ನವದೆಹಲಿ: ಪುಟ್ಟ ಮಕ್ಕಳನ್ನು ನಿಭಾಯಿಸುವುದು ಬಹಳ ಕಷ್ಟದ ಕೆಲಸ. ಅವರ ತುಂಟಾಟಗಳು ಮನಸ್ಸಿಗೆ ಮುದ ನೀಡಿದರೂ, ಅವರು ಮಾಡುವ ಕೆಲವು ಕಿತಾಪತಿಗಳು ಇದ್ದ ತಾಳ್ಮೆಯನ್ನೆಲ್ಲಾ ಪರೀಕ್ಷೆ ಮಾಡುವಂತೆ ಮಾಡುತ್ತವೆ. ಇನ್ನು ಪುಟ್ಟ ಮಕ್ಕಳ ಕೈಗೆ ಏನಾದರು ಸಿಕ್ಕಿದರೆ ದೊಡ್ಡ ಕಿತಾಪತಿಯನ್ನೇ ಮಾಡಿ ಬಿಡುತ್ತವೆ. ಗೋಡೆಗಳ ಮೇಲೆಲ್ಲಾ ಗೀಚಿ ಹಲವು ಚಿತ್ತಾರಗಳನ್ನು ಮಾಡಿ ಬಿಡುತ್ತಾರೆ. ಮಕ್ಕಳ ಕೈಗೆ ಕಾಡಿಗೆ, ಲಿಪ್‌ಸ್ಟಿಕ್, ಚಾಕು ಪೀಸು ಸಿಕ್ಕಿದರೆ ಕತೆ ಗೋವಿಂದ. ಗೋಡೆಗೆ ಮತ್ತೆ ಪೇಂಟಿಂಗ್ ಮಾಡಿಸಬೇಕಾಷ್ಟೇ, ಇದ್ದಲ್ಲೆಲ್ಲಾ ಗೀಚಿ ಗೋಡೆಯ ಬಣ್ಣ ಕೆಡಿಸಿಬಿಡುತ್ತಾರೆ ಮಕ್ಕಳು. ಹಾಗೆಯೇ ಇಲ್ಲೊಬ್ಬ ಪುಟ್ಟ ಬಾಲಕನ ಕೈಗೆ ಅಮ್ಮನ ಬಳಿ ಇದ್ದ ಲಿಪ್‌ಸ್ಟಿಕ್‌ನ ಸೆಟ್ ಸಿಕ್ಕಿದ್ದು, ಅದನ್ನು ತಂದು ಅಪ್ಪನ ಬಿಳಿ ಕಾರನ್ನು ಕೆಂಪಾಗಾಗಿಸಿದ್ದಾನೆ. ಈತನ ತುಂಟಾಟದ ವಿಡಿಯೋ ಅನೇಕರಿಗೆ ತಮ್ಮ ಬಾಲ್ಯದ ದಿನಗಳನ್ನು ತುಂಟಾಟಗಳನ್ನು ಮೆಲುಕು ಹಾಕುವಂತೆ ಮಾಡಿದೆ.
ಹೆಂಗೆಳೆಯರಿಗೆ ಮೇಕಪ್ ಕಿಟ್ (Makeup Kit), ಮೇಕಪ್ ಮಾಡಿ ಅಲಂಕರಿಸಿಕೊಳ್ಳುವುದು ಎಷ್ಟು ಇಷ್ಟವೋ ಅದೇ ರೀತಿ ಗಂಡು ಮಕ್ಕಳ ಕ್ರೇಜ್ ಕಾರಿನ (Car) ಮೇಲಿರುತ್ತದೆ. ಇತ್ತ ಕಾರು ಹೊಸದಾಗಿದ್ದರಂತು ಕಾರಿಗೆ ಸಣ್ಣ ಗೀರಾದರೂ ತಮ್ಮ ದೇಹಕ್ಕೆ ಗಾಯವಾಯ್ತೇನೋ ಎಂಬುವಷ್ಟರ ಮಟ್ಟಿಗೆ ಕಾರಿನ ಮಾಲೀಕ ಸಂಕಟಪಡುವುದುಂಟು. ಅಷ್ಟೊಂದು ವ್ಯಾಮೋಹ ಕಾರಿನ ಮೇಲಿರುತ್ತದೆ. ಕೆಲವರಂತು ಕಾರಿನ ಡೋರ್ ಜೋರಾಗಿ ಹಾಕಿದರೂ ಮನೆ ಮಂದಿಯೊಂದಿಗೆ ಜಗಳವಾಡುತ್ತಾರೆ. ಆದರೆ ಈ ಪುಟ್ಟ ಪೋರ ಅಪ್ಪನ ಕಾರನ್ನು ಅಮ್ಮನ ಲಿಪ್‌ಸ್ಟಿಕ್‌ನ್ನು(Lipstick) ಒಂದೇ ಏಟಿಗೆ ಹಾಳುಗೆಡವಿದ್ದಾನೆ. ಒಂದೇ ಏಟಿನಲ್ಲಿ ಎರಡು ಹಕ್ಕಿ ಹೊಡೆದಂತೆ ಆತ ಅಮ್ಮನ ಲಿಪ್‌ಸ್ಟಿಕ್ ತಗೊಬಂದು ಅಪ್ಪನ ಕಾರಿಗೆ ಉಜ್ಜಿ ಇಬ್ಬರು ಕುಳಿತುಕೊಂಡು ಅಳುವಂತೆ ಮಾಡಿದ್ದಾನೆ.
ತುಂಟಾಟದಿಂದ ವರದಿಗಾರ್ತಿಗೆ ಅಡ್ಡಿಪಡಿಸಿದ ಉಕ್ರೇನ್ ಮಗು... ವಿಡಿಯೋ
ಈ ತುಂಟ ಬಾಲಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ಸಾಕಷ್ಟು ವೈರಲ್ ಆಗಿದ್ದು, ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ, ಬಾಲಕ ಲಿಪ್‌ಸ್ಟಿಕ್ ಜೊತೆ ಕಾರಿನ ಬಳಿ ಬಂದು ಒಂದು ಭಾಗದ ಬಳಿ ಪೂರ್ತಿಯಾಗಿ ಕೆಂಪು ಬಣ್ಣದ ಲಿಪ್‌ಸ್ಟಿಕ್‌ನಿಂದ ಗೀಚಿದ್ದು, ಅದು ನೋಡುವುದಕ್ಕೆ ಹೊಸ ಡಿಸೈನ್‌ನಂತೆ ಕಾಣಿಸುತ್ತಿದೆ. ಕಾರಿನ ಮೇಲೆ ಗೀಚಿದ ಬಳಿಕ ಲಿಪ್‌ಸ್ಟಿಕ್‌ನ್ನೆಲ್ಲಾ ಕಾರಿನ ಬಳಿಯೇ ಬಿಟ್ಟು ಬಾಲಕ ತನ್ನ ಪುಟ್ಟ ಸೈಕಲ್ ರೀತಿಯ ಆಟಿಕೆಯ ಮೇಲೆ ಕುಳಿತು ಆ ಸ್ಥಳದಿಂದ ಎಸ್ಕೇಪ್ ಆಗುತ್ತಾನೆ.
ಮಗನ ಕಿತಾಪತಿಗೆ ಅಪ್ಪನ ಭಯಾನಕ ರಿಫ್ಲೈ... ಫೋಸ್ಟ್ ವೈರಲ್
Morissa Schwartz ಎಂಬುವವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ತುಂಟ ಬಾಲಕನ ಕಿತಾಪತಿಗೆ ದಂಗಾಗಿದ್ದಾರೆ. ಇದು ನಮಗೆ ನಮ್ಮ ಬಾಲ್ಯವನ್ನು ನೆನಪಿಸಿತು. ನಾವು ಹಾಗೂ ನನ್ನಿಬ್ಬರು ಒಡಹುಟ್ಟಿದವರು ಸೇರಿ ನಮ್ಮ ತಂದೆಯ ಕಾರಿಗೆ ಇದೇ ರೀತಿ ಮಾಡಿದ್ದೆವು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಓಡು ಮಗನೇ ಓಡು ಒಳ್ಳೆ ಕೆಲಸ ಮಾಡಿದ್ದಿಯಾ ಮುಂದಿನ ಸಲ ಸ್ಕ್ರೂ ಡ್ರೈವರ್ ಜೊತೆಗೆ ಬಾ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಬಾಲಕನ ವಿಡಿಯೋ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ