ಬ್ರಿಟನ್ ಚುನಾವಣೆ ಫಲಿತಾಂಶ ಭಾರತದ ಮಾರುಕಟ್ಟೆ ಮೇಲೆ ಹೇಗೆ ಪರಿಣಾಮ ಬೀರುತ್ತೆ?

By Mahmad RafikFirst Published Jul 6, 2024, 3:49 PM IST
Highlights

ನಿರ್ಗಮಿತ ಪ್ರಧಾನಿ ರಿಷಿ ಸುನಕ್ ಕಳೆದ 20 ತಿಂಗಳಿನಿಂದ ಭಾರತದ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಇದೀಗ ಹೊಸ ಸರ್ಕಾರ ರಚನೆಯಾಗುತ್ತಿರುವ ಹಿನ್ನೆಲೆ ಕೆಲವು ಬದಲಾವಣೆ ಆಗೋದು ನಿಶ್ಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಬೆಂಗಳೂರು: ಬ್ರಿಟನ್ ಲೋಕಸಭಾ ಚುನಾವಣೆಯಲ್ಲಿ ಲೇಬರ್ ಪಕ್ಷ ಗೆಲುವನ್ನ ತನ್ನದಾಗಿಸಿಕೊಂಡಿದೆ. ರಿಷಿ ಸುನಕ್ ನೇತೃತ್ವದ ಕನ್ಸರ್ವೇಟಿವ್ ಪಕ್ಷ ಸೋತಿದ್ದು, ಅಧಿಕಾರದಿಂದ ಕೆಳಗೆ ಇಳಿದಿದೆ. ಲೇಬರ್ ಪಾರ್ಟಿಯ ನಾಯಕ ಕೀರ್ ಸ್ಟಾರ್ಮರ್ ಬ್ರಿಟನ್ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬ್ರಿಟನ್ ಸಂಸತ್ ಚುನಾವಣೆ ಫಲಿತಾಂಶ ಭಾರತದ ವ್ಯಾವಹರಿಕ ಸಂಬಂಧದ ಮೇಲೆ ಕೆಲವು ಪರಿಣಾಮಗಳು ಬೀರಲಿವೆ ಎಂದು ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ. ನಿರ್ಗಮಿತ ಪ್ರಧಾನಿ ರಿಷಿ ಸುನಕ್ ಕಳೆದ 20 ತಿಂಗಳಿನಿಂದ ಭಾರತದ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಇದೀಗ ಹೊಸ ಸರ್ಕಾರ ರಚನೆಯಾಗುತ್ತಿರುವ ಹಿನ್ನೆಲೆ ಕೆಲವು ಬದಲಾವಣೆ ಆಗೋದು ನಿಶ್ಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಕಳೆದ 14 ವರ್ಷ ಕನ್ಸರ್ವೇಟಿವ್ ಪಕ್ಷ ಅಧಿಕಾರದಲ್ಲಿತ್ತು. ಕೀರ್ ಸ್ಟಾರ್ಮರ್ ನೂತನ ಪ್ರಧಾನಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬ್ರಿಟನ್ ಸಂಸತ್ ಚುನಾವಣೆ ಭಾರತದ ಮಾರುಕಟ್ಟೆ ಹಾಗೂ ಹೂಡಿಕೆದಾರರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಎಂಬುದನ್ನು ನೋಡೋಣ ಬನ್ನಿ. 

Latest Videos

ಲೇಬರ್ ಪಕ್ಷ ಸರ್ಕಾರ ರಚನೆ ಮಾಡಿದ ಬಳಿಕ ಭಾರತ ಮತ್ತು ಯುಕೆ ನಡುವಿನ ಮುಕ್ತ ವ್ಯಾಪಾರದ (Free Trade Agreement) ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗುತ್ತಿದೆ. ಲೇಬರ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಭಾರತದ ಜೊತೆ ಹೊಸ ಕಾರ್ಯತಂತ್ರದ ಪಾಲುದಾರಿಕೆಯ ಕುರಿತು ಹೇಳಿಕೊಂಡಿತ್ತು. ಹಾಗಾಗಿ ಉಭಯ ದೇಶಗಳ ನಡುವಿನ ಒಪ್ಪಂದದಲ್ಲಿ ಕೆಲ ಬದಲಾವಣೆಗಳಾಗಬಹುದು. 2022 ಜನವರಿಯಲ್ಲಿ ಮುಕ್ತ ವ್ಯಾಪಾರ ಸಂಬಂಧ ಭಾರತ ಮತ್ತು ಯುಕೆ ನಡುವೆ ಹಲವು ಬಾರಿ ಮಾತುಕತೆ ನಡೆದಿದೆ. ಎರಡೂ ದೇಶಗಳು ಆರ್ಥಿಕ ಅಭಿವೃದ್ಧಿ ವಿಷಯವಾಗಿ 14 ಸುತ್ತಿನ ಮಾತುಕತೆ ನಡೆಸಿವೆ. 

ನಾನು ಹಿಂದೂ, ಚುನಾವಣೆಗೂ ಮುನ್ನ ಪತ್ನಿ ಅಕ್ಷತಾ ಜೊತೆ ಪೂಜೆ ಸಲ್ಲಿಸಿದ ಪ್ರಧಾನಿ ರಿಷಿ ಸುನಕ್

ಕಳೆದ ಕೆಲವು ವರ್ಷಗಳಿಂದ ಭಾರತ ವೀಸಾ ನಿಯಮಗಳನ್ನ ಸರಳೀಕರಣ ಮಾಡುವ ಕುರಿತು ನಿರಂತರವಾಗಿ ಚರ್ಚಿಸುತ್ತಾ ಬಂದಿದೆ. ಐಟಿ ಹಾಗೂ ಹಣಕಾಸಿನ ವಲಯದ ಕೆಲಸಕ್ಕಾಗಿ ಭಾರತೀಯರು ಇಂಗ್ಲೆಂಡ್‌ಗೆ ಹೆಚ್ಚು ಪ್ರಯಾಣಿಸುತ್ತಿರುತ್ತಾರೆ. ಯುವ ಸಮುದಾಯದ ವೃತ್ತಿಪರ ಬೆಳವಣಿಗೆ ಕುರಿತು ನಿಯಮಗಳ ಸರಳೀಕರಣಕ್ಕೆ ಭಾರತ ಪ್ರತಿಪಾದಿಸುತ್ತದೆ. 

ಮುಕ್ತ ಮಾರುಕಟ್ಟೆ ಯೋಜನೆಯಡಿಯಲ್ಲಿ ಟ್ಯಾರಿಫ್ ಕಡಿತಗೊಳಿಸಿದರೂ ಭಾರತದಿಂದ ರಫ್ತಾಗುವ ವಸ್ತುಗಳ ಮೇಲೆ ಕಾರ್ಬನ್ ಶುಲ್ಕ ವಿಧಿಸಲಾಗುತ್ತದೆ. ಲೇಬರ್ ಪಕ್ಷ ಹಲವು ಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದು, ಭಾರತದ ಜೊತೆಗಿನ ವ್ಯಾಪಾರ ಮಾತುಕತೆಯನ್ನ ಮುಂದುವರಿಸುವ ಸಾಧ್ಯತೆಗಳಿವೆ. ಬ್ರಿಟನ್ ತನ್ನ ಉತ್ಪನ್ನಗಳನ್ನು ಭಾರತದ ಮಾರುಕಟ್ಟೆಗೆ ರಫ್ತು ಮಾಡುವ ನಿಟ್ಟಿನಲ್ಲಿ ಕೆಲವು ನಿರ್ಧಾರಗಳನ್ನು ಪ್ರಕಟಿಸಬಹುದು. 

ಸುಧಾಮೂರ್ತಿ ಅಳಿಯನಿಗೆ ಸೋಲು, ಯುಕೆ ಚುನಾವಣೆಯಲ್ಲಿ ಇತಿಹಾಸ ಬರೆದ ಕೈರ್ ಸ್ಟಾರ್ಮರ್!

28 ಮಂದಿ ಭಾರತೀಯರಿಗೆ ಗೆಲುವು 

ಈ ಬಾರಿಯ ಬ್ರಿಟನ್ ಸಂಸತ್ ಚುನಾವಣೆಯಲ್ಲಿ ಭಾರತ ಮೂಲದ 28 ಭಾರತೀಯರು ಗೆದ್ದಿದ್ದಾರೆ. ಇವರಲ್ಲಿ ಅನೇಕರು ಅಧಿಕಾರ ಕಳೆದುಕೊಂಡ ಕನ್ಸರ್ವೇಟಿವ್ ಪಕ್ಷದ ಸದಸ್ಯರಾಗಿದ್ದಾರೆ. ಆಡಳಿತ ವಿರೋಧಿ ಅಲೆಯ ನಡುವೆಯೂ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದಾರೆ. ಚುನಾವಣೆಯಲ್ಲಿ ಗೆಲುವು ದಾಖಲಿಸಿರುವ ಲೇಬರ್ ಪಕ್ಷದ ನಾಯಕ ಕೀರ್ ಸ್ಟಾರ್ಮರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಶ್ಲಾಘನೀಯ ನಾಯಕತ್ವಕ್ಕಾಗಿ ರಿಷಿ ಸುನಕ್ ಅವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.

click me!