ಚೊಚ್ಚಲ ಪ್ರಯಾಣ ಆರಂಭಿಸಿದ ಕೆಲ ನಿಮಿಷದಲ್ಲೇ ಮುಳುಗಿದ ಐಷಾರಾಮಿ ಹಡಗು

Published : Sep 04, 2025, 04:24 PM IST
Dolce Vento Yacht

ಸಾರಾಂಶ

ಟರ್ಕಿಯಲ್ಲಿ ಚೊಚ್ಚಲ ಪ್ರಯಾಣ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ 8 ಕೋಟಿ ರೂ. ಮೌಲ್ಯದ ಐಷಾರಾಮಿ ಹಡಗು ಮುಳುಗಿದೆ. ಘಟನೆಯ ಕಾರಣ ಇನ್ನೂ ತಿಳಿದುಬಂದಿಲ್ಲ.

ಪ್ರಯಾಣ ಆರಂಭಿಸಿದ ಕೆಲ ನಿಮಿಷದಲ್ಲಿ ಮುಳುಗಿದ ಹಡಗು:

ಚೊಚ್ಚಲ ಪ್ರಯಾಣ ಆರಂಭಿಸಿದ ಕೆಲ ಕ್ಷಣಗಳಲ್ಲೇ 1 ಮಿಲಿಯನ್ ಡಾಲರ್ ಅಂದರೆ ಸುಮಾರು 8 ಕೋಟಿಗೂ ಅಧಿಕ ಮೌಲ್ಯದ ಐಷಾರಾಮಿ ವಿಹಾರಿ ಹಡಗೊಂದು ಮುಳುಗಿದಂತಹ ಆಘಾತಕಾರಿ ಘಟನೆ ಟರ್ಕಿಯಲ್ಲಿ ನಡೆದಿದೆ. ಡೋಲ್ಸ್ ವೆಂಟೊ ಹೆಸರಿನ ಈ ವಿಹಾರಿ ನೌಕೆಯು ಸರಿಸುಮಾರು 85 ಅಡಿ ಉದ್ದವಿತ್ತು. ಇದು ಮಂಗಳವಾರ ಉತ್ತರ ಟರ್ಕಿಯ ಎರೆಗ್ಲಿ ಜಿಲ್ಲೆಯ ಜೊಂಗುಲ್ಡಕ್ ಕರಾವಳಿಯಲ್ಲಿ ತನ್ನ ಚೊಚ್ಚಲ ಪ್ರಯಾಣ ಆರಂಭಿಸಿದ ಕೆಲ ನಿಮಿಷದಲ್ಲಿ ಮುಳುಗಡೆಯಾಗಿದೆ. ಅದರ ಮೊದಲ ಪ್ರಯಾಣದ ಕೇವಲ ಹದಿನೈದು ನಿಮಿಷಗಳ ನಂತರ ಈ ಹಡಗು ಮುಳುಗಿದ್ದು, ಹಡಗಿನ ಮಾಲೀಕರು ದಡಕ್ಕೆ ಈಜುತ್ತಿರುವ ವೀಡಿಯೊ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.

$940,000 ಮೊತ್ತದ ಅಂದರೆ ಸುಮಾರಿ 8 ಕೋಟಿ ಮೊತ್ತದ ಡೋಲ್ಸ್ ವೆಂಟೊ ಹಡಗು:

ಸೂಪರ್‌ಯಾಚ್ಟ್ ಟೈಮ್ಸ್ ವರದಿಯ ಪ್ರಕಾರ ಈ ಹಡಗು ಮೆಡ್ ಯಿಲ್ಮಾಜ್ ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣ ಆಗಿತ್ತು. ಆದರೆ ವಿಹಾರ ಆರಂಭಿಸಿದ ಸ್ವಲ್ಪ ಹೊತ್ತಿನಲ್ಲೇ ಹಡಗು ಮುಳುಗಲು ಆರಂಭಿಸಿದ್ದರಿಂದ ಹಡಗಿನಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಭಯಗೊಂಡರು. ಕೂಡಲೇ ಅವರೆಲ್ಲರೂ ನೀರಿಗೆ ಜಿಗಿದಿದ್ದು,ಅಲ್ಲಿ ಹಡಗಿನ ಮಾಲೀಕ ಅವರ ಜೊತೆ ಸೇರಿಕೊಂಡರು. ಈ ಹಡಗಿನ ಒಟ್ಟು ಮೌಲ್ಯ ಅದರ ಬೆಲೆ ಸುಮಾರು $940,000 ಎಂದು ವರದಿಯಾಗಿದೆ. ಜೊಂಗುಲ್ಡಕ್ ಕರಾವಳಿಯ ನೀರಿನಲ್ಲಿ ಹಡಗು ನಿಧಾನವಾಗಿ ಮುಳುಗುತ್ತಿದ್ದಂತೆ, ಹಡಗಿ ಮಾಲೀಕ ಮತ್ತು ಇತರರು ಯಾವುದೇ ಹಾನಿಯಾಗದೆ ಕ್ರಮೇಣ ಈಜುತ್ತಾ ದಡ ಸೇರಿದ್ದಾರೆ. ಘಟನೆಗೆ ನಿಖರವಾದ ಕಾರಣ ಇನ್ನೂ ಬಹಿರಂಗವಾಗಿಲ್ಲ. ಡೋಲ್ಸ್ ವೆಂಟೊದ ತಾಂತ್ರಿಕ ತಪಾಸಣೆಯನ್ನು ಶೀಘ್ರದಲ್ಲೇ ನಡೆಸಲಾಗುವುದು ಎಂದು ಹಡಗುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.

ಹಡಗು ಮುಳುಗುತ್ತಿರುವ ದೃಶ್ಯ ವೈರಲ್: 8 ಕೋಟಿ ಹಣ ನೀರಲ್ಲಿ ಹೋಮ:

ಆದರೆ ಈ ಐಷಾರಾಮಿ ಡೋಲ್ಸ್ ವೆಂಟೊ ಹಡಗು ಮುಳುಗುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ಕೆಲವರು ಈ ವಿಹಾರಿ ನೌಕೆ ಸಮತೋಲನವನ್ನು ಹೊಂದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ದೋಣಿ ಕೆಲ ಕಡಿಮೆ ದರದ ವಸ್ತುಗಳಿಂದ ಮಾಡಿದ್ದರಿಂದ ಮುಳುಗಡೆಯಾಗಿದೆ ಎಂದು ವರದಿಯಾಗಿದೆ. ಅಷ್ಟೊಂದು ದೊಡ್ಡ ಗಾತ್ರದ ದೋಣಿಗೆ ಕೇವಲ $1 ಮಿಲಿಯನ್ ಡಾಲರ್‌ ವೆಚ್ಚವಾಗಿದ್ದರೆ, ಅದು ಏಕೆ ಮುಳುಗಿತು ಎಂಬುದನ್ನು ಅದು ವಿವರಿಸುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಹಡಗು ಮಾಲೀಕನ 8 ಕೋಟಿ ಹಣ ಈಗ ನೀರಲ್ಲಿ ಹೋಮ ಮಾಡಿದಂತಾಗಿದೆ.

ಇದನ್ನೂ ಓದಿ: ಕೇರ್‌ ಟೇಕರ್ ಆಟಕ್ಕೆ ಬರ್ತಿಲ್ಲ ಅಂತ ಗುರ್ ಗುರ್ ಎಂದು ಸಿಟ್ಟು ಮಾಡ್ಕೊಂಡ ಆನೆಮರಿ: ವೀಡಿಯೋ ಭಾರಿ ವೈರಲ್

ಇದನ್ನೂ ಓದಿ: ಆಗಷ್ಟೇ ಮಾಡಿದ ಹೊಸ ರಸ್ತೆಯ ಡಾಮರ್ ಕದ್ದು ಮನೆಗೆ ಹೊತ್ತೊಯ್ದ ಜನ

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!