Iran ವಿಮಾನಕ್ಕೆ ಬಾಂಬ್ ಬೆದರಿಕೆ: Chinaದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆದ ವಿಮಾನ

By BK AshwinFirst Published Oct 3, 2022, 5:39 PM IST
Highlights

ಮಹಾನ್ ಏರ್ ವಿಮಾನದ ಪೈಲಟ್‌ಗಳು ವಿಮಾನವನ್ನು ಚಂಡೀಗಢ ಮತ್ತು ಜೈಪುರದಲ್ಲಿ ಇಳಿಸಲು ನಿರಾಕರಿಸಿದರು ಮತ್ತು ಬದಲಿಗೆ ಚೀನಾದ ಕಡೆಗೆ ಹಾರಲು ನಿರ್ಧರಿಸಿದರು ಎಂದು ಭಾರತೀಯ ವಾಯುಪಡೆ ಮಾಹಿತಿ ನೀಡಿದೆ. 

ಇರಾನ್‌ನಿಂದ (Iran) ಚೀನಾಗೆ (China) ಬರುತ್ತಿದ್ದ ವಿಮಾನ ಭಾರತೀಯ ವಾಯು ಪ್ರದೇಶಕ್ಕೆ (Indian Air Space) ಬಂದ ಮೇಲೆ ಬಾಂಬ್ ಬೆದರಿಕೆ (Bomb Threat) ಕೇಳಿ ಬಂದಿತ್ತು. ಸದ್ಯದ ಮಾಹಿತಿ ಪ್ರಕಾರ, ವಿವಿಧ ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್‌ಗಳು ಹೇಳುವಂತೆ ಮಹಾನ್‌ ಏರ್ ಫ್ಲೈಟ್ 81 ಚೀನಾದ ಗುವಾಂಗ್‌ಝೌ (Guangzhou) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಇರಾನ್‌ನ ಟೆಹ್ರಾನ್‌ನಿಂದ (Tehran) ಹೊರಟಿದ್ದ ವಿಮಾನವು ಭಾರತೀಯ ವಾಯುಪ್ರದೇಶದ ಮೇಲೆ ಚೀನಾದ ಕಡೆಗೆ ಹಾರುತ್ತಿದ್ದ ವೇಳೆ ಭಾರತೀಯ ಅಧಿಕಾರಿಗಳಿಗೆ ಬಾಂಬ್ ಬೆದರಿಕೆಯ ಎಚ್ಚರಿಕೆ ಕರೆ ಬಂದಿತು. 

ನಂತರ ಏರ್‌ ಟ್ರಾಫಿಕ್‌ ಕಂಟ್ರೋಲ್‌ ಆ ವಿಮಾನದ ಪೈಲಟ್‌ಗಳಿಗೆ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲು ಅವರ ಆರಂಭಿಕ ಮನವಿಯನ್ನು ತಿರಸ್ಕರಿಸಿ, ಅದರ ಬದಲು ಜೈಪುರ ಅಥವಾ ಚಂಡೀಗಢ ವಿಮಾನ ನಿಲ್ದಾಣಗಳಲ್ಲಿ ಇಳಿಯಲು ವಿನಂತಿಸಿತು. ಆದರೆ, ಪೈಲಟ್‌ಗಳು ಆ ಎರಡೂ ವಿಮಾನ ನಿಲ್ದಾಣಗಳಲ್ಲಿ ಇಳಿಯಲು ನಿರಾಕರಿಸಿದ ನಂತರ, ಅವರು ತಮ್ಮ ಪ್ರಯಾಣವನ್ನು ಮುಂದುವರೆಸಿದರು ಮತ್ತು ಚೀನಾದಲ್ಲಿ ವಿಮಾನವನ್ನು ಲ್ಯಾಂಡ್‌ ಮಾಡಿದ್ದಾರೆ.

ಇದನ್ನು ಓದಿ; Iran - China ಪ್ರಯಾಣಿಕ ವಿಮಾನಕ್ಕೆ ಬಾಂಬ್ ಬೆದರಿಕೆ: ಭಾರತದಲ್ಲಿ ಲ್ಯಾಂಡಿಂಗ್ ನಿರಾಕರಣೆ

ಭಾರತದಲ್ಲಿ ಲ್ಯಾಂಡ್‌ ಮಾಡಲು ನಿರಾಕರಿಸಿದ ಪೈಲಟ್‌ಗಳು..!
 ಭಾರತೀಯ ವಾಯುಪ್ರದೇಶದ ಮೇಲೆ ಸಂಭಾವ್ಯ ಬಾಂಬ್ ಬೆದರಿಕೆಯ ಕುರಿತು ಭಾರತೀಯ ವಾಯುಪಡೆಯ ಇತ್ತೀಚಿನ ಹೇಳಿಕೆಯ ಪ್ರಕಾರ, ಮಹಾನ್ ಏರ್ ವಿಮಾನದ ಪೈಲಟ್‌ಗಳು ವಿಮಾನವನ್ನು ಚಂಡೀಗಢ ಮತ್ತು ಜೈಪುರದಲ್ಲಿ ಇಳಿಸಲು ನಿರಾಕರಿಸಿದರು ಮತ್ತು ಬದಲಿಗೆ ಚೀನಾದ ಕಡೆಗೆ ಹಾರಲು ನಿರ್ಧರಿಸಿದರು. ಟೆಹ್ರಾನ್‌ನಿಂದ ಚೀನಾದ ಗುವಾಂಗ್‌ಝೌಗೆ ಮಹಾನ್ ಏರ್ ವಿಮಾನವು ಭಾರತೀಯ ವಾಯುಪ್ರದೇಶದ ಮೇಲೆ ಹಾದುಹೋಗುವಾಗ ಬಾಂಬ್ ಬೆದರಿಕೆಯನ್ನು ವರದಿ ಮಾಡಿತ್ತು.

ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೈಲಟ್ ದೆಹಲಿಗೆ ಲ್ಯಾಂಡ್‌ ಮಾಡಲು ವಿನಂತಿಸಿದಾಗ, ಐಎಎಫ್ ಮತ್ತು ಎಟಿಸಿ ದೆಹಲಿ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಜೈಪುರ ಮತ್ತು ಚಂಡೀಗಢ ವಿಮಾನ ನಿಲ್ದಾಣಗಳಲ್ಲಿ ಇಳಿಯಲು ಅವರಿಗೆ ಆಯ್ಕೆಯನ್ನು ನೀಡಿತು. ಆದರೆ, ಪೈಲಟ್ ಅದನ್ನು ನಿರಾಕರಿಸಿದರು ಮತ್ತು IAF ಪ್ರಕಾರ ಚೀನಾದ ಕಡೆಗೆ ತನ್ನ ಪ್ರಯಾಣವನ್ನು ಮುಂದುವರೆಸಿದರು.

ಆದರೂ, ನಿಗದಿತ ಕಾರ್ಯವಿಧಾನದ ಪ್ರಕಾರ, ನಾಗರಿಕ ವಿಮಾನಯಾನ ಸಚಿವಾಲಯ (MoCA) ಮತ್ತು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​​​ಸೆಕ್ಯುರಿಟಿ (BCAS) ನೊಂದಿಗೆ ಜಂಟಿಯಾಗಿ, ವಿಮಾನವು ಭಾರತೀಯ ವಾಯುಪ್ರದೇಶದಾದ್ಯಂತ ವಾಯುಪಡೆಯಿಂದ ನಿಕಟವಾದ ರಾಡಾರ್ ಕಣ್ಗಾವಲು ಅಡಿಯಲ್ಲಿತ್ತು.

ಇದನ್ನೂ ಓದಿ: ಹಾರುತ್ತಿದ್ದ ಫ್ಲೈಟ್‌ಗೆ ಗುಂಡಿಕ್ಕಿದ ಬಂಡುಕೋರರು: ವಿಮಾನ ಸೀಳಿ ಬಂದು ವ್ಯಕ್ತಿಗೆ ತಾಗಿದ ಗುಂಡು

ಭಾರತೀಯ ವಾಯುಪ್ರದೇಶದಲ್ಲಿ ಬಾಂಬ್ ಬೆದರಿಕೆ
03 ಅಕ್ಟೋಬರ್ 2022 ರಂದು, ಇರಾನ್ ನೋಂದಣಿಯನ್ನು ಹೊಂದಿರುವ ವಿಮಾನಯಾನವು ಭಾರತೀಯ ವಾಯುಪ್ರದೇಶದ ಮೂಲಕ ಸಾಗುತ್ತಿರುವಾಗ ಬಾಂಬ್ ಭೀತಿಯ ಸೂಚನೆಯನ್ನು ಸ್ವೀಕರಿಸಲಾಯಿತು. ಬಳಿಕ, IAF ಫೈಟರ್ ಏರ್‌ಕ್ರಾಫ್ಟ್‌ಗಳು ವಿಮಾನವನ್ನು ಸುರಕ್ಷಿತ ದೂರದಲ್ಲಿ ಹಿಂಬಾಲಿಸಿತು ಎಂದು ತಿಳಿದುಬಂದಿದೆ. 

"ವಿಮಾನಕ್ಕೆ ಜೈಪುರದಲ್ಲಿ ಮತ್ತು ನಂತರ ಚಂಡೀಗಢದಲ್ಲಿ ಇಳಿಯುವ ಆಯ್ಕೆಯನ್ನು ನೀಡಲಾಯಿತು. ಆದರೂ, ಪೈಲಟ್ ಈ ಎರಡು ವಿಮಾನ ನಿಲ್ದಾಣಗಳಲ್ಲಿ ಯಾವುದಾದರೂ ಒಂದು ಮಾರ್ಗಕ್ಕೆ ತಿರುಗಿಸಲು ಇಷ್ಟವಿಲ್ಲ ಎಂದು ಘೋಷಿಸಿದರು. ಸ್ವಲ್ಪ ಸಮಯದ ನಂತರ, ಬಾಂಬ್ ಭೀತಿಯನ್ನು ನಿರ್ಲಕ್ಷಿಸಲು ಟೆಹ್ರಾನ್‌ನಿಂದ ಸೂಚನೆಯನ್ನು ಸ್ವೀಕರಿಸಲಾಯಿತು. ಬಳಿಕ, ವಿಮಾನವು ತನ್ನ ಅಂತಿಮ ಲ್ಯಾಂಡಿಂಗ್‌ ಆಗುವ ಸ್ಥಳದ ಕಡೆಗೆ ತನ್ನ ಪ್ರಯಾಣವನ್ನು ಮುಂದುವರೆಸಿತು" ಎಂದು ಭಾರತೀಯ ವಾಯು ಪಡೆ ಹೇಳಿದೆ.

click me!