ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮದ್‌ ಮುಯಿಝು ಪದಚ್ಯುತಿ ಸನ್ನಿಹಿತ!

By Santosh Naik  |  First Published Jan 29, 2024, 4:05 PM IST


ಮಾಲ್ಡೀವ್ಸ್‌ ಸಂಸತ್ತಿನ ಅತಿದೊಡ್ಡ ಪಕ್ಷವಾಗಿರುವ ಎಂಡಿಪಿ ಸಂಸದರು ಸೋಮವಾರ ಮಧ್ಯಾಹ್ನ ಕೆಲ ಡೆಮೋಕ್ರಾಟ್‌ಗಳ ಬೆಂಬಲದೊಂದಿಗೆ ಅಧ್ಯಕ್ಷ ಮೊಹಮದ್‌ ಮುಯಿಝು ವಿರುದ್ಧ ಮಹಾಭಿಯೋಗದ ನಿರ್ಣಯಕ್ಕೆ ಸಹಿ ಪಡೆಯಲು ಯಶಸ್ವಿಯಾಗಿದ್ದಾರೆ.


ನವದೆಹಲಿ (ಜ.29): ತನ್ನ ಭಾರತ ವಿರೋಧಿ ನಿಲುವಿಗಾಗಿ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮದ್‌ ಮುಯಿಝು ಅಧಿಕಾರ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಮಾಲ್ಡೀವ್ಸ್‌ ದೇಶದ ಪ್ರಧಾನ ವಿರೋಧ ಪಕ್ಷ ಹಾಗೂ ಸಂಸತ್ತಿನಲ್ಲಿ ದೊಡ್ಡ ಮಟ್ಟದ ಬಹುಮತವನ್ನು ಹೊಂದಿರುವ ಮಾಲ್ಡೀವಿಯನ್‌ ಡೆಮಾಕ್ರಟಿಕ್‌ ಪಾರ್ಟಿ (ಎಂಡಿಪಿ), ಅಧ್ಯಕ್ಷ ಮೊಹಮದ್‌ ಮುಯಿಝು ವಿರುದ್ಧ ಮಹಾಭಿಯೋಗ ಅಂದರೆ ಇಂಪೀಚ್‌ಮೆಂಟ್‌ ನಿರ್ಣಯವನ್ನು ಸಲ್ಲಿಸಲು ಸಜ್ಜಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸೋಮವಾರ ಮಧ್ಯಾಹ್ನ ಮಹಾಭಿಯೋಗದ ನಿರ್ಣಯಕ್ಕೆ ಅಗತ್ಯವಾಗಿರುವಷ್ಟು ಸಹಿಗಳನ್ನು ಪಡೆಯಲು ಎಂಡಿಪಿ ಯಶಸ್ವಿಯಾಗಿದೆ. ಕೆಲವು ಡೆಮೋಕ್ರಾಟ್‌ಗಳು ಕೂಡ ಇದನ್ನು ಬೆಂಬಲಿಸಿದ್ದಾರೆ. ಆದರೆ, ಈ ದೇಶದ ವಿರೋಧಪಕ್ಷಗಳು ಈ ನಿರ್ಣಯವನ್ನು ಇನ್ನು ಸಂಸತ್ತಿನಲ್ಲಿ ಸಲ್ಲಿಕೆ ಮಾಡುವುದು ಮಾತ್ರವೇ ಬಾಕಿ ಉಳಿದಿದೆ. ಮಾಲ್ಡೀವ್ಸ್ ಪಾರ್ಲಿಮೆಂಟ್‌ನಲ್ಲಿ ಹಿಂಸಾಚಾರ ಭುಗಿಲೆದ್ದ ಒಂದು ದಿನದ ನಂತರ ಇಂಪೀಚ್‌ಮೆಂಟ್‌ ನಿರ್ಣಯದ ಸುದ್ದಿ ಬಂದಿದೆ. ಸರ್ಕಾರದ ಪರ ಪಕ್ಷಗಳಾದ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (ಪಿಎನ್‌ಸಿ) ಮತ್ತು ಪ್ರೋಗ್ರೆಸ್ಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್ (ಪಿಪಿಎಂ) ಸಂಸದರು ಕಲಾಪಕ್ಕೆ ಅಡ್ಡಿಪಡಿಸಿದ್ದು ಮಾತ್ರವಲ್ಲದೆ, ಸ್ಪೀಕರ್‌ಗಳ ಕಿವಿಗೆ ತುತ್ತೂರಿ ಊದುವ ಮೂಲಕ ಪ್ರತಿಭಟನೆ ಮಾಡಿದ್ದರು.

ಮಾಲ್ಡೀವ್ಸ್ ಮೂಲದ ನ್ಯೂಸ್ ಪೋರ್ಟಲ್ ಅಧಹಧು ಪ್ರಕಾರ, ಎಂಡಿಪಿ ಮತ್ತು ಡೆಮೋಕ್ರಾಟ್‌ಗಳ ಪ್ರತಿನಿಧಿಗಳನ್ನು ಒಳಗೊಂಡ ಒಟ್ಟು 34 ಸದಸ್ಯರು ಅಧ್ಯಕ್ಷರನ್ನು ಮಹಾಭೀಯೋಗ ಮಾಡುವ ನಿರ್ಣಯಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಸಂಪುಟದಲ್ಲಿರುವ ಸಚಿವರಿಗೆ ಸಂಸತ್ತಿನ ಅನುಮೋದನೆ ಪಡೆಯಲು ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಈ ಘರ್ಷಣೆ ಸಂಭವಿಸಿದೆ.  ಅಟಾರ್ನಿ ಜನರಲ್ ಅಹ್ಮದ್ ಉಶಮ್, ಆರ್ಥಿಕ ಸಚಿವ ಮೊಹಮ್ಮದ್ ಸಯೀದ್, ವಸತಿ ಸಚಿವ ಅಲಿ ಹೈದರ್ ಮತ್ತು ಇಸ್ಲಾಮಿಕ್‌ ಸಚಿವ ಡಾ. ಮೊಹಮ್ಮದ್ ಶಹೀಮ್ ಅಲಿ ಸಯೀದ್ ಅವರನ್ನು ಕ್ಯಾಬಿನೆಟ್‌ಗೆ ಸೇರಿಸಿಕೊಳ್ಳುವ ಸಮಯದಲ್ಲಿ ಈ ಘರ್ಷಣೆ ನಡೆದಿದೆ.

ಮಾಲ್ಡೀವ್ಸ್ ಸಂಸತ್ತು ಇತ್ತೀಚೆಗೆ ತನ್ನ ಸ್ಥಾಯಿ ಆದೇಶಗಳನ್ನು ತಿದ್ದುಪಡಿ ಮಾಡಿದ್ದು, ಸಂಸದರಿಗೆ ಮಹಾಭಿಯೋಗ ನಿರ್ಣಯವನ್ನು ಮಂಡಿಸಲು ಇದು ಸುಲಭವಾಗಿದೆ. ಎಂಡಿಪಿ ಮತ್ತು ಡೆಮೋಕ್ರಾಟ್‌ಗಳು ಒಟ್ಟು 56 ಸಂಸದರನ್ನು ಹೊಂದಿದ್ದಾರೆ. ಇದರಲ್ಲಿ 43 ಮಂದಿ ಎಂಡಿಪಿ ಸಂಸದರಾಗಿದ್ದರೆ, 12 ಮಂದಿ ಡೆಮೋಕ್ರಾಟ್‌ಗಳಾಗಿದ್ದಾರೆ. ಮಾಲ್ಡೀವ್ಸ್ ಸಂವಿಧಾನ ಮತ್ತು ಸಂಸತ್ತಿನ ಸ್ಥಾಯಿ ಆದೇಶಗಳ ಪ್ರಕಾರ,  ಅಧ್ಯಕ್ಷರನ್ನು 56 ಮತಗಳೊಂದಿಗೆ ಮಹಾಭಿಯೋಗ ಮಾಡಬಹುದು ಎಂದು ಹೇಳುತ್ತದೆ.

Tap to resize

Latest Videos

ಭಾರತದ ಮೇಲೆ ಯಾಕಿಷ್ಟು ದ್ವೇಷ? HAL ವಿಮಾನ ನಿರಾಕರಿಸಿದ ಮುಯಿಝು; ಹಾರಿಹೋದ ಮಾಲ್ಡೀವ್ಸ್‌ ಬಾಲಕನ ಪ್ರಾಣ ಪಕ್ಷಿ

ಭಾನುವಾರದಂದು ಪಿಎನ್‌ಸಿ ಮತ್ತು ಪಿಪಿಎಂ ಪಕ್ಷಗಳು ಸ್ಪೀಕರ್ ಮೊಹಮ್ಮದ್ ಅಸ್ಲಾಂ ಮತ್ತು ಡೆಪ್ಯೂಟಿ ಸ್ಪೀಕರ್ ಅಹ್ಮದ್ ಸಲೀಮ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಸಲ್ಲಿಸಿದವು. ಇಬ್ಬರೂ ಎಂಡಿಪಿಗೆ ಸೇರಿದವರಾಗಿದ್ದಾರೆ. ಒಟ್ಟು 23 ಶಾಸಕರು ಪ್ರಸ್ತಾವನೆಯನ್ನು ಅನುಮೋದಿಸಿದರು. ಘರ್ಷಣೆಯ ನಡುವೆ, ಕಂಡಿತೀಮು ಸಂಸದ ಅಬ್ದುಲ್ಲಾ ಶಹೀಮ್ ಅಬ್ದುಲ್ ಹಕೀಮ್ ಶಹೀಮ್ ಮತ್ತು ಕೆಂಧಿಕುಲ್ಹುಧೂ ಸಂಸದ ಅಹ್ಮದ್ ಈಸಾ ನಡುವೆ ಭಾನುವಾರ ಭಾರೀ ಜಗಳ ನಡೆದಿದೆ. 

 

ಭಾರತದ ಚಾಪರ್ ಬಳಸಲು ಒಪ್ಪದ ಮಾಲ್ಡೀವ್ಸ್; 13 ವರ್ಷದ ಬಾಲಕ ಸಾವು

ಘರ್ಷಣೆಯ  ಪರಿಣಾಮವಾಗಿ ಇಬ್ಬರೂ ಸಂಸದರು ಚೇಂಬರ್ ಬಳಿ ಬಿದ್ದಿದ್ದರಿಂದ ಶಾಹೀಂ ಅವರ ತಲೆಗೆ ಗಾಯವಾಗಿದೆ. ಈ ವೇಳೆ ಅಲ್ಪಸಂಖ್ಯಾತ ಮುಖಂಡ ಮೂಸಾ ಸಿರಾಜ್ ಮಧ್ಯ ಪ್ರವೇಶಿಸಿ ಘರ್ಷಣೆ ತಡೆಯಲು ಯತ್ನಿಸಿದರು. ನಂತರ, ಲಭ್ಯವಿರುವ ವರದಿಗಳ ಪ್ರಕಾರ, ಶಹೀಮ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.

click me!