ಶ್ವಾನದೊಂದಿಗೆ ಮಗುವಿನ ಆಟ: ಆಡುತ್ತಾ ಆಡುತ್ತಾ ಮುತ್ತಿಟ್ಟ ಪುಟ್ಟ

Published : May 22, 2022, 01:13 PM IST
ಶ್ವಾನದೊಂದಿಗೆ ಮಗುವಿನ ಆಟ: ಆಡುತ್ತಾ ಆಡುತ್ತಾ ಮುತ್ತಿಟ್ಟ ಪುಟ್ಟ

ಸಾರಾಂಶ

ಮಗು ಹಾಗೂ ಶ್ವಾನದ ಆಟ ಶ್ವಾನಕ್ಕೆ ಮುತ್ತಿಟ್ಟ ಪುಟ್ಟ ಮುದ್ದಾದ ವಿಡಿಯೋ ವೈರಲ್‌

ಮನುಷ್ಯರು ಹಾಗೂ ಪುಟ್ಟ ಮಕ್ಕಳೊಂದಿಗೆ ಶ್ವಾನಗಳು ತೋರುವ ಪ್ರೀತಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅಂತಹ ಸಾಕಷ್ಟು ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ಸದಾ ನೋಡುತ್ತಿರುತ್ತೇವೆ. ಮಕ್ಕಳೊಂದಿಗೆ ತಾವು ಮಕ್ಕಳಾಗುವ ಶ್ವಾನಗಳು ನೊಂದ ಮನಗಳ ಆತಂಕವನ್ನು ಕಳೆದು ಮನದಲ್ಲಿ ಖುಷಿ ಮೂಡಿಸುತ್ತವೆ. ಹಾಗೆಯೇ ಇಲ್ಲೊಂದು ಶ್ವಾನ ಹಾಗೂ ಪುಟ್ಟ ಮಗುವಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರ ಮೊಗದಲ್ಲಿ ನಗು ಮೂಡಿಸುತ್ತಿದೆ. 

ಬಿಟ್ಟಿಂಗ್ಬಿಡನ್‌ ಎಂಬ ಟ್ವಿಟ್ಟರ್‌ ಖಾತೆ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ. ವಿಡಿಯೋದಲ್ಲಿ ಕಾಣಿಸುವಂತೆ ಶ್ವಾನವೊಂದು ಕುಳಿತಿದ್ದು, ಅದರ ಬಳಿ ಬರುವ ಪುಟ್ಟ ಬಾಲಕ ಶ್ವಾನಕ್ಕೆ ಶೇಕ್ ಹ್ಯಾಂಡ್ ಮಾಡುವಂತೆ ಕೈ ನೀಡುತ್ತದೆ. ಈ ವೇಳೆ ಶ್ವಾನ ಒಮ್ಮೆ ಬಲಗೈನ್ನು ಮತ್ತೊಮ್ಮೆ ಎಡಗೈಯನ್ನು ನೀಡುತ್ತದೆ. ಈ ವೇಳೆ ಬಾಲಕ ಮಗು ಶ್ವಾನದ ಕೈಯನ್ನು ಎತ್ತಿ ಅದರ ಕೈಗೆ ಮುತ್ತಿಡುತ್ತದೆ. ಒಟ್ಟಿನಲ್ಲಿ ತುಂಬಾ ಮುದ್ದೆನಿಸುವ ಈ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಅಲ್ಲದೇ ಮೆಚ್ಚುಗೆವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. 

 

ಪ್ರೀತಿ ಕರುಣೆ ಕಾಳಜಿ ತೋರಿಸುವುದಕ್ಕೆ ಯಾವುದೇ ಮಿತಿಗಳಿರುವುದಿಲ್ಲ. ಪ್ರೀತಿ (love) ಕಾಳಜಿಯ ಭಾವನೆ ಕೇವಲ ಮನುಷ್ಯರಲ್ಲಿ ಮಾತ್ರ ಇಲ್ಲ ಪ್ರಾಣಿಗಳಿಗೂ ಭಾವನೆಗಳಿದೆ. ಅದೂ ಹಲವು ಬಾರಿ ಸಾಬೀತಾಗಿದೆ. ತಾಯಿ ಇಲ್ಲದ ತಬ್ಬಲಿ ಮಕ್ಕಳಿಗೆ ಶ್ವಾನವೊಂದು ತೋರಿಸುತ್ತಿರುವ ಪ್ರೀತಿ ವೈರಲ್‌ ಆಗಿದೆ. ತಾಯಿಯಿಂದ ದೂರದ ಮೂರು ಹುಲಿಮರಿಗಳನ್ನು ಶ್ವಾನವೊಂದು ತನ್ನ ಮಕ್ಕಳಂತೆ ಸಲಹುತ್ತಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ನದಿಯಲ್ಲಿ ಮುಳುಗುತ್ತಿದ್ದ ಶ್ವಾನವನ್ನು ರಕ್ಷಿಸಿದ ಯುವಕ: ವಿಡಿಯೋ ವೈರಲ್

ಲಾಬ್ರಡಾರ್ ತಳಿಯ ಶ್ವಾನವೊಂದು ಮೂರು ಹುಲಿ ಮರಿಗಳನ್ನು ತನ್ನ ಮಕ್ಕಳಂತೆ ಮುದ್ದಾಡುತ್ತಿದೆ. ಈ ತಾಯಿ ಶ್ವಾನ (Dog) ಹಾಗೂ ಪುಟ್ಟ ಹುಲಿ ಮರಿಗಳ (Tiger cube) ನಡುವಿನ ಪ್ರೀತಿಯ ಬಂಧಕ್ಕೆ ನೆಟ್ಟಿಗರು ಕೂಡ ಭಾವುಕರಾಗಿ ಶಹಭಾಷ್ ಅಂದಿದ್ದಾರೆ. ಇದು ಚೀನಾದ ವಿಡಿಯೋ ಆಗಿದ್ದು, ಹುಲಿ ಮರಿಗಳು ನಾಯಿಯ ಸುತ್ತ ಸುತ್ತ ಸುತ್ತುತ್ತ ಆಟವಾಡುತ್ತಿವೆ. ಈ ವಿಡಿಯೋದ ಮೂಲದ ಪ್ರಕಾರ ಈ ಮರಿಗಳಿಗೆ ಜನ್ಮ ನೀಡಿದ ತಾಯಿ ಹುಲಿ ನಂತರ ಇವುಗಳಿಗೆ ಹಾಲುಡಿಸಲು ನಿರಾಕರಿಸಿತ್ತು ಎಂದು ತಿಳಿದು ಬಂದಿದೆ.

ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ  A Piece of Nature ಎಂಬ ಖಾತೆಯಿಂದ ಪೋಸ್ಟ್‌ ಮಾಡಲಾಗಿದೆ. 16,000 ಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಈ ಮೂಲ ವಿಡಿಯೋವನ್ನು ಏಪ್ರಿಲ್ 27 ರಂದೇ ಪೋಸ್ಟ್ ಮಾಡಲಾಗಿತ್ತು. ಈ ವಿಡಿಯೋ ನೋಡಿದ ಹಲವು ಶ್ವಾನ ಪ್ರಿಯರು ಶ್ವಾನದ ಈ ತಾಯಿ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲ್ಯಾಬ್‌ ಶ್ವಾನಗಳನ್ನು ಹೊಂದಿರುವುದು ನಿಜವಾದ ಆಶೀರ್ವಾದ ಎಂದು ಓರ್ವ ಕಾಮೆಂಟ್ ಮಾಡಿದ್ದಾರೆ. ಬಹುಶಃ ಈ ಮರಿಗಳು ತಮ್ಮ ಹೊಸ ತಾಯಿಯನ್ನು ಇಷ್ಟಪಡಬಹುದು ಅವುಗಳನ್ನು ಬೆಳೆಯಲು ಬಿಡೋಣ. ಹುಲಿ ಹಾಗೂ ಶ್ವಾನ ಬೇರೆಯದೇ ಪ್ರಬೇಧಗಳು ಆದರೆ ಪ್ರೀತಿ ಮಾತ್ರ ಒಂದೇ ಎಂದು ಕಾಮೆಂಟ್ ಮಾಡಿದ್ದಾರೆ.

ಜಾರು ಬಂಡಿ ಆಡುವ ಶ್ವಾನ: ವಿಡಿಯೋ ವೈರಲ್

ಒಟ್ಟಿನಲ್ಲಿ ತಾಯಿ ಪ್ರೀತಿಗೆ ಮಿತಿ ಇರುವುದಿಲ್ಲ. ಆದಾಗ್ಯೂ ತನ್ನ ಮಕ್ಕಳಂತೆ ಬೇರೆಯವರ ಮಕ್ಕಳನ್ನು ಅಷ್ಟೇ ಚೆನ್ನಾಗಿ ನೋಡಿಕೊಳ್ಳುವವರು ಸಿಗುವುದು ವಿರಳ. ಆದರೆ ಈ ಶ್ವಾನ ತನ್ನದು ಮತ್ತೊಬ್ಬರದು ಎಂಬ ಬೇಧವಿಲ್ಲದೇ ಈ ಮರಿಗಳನ್ನು ನೋಡಿಕೊಳ್ಳುತ್ತಿದೆ. ತಾನು ತನ್ನದು ಎಂದು ಕಿತ್ತಾಡುವ ಮನುಷ್ಯರಿಗೆ ನಮ್ಮನ್ನು ನೋಡಿ ಬುದ್ಧಿ ಕಲಿಯಿರಿ ಎಂದು ಹೇಳುವಂತಿದೆ ಈ ವಿಡಿಯೋ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ