ಬ್ರಿಟನ್ ಸಂಪುಟದಲ್ಲಿ ಭಾರತ ಮೂಲದ ಯುವತಿಗೆ ಸ್ಥಾನ; ಮಹತ್ವದ ಜವಾಬ್ದಾರಿ ನೀಡಿದ ಕೀರ್ ಸ್ಟಾರ್ಮರ್ 

By Mahmad Rafik  |  First Published Jul 7, 2024, 10:53 AM IST

ಮ್ಯಾಂಚೆಸ್ಟರ್‌ನಲ್ಲಿ ಜನಿಸಿದ ಲಿಸಾ ನ್ಯಾಂಡಿ, ವಾಯುವ್ಯ ಇಂಗ್ಲೆಂಡ್‌ನ ವಿಗನ್ ಕ್ಷೇತ್ರದ ಸಂಸದೆಯಾಗಿದ್ದಾರೆ. ವಿಗನ್ ಕ್ಷೇತ್ರದಿಂದ ಲೇಬರ್ ಪಕ್ಷದ ಅಭ್ಯರ್ಥಿಯಾಗಿ ಲಿಸಾ ಸ್ಪರ್ಧಿಸಿದ್ದರು.


ಲಂಡನ್: ಬ್ರಿಟನ್ ಚುನಾವಣೆ ಫಲಿತಾಂಶ ಹೊರ ಬಂದಿದ್ದು, ಗುರುವಾರ ಕೀರ್ನ ಸ್ಟಾರ್ಮರ್ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕೀರ್ ಸ್ಟಾರ್ಮರ್ ಸಂಪುಟ ಸಚಿವರನ್ನು ಆಯ್ಕೆ ಮಾಡುತ್ತಿದ್ದು, ಇದರಲ್ಲಿ ಭಾರತ ಮೂಲದ ಯುವತಿ ಸಚಿವೆಯಾಗುತ್ತಿದ್ದಾರೆ. ಸಂಸದೆ ಲಿಸಾ ನ್ಯಾಂಡಿ ಬ್ರಿಟನ್ ನೂತನ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದು, ಕೀರ್ ಸ್ಟಾರ್ಮರ್‌ ಮಹತ್ವದ ಜವಾಬ್ದಾರಿ ನೀಡಿದ್ದಾರೆ. ಪಾಕಿಸ್ತಾನ ಮೂಲದ ಸಂಸದೆ ಶಬಾನಾ ಮಹಮೂದ್ ಸಹ ಕ್ಯಾಬಿನೆಟ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 

ಯಾರು ಈ ಲಿಸಾ ನ್ಯಾಂಡಿ?

Tap to resize

Latest Videos

undefined

ಮ್ಯಾಂಚೆಸ್ಟರ್‌ನಲ್ಲಿ ಜನಿಸಿದ ಲಿಸಾ ನ್ಯಾಂಡಿ, ವಾಯುವ್ಯ ಇಂಗ್ಲೆಂಡ್‌ನ ವಿಗನ್ ಕ್ಷೇತ್ರದ ಸಂಸದೆಯಾಗಿದ್ದಾರೆ. ವಿಗನ್ ಕ್ಷೇತ್ರದಿಂದ ಲೇಬರ್ ಪಕ್ಷದ ಅಭ್ಯರ್ಥಿಯಾಗಿ ಲಿಸಾ ಸ್ಪರ್ಧಿಸಿದ್ದರು. ಕೀರ್ ಸ್ಟಾರ್ಮರ್ ಸಂಪುಟದಲ್ಲಿ ಸ್ಥಾನ ಪಡೆದಿರುವ ಲಿಸಾರಿಗೆ ಸಂಸ್ಕೃತಿ, ಮಾಧ್ಯಮ ಮತ್ತು ಕ್ರೀಡಾ ಸಚಿವಾಲಯದ ಜವಾಬ್ದಾರಿಯನ್ನು ನೀಡಲಾಗಿದೆ. ಬರೋಬ್ಬರಿ ಮೂರು ಇಲಾಖೆಗಳ ಜವಾಬ್ದಾರಿಯನ್ನು ಲಸಾ ನೈಂಡಿ ಅವರ ಹೆಗಲ್ಮೇಲೆ ಹೊರಿಸಲಾಗಿದೆ. ಲಿಸಾ ನ್ಯಾಂಡಿ ಈಗ ಲೂಸಿ ಫ್ರೇಸರ್ ಅವರಿಂದ ಸಂಸ್ಕೃತಿ ಸಚಿವಾಲಯದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.

ಸಂಸ್ಕೃತಿ, ಮಾಧ್ಯಮ ಮತ್ತು ಕ್ರೀಡಾ ಇಲಾಖೆಯ ಜವಾಬ್ದಾರಿ ಬಹಳ ಮುಖ್ಯವಾಗಿದೆ. ಈ ಸಚಿವಾಲಯದ ಜವಾಬ್ದಾರಿ ಸಿಕ್ಕಿರೋದನ್ನ ನನ್ನಿಂದ ನಂಬಲು ಆಗುತ್ತಿಲ್ಲ ಎಂದು ಲಿಸಾ ನ್ಯಾಂಡಿ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ರಗ್ಬಿ ಲೀಗ್‌ನಿಂದ ರಾಯಲ್ ಒಪೇರಾದವರೆಗೆ, ನಮ್ಮ ಸಾಂಸ್ಕೃತಿಕ ಮತ್ತು ಕ್ರೀಡಾ ಪರಂಪರೆಯು ದೇಶದಾದ್ಯಂತ ಹಳ್ಳಿಗಳು, ಪಟ್ಟಣಗಳು ​​ಮತ್ತು ನಗರಗಳಲ್ಲಿ ಹರಡಿದೆ. ಈ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುವ ಕೆಲಸವನ್ನು ತ್ವರಿತವಾಗಿ ಮಾಡಲಾಗುತ್ತದೆ ಎಂದು ಲಿಸಾ ನ್ಯಾಂಡಿ ಭರವಸೆ ನೀಡಿದ್ದಾರೆ.

ಪಾಕಿಸ್ತಾನ ಮೂಲದ ಸಂಸದೆಗೂ ಪ್ರಮುಖ ಸಚಿವಾಲಯ 

ಪಾಕಿಸ್ತಾನ ಮೂಲದ ಸಂಸದೆ ಶಬಾನಾ ಮಹಮೂದ್ ಅವರಿಗೆ ಕೀರ್ ಸ್ಟಾರ್ಮರ್ ಪ್ರಮುಖ ಸಚಿವಾಲಯವನ್ನು ಹಂಚಿಕೆ ಮಾಡಿದ್ದಾರೆ. ಶಬಾನಾ ಮಹಮೂದ್ ಬ್ರಿಟನ್ ನೂತನ ಸರ್ಕಾರದ ನ್ಯಾಯ ಸಚಿವೆಯಾಗಲಿದ್ದಾರೆ. 2010ರಿಂದ ಬರ್ಮಿಂಗ್‌ಹ್ಯಾಮ್‌ ಲೇಡಿವುಡ್ ಕ್ಷೇತ್ರದ ಸಂಸದೆಯಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಶಬಾನಾ ಜೊತೆಯಲ್ಲಿ ರಶ್ನಾರಾ ಅಲಿ ಮತ್ತು ಯಾಸ್ಮೀನ ಬ್ರಿಟನ್ ಸಂಸತ್ತಿನ ಮುಸ್ಲಿಂ ಸಮುದಾಯದ ಸಂಸದೆಯಾಗಿದ್ದಾರೆ.  

ಬ್ರಿಟನ್ ಚುನಾವಣೆ ಫಲಿತಾಂಶ ಭಾರತದ ಮಾರುಕಟ್ಟೆ ಮೇಲೆ ಹೇಗೆ ಪರಿಣಾಮ ಬೀರುತ್ತೆ?

28 ಮಂದಿ ಭಾರತೀಯರಿಗೆ ಗೆಲುವು 

ಈ ಬಾರಿಯ ಬ್ರಿಟನ್ ಸಂಸತ್ ಚುನಾವಣೆಯಲ್ಲಿ ಭಾರತ ಮೂಲದ 28 ಭಾರತೀಯರು ಗೆದ್ದಿದ್ದಾರೆ. ಇವರಲ್ಲಿ ಅನೇಕರು ಅಧಿಕಾರ ಕಳೆದುಕೊಂಡ ಕನ್ಸರ್ವೇಟಿವ್ ಪಕ್ಷದ ಸದಸ್ಯರಾಗಿದ್ದಾರೆ. ಆಡಳಿತ ವಿರೋಧಿ ಅಲೆಯ ನಡುವೆಯೂ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದಾರೆ. ಚುನಾವಣೆಯಲ್ಲಿ ಗೆಲುವು ದಾಖಲಿಸಿರುವ ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಶ್ಲಾಘನೀಯ ನಾಯಕತ್ವಕ್ಕಾಗಿ ರಿಷಿ ಸುನಕ್ ಅವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.

ಬ್ರಿಟನ್‌ನ ಲೇಬರ್ ಪಕ್ಷವು ಒಟ್ಟು 650 ಸ್ಥಾನಗಳಲ್ಲಿ ಸುಮಾರು 410 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇನ್ನೊಂದೆಡೆ ಚುನಾವಣೆಯಲ್ಲಿ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷ 130 ಸ್ಥಾನಗಳನ್ನು ಗೆದ್ದಿದೆ. ಶುಕ್ರವಾರ ಮುಂಜಾನೆ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರು ಸೋಲನ್ನು ಒಪ್ಪಿಕೊಂಡರು ಮತ್ತು ದೇಶದ ಮುಂದಿನ ಪ್ರಧಾನಿಯಾಗಲು ಸ್ಟಾರ್ಮರ್‌ ಅವರನ್ನು ಸ್ವಾಗತಿಸಿದ್ದಾರೆ.

ಸುಧಾಮೂರ್ತಿ ಅಳಿಯನಿಗೆ ಸೋಲು, ಯುಕೆ ಚುನಾವಣೆಯಲ್ಲಿ ಇತಿಹಾಸ ಬರೆದ ಕೈರ್ ಸ್ಟಾರ್ಮರ್!

click me!