ವಿಷ ನೀಡಿ, ಸಂಧಾನ ಹಾಳು ಮಾಡಲು ರಷ್ಯಾದಿಂದ ಯತ್ನ

By Suvarna News  |  First Published Mar 29, 2022, 8:50 AM IST

* ಸಂಧಾನಕಾರರಿಗೆ ವಿಷ?

* ಸಂಧಾನ ಹಾಳು ಮಾಡಲು ರಷ್ಯಾದಿಂದ ಯತ್ನ: ವರದಿ


ವಾಷಿಂಗ್ಟನ್‌(ಮಾ.29): ರಷ್ಯಾ-ಉಕ್ರೇನ್‌ ಯುದ್ಧ ತಣಿಸಲು ಸಂಧಾನಕಾರರಾಗಿ ಕೆಲಸ ಮಾಡುತ್ತಿರುವ ರಷ್ಯಾದ ಧನಿಕ ರೋಮನ್‌ ಅಬ್ರಾಮೋವಿಚ್‌ ಹಾಗೂ ಇಬ್ಬರು ಉಕ್ರೇನಿ ಸಂಧಾನಕಾರರರನ್ನು ವಿಷವುಣಿಸಿ ಹತ್ಯೆ ಮಾಡುವ ಯತ್ನ ನಡೆದಿತ್ತು ಎಂದು ತಿಳಿದುಬಂದಿದೆ. ಸದ್ಯ ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಂಧಾನ ಪ್ರಕ್ರಿಯೆ ಹಾಳು ಮಾಡಲು ರಷ್ಯಾದ ಕೆಲವರು ಈ ಸಂಚು ನಡೆಸಿದ್ದರು ಎಂದು ಮಾಧ್ಯಮ ವರದಿಯೊಂದು ಹೇಳಿದೆ.

Tap to resize

Latest Videos

ಇವರು ಸಂಧಾನಕ್ಕೋಸ್ಕರ ಕೀವ್‌, ಮಾಸ್ಕೋ ಹಾಗೂ ಇತರ ಕಡೆ ಸಂಚರಿಸುತ್ತಿದ್ದರು. ಈ ವೇಳೆ ಕೀವ್‌ನಲ್ಲಿ ನಡೆದ ಸಂಧಾನಸಭೆ ಬಳಿಕ ಇವರು ಅಸ್ವಸ್ಥಗೊಂಡರು. ಆದರೆ ಈಗ ಇವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಉಕ್ರೇನ್‌ ವಿಭಜನೆ ರಷ್ಯಾದ ಹೊಸ ರಣತಂತ್ರ

ಅನಿರೀಕ್ಷಿತ ಪ್ರಮಾಣದ ಪ್ರತಿರೋಧದಿಂದಾಗಿ ಯುದ್ಧ ಗೆದ್ದು ಬೀಗುವ ರಷ್ಯಾ ಉತ್ಸಾಹಕ್ಕೆ ತಣ್ಣೀರು ಬಿದ್ದ ಬೆನ್ನಲ್ಲೇ, ನೆರೆಯ ಉಕ್ರೇನ್‌ ದೇಶವನ್ನು ವಿಭಜಿಸುವ ಮೂಲಕ ಪರೋಕ್ಷವಾಗಿ ಯುದ್ಧ ಗೆಲ್ಲುವ ತಂತ್ರಕ್ಕೆ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಶರಣಾಗಿದ್ದಾರೆ. ಕಳೆದ ಶುಕ್ರವಾರ ರಷ್ಯಾ ಸೇನೆ, ಉಕ್ರೇನ್‌ನಲ್ಲಿ ನಮ್ಮ ಮೊದಲ ಹಂತದ ಕಾರ್ಯಾಚರಣೆ ಬಹುತೇಕ ಮುಕ್ತಾಯವಾಗಿದೆ ಎಂದು ಹೇಳಿದ್ದು ಇದೇ ಕಾರಣಕ್ಕಾಗಿ ಎಂದು ಹೇಳಲಾಗಿದೆ.

ಒಂದು ವಾರ ಅಥವಾ 15 ದಿನದಲ್ಲಿ ಉಕ್ರೇನ್‌ ಅನ್ನು ಸೋಲಿಸಬಹುದು ಎನ್ನುವುದು ರಷ್ಯಾ ಲೆಕ್ಕಾಚಾರವಾಗಿತ್ತು. ಆದರೆ ವಿದೇಶಗಳ ನೆರವಿನಿಂದಾಗಿ ರಷ್ಯಾ ದಾಳಿಯನ್ನು ತಡೆಯುವಲ್ಲಿ ಉಕ್ರೇನ್‌ ಯಶಸ್ವಿಯಾಗಿದೆ. ಭಾರೀ ಹಾನಿಯಾದ ಹೊರತಾಗಿಯೂ ದೇಶದ ಯಾವುದೇ ಪ್ರಮುಖ ನಗರವೂ ಕೈತಪ್ಪದಂತೆ ಉಕ್ರೇನ್‌ ಸೇನೆ ನೋಡಿಕೊಂಡಿದೆ. ಹೀಗಾಗಿ ಉಕ್ರೇನ್‌ ಸದ್ಯಕ್ಕೆ ಕೈವಶವಾಗುವ ಸಾಧ್ಯತೆ ಇಲ್ಲ. ಜೊತೆಗೆ ಇಡೀ ಉಕ್ರೇನ್‌ ಮೇಲೆ ಯುದ್ಧ ಮುಂದುವರೆಸಿದರೆ, ತನಗೇ ಮತ್ತಷ್ಟುನಷ್ಟಎಂಬುದನ್ನು ಕಂಡುಕೊಂಡಿರುವ ರಷ್ಯಾ, ಇದೀಗ ಬಂಡುಕೋರರ ವಶದಲ್ಲಿರುವ ಉಕ್ರೇನ್‌ನ ಪ್ರಾಂತ್ಯವಾದ ಡೋನ್‌ಬಾಸ್‌ ಮೇಲೆ ತನ್ನ ಗುರಿಯನ್ನು ಹಾಕಿಕೊಂಡಿದೆ. ಈ ಪ್ರಾಂತ್ಯವನ್ನು ಮರಳಿ ಬಿಡಿಸಿಕೊಳ್ಳಲು ಉಕ್ರೇನ್‌ 8 ವರ್ಷದಿಂದ ಹೋರಾಡುತ್ತಿದೆ. ಆದರೆ ಇದು ಫಲ ಕೊಟ್ಟಿಲ್ಲ. ಹೀಗಾಗಿ ಬಂಡುಕೋರರಿಗೆ ಇನ್ನಷ್ಟುನೆರವು ನೀಡುವ ಮೂಲಕ ಡೋನ್‌ಬಾಸ್‌ ಪ್ರಾಂತ್ಯವನ್ನು ಉಕ್ರೇನ್‌ನಿಂದ ಬೇರ್ಪಡಿಸುವುದು. ಈ ಮೂಲಕ ದೇಶವನ್ನು ವಿಭಜಿಸುವುದು ರಷ್ಯಾದ ಹೊಸ ಕಾರ್ಯತಂತ್ರವಾಗಿ ಹೊರಹೊಮ್ಮಿದೆ ಎಂದು ಹೇಳಲಾಗಿದೆ.

ಹೀಗಾಗಿಯೇ ಕಳೆದ ಕೆಲ ದಿನಗಳಿಂದ ರಾಜಧಾನಿ ಕೀವ್‌, ಖಾರ್ಕೀವ್‌, ಖೋರ್ಸನ್‌ ಸೇರಿದಂತೆ ಕೆಲ ಪ್ರಮುಖ ನಗರಗಳ ಮೇಲೆ ರಷ್ಯಾ ದಾಳಿ ಕ್ಷಿಣವಾಗಿದೆ ಎಂದು ಅಮೆರಿಕ, ಬ್ರಿಟನ್‌ನ ಗುಪ್ತಚರ ಮೂಲಗಳು ಅಂದಾಜಿಸಿವೆ.

click me!