿಸಿದಂತಿದೆ.

ಬಂಧನಕ್ಕೆ ಕಾರಣವಾದ ಬ್ಯಾಂಕ್ ಖಾತೆ

ಹರಿದಾಸ್‌ನ ಚಟುವಟಿಕೆಗಳು ಪೊಲೀಸರ ಗಮನಕ್ಕೆ ಬಂದಿದ್ದೇ ತಡ ಆತನ ಬ್ಯಾಂಕ್ ಖಾತೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹರಿದಾಸ್ ಬ್ಯಾಂಕ್ ಮತ್ತು ಮೊಬೈಲ್ ಫೈನಾನ್ಶಿಯಲ್ ಸರ್ವಿಸಸ್ (MFS) ಖಾತೆಗಳಲ್ಲಿ ಅನುಮಾನಾಸ್ಪದವಾಗಿ ಹಣದ ವಹಿವಾಟು ನಡೆದಿರುವುದನ್ನು ಬಾಂಗ್ಲಾದೇಶದ ಅಧಿಕಾರಿಗಳು ಪತ್ತೆ ಮಾಡಿದ್ದರು. ಈ ಹಣ ಎಲ್ಲಿಂದ ಬಂತು ಎಂಬುದಕ್ಕೆ ಆತನ ಬಳಿ ಯಾವುದೇ ಸಮರ್ಪಕ ದಾಖಲೆಗಳಾಗಲಿ, ಅಧಿಕೃತ ಆದಾಯದ ಮೂಲವಾಗಲಿ ಇರಲಿಲ್ಲ. ಯಾವುದೇ ಖಚಿತ ಆದಾಯದ ಮೂಲವಿಲ್ಲದ ವ್ಯಕ್ತಿಯ ಖಾತೆಯಲ್ಲಿ ದೊಡ್ಡ ಮೊತ್ತದ ಹಣದ ಹರಿದಾಡಿರುವುದು ಕಂಡುಬಂದಿದೆ. 

ಪೊಲೀಸರು ಆತನನ್ನು ಬಂಧಿಸಿ ತನಿಖೆಗೊಳಪಡಿಸಿದ್ದಾರೆ. ಇದೇ ತನಿಖೆಯ ಭಾಗವಾಗಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ರಾಮನ ವಿಗ್ರಹ ನಿರ್ಮಾಣಕ್ಕೂ, ಈ ಅನುಮಾನಾಸ್ಪದ ಹಣಕ್ಕೂ ಏನಾದರೂ ಸಂಬಂಧವಿದೆಯೇ ಎಂಬ ಬಗ್ಗೆ ಬಾಂಗ್ಲಾ ಪೊಲೀಸರು ಮುಂದುವರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈ ದೇಶದಲ್ಲಿ ಜೈಲುಗಳಿವೆ ಆದರೆ ಒಬ್ಬನೇ ಒಬ್ಬ ಕೈದಿ ಇಲ್ಲ! ಈ ವ್ಯವಸ್ಥೆ ಭಾರತದಲ್ಲೂ ಇರಬೇಕಿತ್ತು
12ನೇ ವಯಸ್ಸಲ್ಲೇ ಕಂಪೆನಿ ​CEO: 3 ದೇಶಗಳ ವಹಿವಾಟು; ವಿಶ್ವವನ್ನೇ ಬೆರಗುಗೊಳಿಸಿದ ಭಾರತದ ಬಾಲೆ