ಅತೀ ಹೆಚ್ಚು ಶ್ರೀಮಂತರಿರುವ ವಿಶ್ವದ ಮಹಾನಗರಿ ಪಟ್ಟಿ ಬಿಡುಗಡೆ: ನಮ್ಮ ಬೆಂಗಳೂರಿಗೆ ಎಷ್ಟನೇ ಸ್ಥಾನ

Published : Apr 20, 2023, 12:58 PM ISTUpdated : Apr 20, 2023, 01:06 PM IST
ಅತೀ ಹೆಚ್ಚು ಶ್ರೀಮಂತರಿರುವ ವಿಶ್ವದ ಮಹಾನಗರಿ ಪಟ್ಟಿ ಬಿಡುಗಡೆ: ನಮ್ಮ ಬೆಂಗಳೂರಿಗೆ ಎಷ್ಟನೇ ಸ್ಥಾನ

ಸಾರಾಂಶ

ಲಂಡನ್‌ನ ಹೂಡಿಕೆ ವಲಸೆ ಸಲಹಾ ಸಂಸ್ಥೆ ಹೆನ್ಲಿ & ಪಾರ್ಟನರ್ ಅತೀಹೆಚ್ಚು ಮಿಲಿಯನೇರ್‌ (ಲಕ್ಷಾಧಿಪತಿಗಳು- 10 ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿರುವವರು) ಗಳನ್ನು ಹೊಂದಿರುವ ವಿಶ್ವದ ಶ್ರೀಮಂತ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.  

ಲಂಡನ್‌: ಲಂಡನ್‌ನ ಹೂಡಿಕೆ ವಲಸೆ ಸಲಹಾ ಸಂಸ್ಥೆ ಹೆನ್ಲಿ & ಪಾರ್ಟನರ್ ಅತೀಹೆಚ್ಚು ಮಿಲಿಯನೇರ್‌ (ಲಕ್ಷಾಧಿಪತಿಗಳು- 10 ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿರುವವರು) ಗಳನ್ನು ಹೊಂದಿರುವ ವಿಶ್ವದ ಶ್ರೀಮಂತ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.  ಆ ಪಟ್ಟಿ ಪ್ರಕಾರ ಭಾರತದ ಯಾವ ನಗರದಲ್ಲಿ ಎಷ್ಟು ಲಕ್ಷಾಧಿಪತಿಗಳಿದ್ದಾರೆ ಎಂಬ ಡಿಟೇಲ್ ಇಲ್ಲಿದೆ. 

ವಿಶ್ವದ ಶ್ರೀಮಂತ ನಗರಗಳ ಪಟ್ಟಿ 2023ರ ಪ್ರಕಾರ ಯುನೈಟೆಡ್ ನೇಷನ್ (USA)ನ ನ್ಯೂಯಾರ್ಕ್‌ ನಗರ ಅತೀ ಶ್ರೀಮಂತ ನಗರವೆನಿಸಿದೆ.  ಟಾಪ್ 10 ಶ್ರೀಮಂತ ನಗರಗಳ ಪಟ್ಟಿಯಲ್ಲಿ ಅಮೆರಿಕಾದ ನ್ಯೂಯಾರ್ಕ್ ನಗರ ಸೇರಿದಂತೆ ಜಪಾನ್‌ನ   ಟೋಕಿಯೋ, ಅಮೆರಿಕಾದ ದ ಬೇ ಏರಿಯಾ, ಯುನೈಟೆಡ್ ಕಿಂಗ್‌ಡಮ್‌ನ ಲಂಡನ್‌, ಸಿಂಗಾಪುರ್, ಲಾಸ್ ಎಂಜಲೀಸ್, ಚೀನಾದ ಹಾಂಗ್‌ಕಾಂಗ್, ಬೀಜಿಂಗ್, ಶಾಂಘೈ ಹಾಗೂ ಆಸ್ಟ್ರೇಲಿಯಾದ ಸಿಡ್ನಿ ಇವೆ. 

ಇವಲ್ಲದೇ 1.25 ಲಕ್ಷ ಲಕ್ಷಾಧಿಪತಿಗಳನ್ನು  ಹೊಂದುವ ಮೂಲಕ ದೇಶದ ಐದು ಮಹಾನಗರಗಳು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. 59,400 ಲಿಲಿಯನೇರ್‌ಗಳನ್ನು ಹೊಂದಿರುವ ವಾಣಿಜ್ಯ ನಗರಿ ಮುಂಬೈ, 30200 ಲಕ್ಷ ಜನರನ್ನು ಹೊಂದಿರುವ ಮೂಲಕ ರಾಷ್ಟ್ರ ರಾಜಧಾನಿ ದೆಹಲಿ, 12, 600 ಲಕ್ಷಾಧಿಪತಿಗಳನ್ನು ಹೊಂದಿರುವ ಗಾರ್ಡನ್ ಸಿಟಿ ನಮ್ಮ ಬೆಂಗಳೂರು,  12,100 ಜನ ಲಕ್ಷಾಧಿಪತಿಗಳನ್ನು ಹೊಂದಿರುವ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ,  11,100 ಲಕ್ಷಾಧಿಪತಿಗಳನ್ನು ಹೊಂದಿರುವ ಮುತ್ತಿನ ನಗರಿ ಹೈದರಾಬಾದ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಮುಂಬೈ To ಬೆಂಗಳೂರು; ಇಲ್ಲಿದೆ ಭಾರತದ 10 ಶ್ರೀಮಂತ ನಗರದ ಲಿಸ್ಟ್!

ವರದಿಯ ಪ್ರಕಾರ ಈ ಎಲ್ಲಾ ಅಂಕಿಅಂಶಗಳು ಡಿಸೆಂಬರ್ 31, 2022 ರವೆರೆಗಿನ ಸಂಪತ್ತನ್ನು ಗಣನೆಗೆ ತೆಗೆದುಕೊಂಡು ಮಾಡಲಾಗಿದೆ.  ಮತ್ತು 'ಹೆಚ್ಚಿನ ನಿವ್ವಳ ಮೌಲ್ಯ ಹೊಂದಿರುವ ವ್ಯಕ್ತಿಗಳು' ಅಥವಾ HNWI(High-Net-Worth Individual) 1 ಮಿಲಿಯನ್ USD ಅಥವಾ ಅದಕ್ಕಿಂತ ಹೆಚ್ಚಿನ ಹೂಡಿಕೆ ಮಾಡಬಹುದಾದ ಸಂಪತ್ತನ್ನು ಹೊಂದಿರುವ ವ್ಯಕ್ತಿಗಳಾಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಮತ್ತು ಪ್ರತಿ ನಗರದಲ್ಲಿ ವಾಸಿಸುವ ಹೆಚ್ಚಿನ ನಿವ್ವಳ ಮೌಲ್ಯ ಹೊಂದಿರುವ ವ್ಯಕ್ತಿಗಳು ಗಳನ್ನು ಮಾತ್ರ ಈ ಪಟ್ಟಿ ಒಳಗೊಂಡಿದೆ. 

ಜಾಗತಿಕ 15 ಶ್ರೀಮಂತ ನಗರಗಳಲ್ಲಿ ಮುಂಬೈಗೂ ಸ್ಥಾನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ