RIP Lata Mangeshkar :' ಅವರ  ಹಾಡು ಕೇಳುವುದೇ ನೆಮ್ಮದಿ'  ಲತಾ ಸ್ಮರಿಸಿದ ಇಮ್ರಾನ್ ಖಾನ್

Published : Feb 07, 2022, 06:29 PM IST
RIP Lata Mangeshkar :' ಅವರ  ಹಾಡು ಕೇಳುವುದೇ ನೆಮ್ಮದಿ'  ಲತಾ ಸ್ಮರಿಸಿದ ಇಮ್ರಾನ್ ಖಾನ್

ಸಾರಾಂಶ

* ಲತಾ ಮಂಗೇಶ್ಕರ್ ಸ್ಮರಿಸಿದ ಇಮ್ರಾನ್ ಖಾನ್ * ಸಂಗೀತ ಲೋಕ ಅಗಲಿದ್ದ ಮೇರು ಗಾಯಕಿ * ಮುಂಬೈನಲ್ಲಿ ಅಂತಿಮ ಸಂಸ್ಕಾರ ನೆರವೇರಿತ್ತು

ಬೀಜಿಂಗ್(ಫೆ. 07)  ಅಗಲಿದ ಸಂಗೀತ  ಲೋಕದ ತಾರೆ ಲತಾ ಮಂಗೇಶ್ಕರ್ (Lata Mangeshkar) ಅವರಿಗೆ ಪಾಕಿಸ್ತಾನದ (Pakistan) ಪ್ರಧಾನಿ ಇಮ್ರಾನ್ ಖಾನ್ (Imran Khan) ನಮನ ಸಲ್ಲಿಸಿದ್ದಾರೆ.  ಕತಾ ಅವರ ಗಾಯನ ಕೇಳಿದರೆ ಮನಸಿಗೆ ನೆಮ್ಮದಿ ಸಿಗುತ್ತದೆ ಎಂದು ಸ್ಮರಿಸಿಕೊಂಡಿದ್ದಾರೆ.

ತಮ್ಮ ಟ್ವಿಟರ್ (Social Media) ಖಾತೆ ಮೂಲಕ ಲತಾ ಅವರನ್ನು ಸ್ಮರಿಸಿದ್ದಾರೆ.  ವಿಶ್ವ ಕಂಡ ಶ್ರೇಷ್ಠ ಗಾಯಕಿಯನ್ನು ಕಳೆದುಕೊಂಡಿದ್ದೇವೆ ಎಂದಿದ್ದಾರೆ.  ಉಪಖಂಡ ಅದ್ಭುತ ಗಾಯಕಿಯನ್ನು ಕಳೆದುಕೊಂಡಿದೆ ಎಂದು ಚೀನಾ ಪ್ರವಾಸದಲ್ಲಿರುವ ಇಮ್ರಾನ್ ಹೇಳಿದ್ದಾರೆ.

ಅನಾರೋಗ್ಯದ ಸಮಸ್ಯೆ ಎದುರಿಸುತ್ತಿದ್ದ ಗಾಯಕಿ ತಮ್ಮ 92 ನೇ ವಯಸ್ಸಿನಲ್ಲಿ ಮುಂಬೈ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಬಾಲಿವುಡ್ ಮತ್ತು ಕ್ರೀಡಾ ಕ್ಷೇತ್ರದ ಗಣ್ಯರು ಸೇರಿದಂತೆ  ಪ್ರಧಾನಿ ನರೇಂದ್ರ ಮೋದಿ ಸಂತಾಪ  ತಿಳಿಸಿ ಅಂತಿಮ ದರ್ಶನ ಪಡೆದುಕೊಂಡಿದ್ದರು. 36 ಭಾಷೆಗಳಲ್ಲಿ  ಸುಮಾರು 30  ಸಾವಿರಕ್ಕೂ ಅಧಕ ಗೀತೆಗಳನ್ನು ಹಾಡಿರುವ ಗಾಯಕಿಯನ್ನು ಇಡೀ ಭಾರತ ಸ್ಮರಿಸಿತ್ತು. ಎರಡು ದಿನಗಳ ಶೋಕಾಚಣೆಗೆ ಸರ್ಕಾರ ತಿಳಿಸಿದೆ. 

ಲತಾ ಜೀವನದ ಹಾದಿ 

ಕೊರೋನಾ ವೈರಸ್‌ಗೆ ತುತ್ತಾದ ಲತಾ ಮಂಗೇಶ್ಕರ್ ಜನವರಿ 8 ರಂದು ಮುಂಬೈನ ಬ್ರೀಜ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಸ್ಥಿತಿ ಗಂಭೀರ ಸ್ಥಿತಿ ತಲುಪಿದ ಕಾರಣ ಐಸಿಯುನಲ್ಲಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗಿತ್ತು. ಆದರೆ ಕಳೆದ ವಾರ ಆರೋಗ್ಯ ಚೇತರಿಸಿಕೊಂಡ ಕಾರಣ ವೆಂಟಿಲೇಟರ್ ತೆಗಯಲಾಗಿತ್ತು. ಆದರೆ ಕಳೆದ ನಾಲ್ಕು ದಿನಗಳಿಂದ ಆರೋಗ್ಯ ಮತ್ತೆ ಹದಗೆಟ್ಟಿತು. 

2019ರ ನವೆಂಬರ್ ತಿಂಗಳಲ್ಲಿ ಲತಾ ಮಂಗೇಶ್ಕರ್ ನ್ಯೂಮೋನಿಯಾ ಕಾರಣ ಆಸ್ಪತ್ರೆ ದಾಖಲಾಗಿದ್ದರು. ಸತತ 28 ದಿನಗಳ ಚಿಕಿತ್ಸೆ ಬಳಿಕ ಲತಾ ಮಂಗೇಶ್ಕರ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಇಷ್ಟೇ ಅಲ್ಲ ಆರೋಗ್ಯ ಕೂಡ ಸುಧಾರಣೆಯಾಗಿತ್ತು. ಈ ಬಾರಿಯೂ ಸತತ ಚಿಕಿತ್ಸೆ ಬಳಿಕ ಲತಾಜಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಎಲ್ಲರೂ ಪ್ರಾರ್ಥಿಸಿದ್ದರು. 

ಮಧ್ಯಪ್ರದೇಶದ ಇಂದೋರ್‌ನಲ್ಲಿ ಹುಟ್ಟಿದ ಲತಾ ಮಂಗೇಶ್ಕರ್, ತಮ್ಮ 13ನೇ ವಯಸ್ಸಿಗೆ ಹಾಡುಗಾರಿಕೆ ಆರಂಭಿಸಿದವರು.  ಲತಾ ಮಂಗೇಶ್ಕರ್  ಹಾಡಿದ ಬಾಲಿವುಡ್ ಕೊನೆಯ ಚಿತ್ರ ವೀರ್ ಝರಾ. ಇನ್ನು ಭಾರತೀಯ ಸೇನೆಗಾಗಿ  ಸುಗಂಧ್ ಮುಜೆ ಇಸ್ ಮಿಟ್ಟಿ ಕಿ ಹಾಡು ಕೊನೆಯ ಆಲ್ಬಮ್ ಹಾಡಾಗಿದೆ. ಇದು ಮಾರ್ಚ್ 30, 2021ರಲ್ಲಿ ರಿಲೀಸ್ ಆಗಿದೆ. ಲತಾ ಮಂಗೇಶ್ಕರ್ ಪದ್ಮ ಭೂಷಣ, ಪದ್ಮ ವಿಭೂಷಣ, ದಾದಾ ಸಾಹೇಬ್ ಪಾಲ್ಕೆ ಸೇರಿದಂತೆ ಹಲವು ಸಿನಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ ಎಂದ ಪಾಕಿಸ್ತಾನ ಸೇನೆ, ಕೋಲಾಹಲ ಶುರು