ರಷ್ಯಾದಿಂದ ತೈಲ ಖರೀದಿಸುವ ಭಾರತಕ್ಕೆ 100% ತೆರಿಗೆ? ಅಮೆರಿಕ ಸೆನೆಟ್‌ನಲ್ಲಿ ಬಿಲ್ ಪಾಸ್!

Published : Aug 09, 2026, 07:18 AM IST
modi trump

ಸಾರಾಂಶ

ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸುವ ಭಾರತ ಮತ್ತು ಚೀನಾದಂತಹ ದೇಶಗಳ ಮೇಲೆ ಶೇ.100ರಷ್ಟು ತೆರಿಗೆ ವಿಧಿಸಲು ಅಮೆರಿಕದ ಸೆನೆಟ್‌ನಲ್ಲಿ ವಿಧೇಯಕ ಅಂಗೀಕಾರವಾಗಿದೆ. ಈ ಕಾಯ್ದೆಯು ಜಾರಿಯಾದರೆ, ಜಾಗತಿಕ ತೈಲ ದರ ಏರಿಕೆ ಮತ್ತು ಭಾರತದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕವಿದೆ.

ವಾಷಿಂಗ್ಟನ್‌: ಭಾರತ, ಚೀನಾ ಸೇರಿ ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ, ತೈಲೋತ್ಪನ್ನಗಳನ್ನು ಖರೀದಿಸುವ ರಾಷ್ಟ್ರಗಳ ಮೇಲೆ ಶೇ.100ರಷ್ಟು ತೆರಿಗೆ ವಿಧಿಸಲು ಅವಕಾಶ ನೀಡುವ ವಿಧೇಯಕಕ್ಕೆ ಅಮೆರಿಕದ ಸೆನೆಟ್‌ (ಮೇಲ್ಮನೆ) ಒಪ್ಪಿಗೆ ನೀಡಿದೆ.

ರಷ್ಯಾದಿಂದ ಭಾರೀ ಪ್ರಮಾಣದಲ್ಲಿ ತೈಲ ಮತ್ತು ತೈಲೋತ್ಪನ್ನಗಳ ಖರೀದಿಸುವುದರಿಂದ ಉಕ್ರೇನ್‌ ಯುದ್ಧಕ್ಕೆ ನೆರವು ಸಿಗುತ್ತಿದೆ ಎಂದು ಹೇಳಿ ಈ ವಿಧೇಯಕ ಮಂಡಿಸಲಾಗಿದೆ. ಈ ರಷ್ಯಾ ಮತ್ತು ಇರಾನ್‌ ಮೇಲೆ ನಿರ್ಬಂಧ ಹೇರುವ ಲಿಂಡ್ಸೆ ಒ ಗ್ರಹಾಂ ಕಾಯ್ದೆ-2026’ ಅನ್ನು ಸೆನೆಟ್‌ 86-11 ಮತಗಳ ಅಂತರದಿಂದ ಅಂಗೀಕರಿಸಿದ್ದು, ಆ.31ರಂದು ಅಮೆರಿಕದ ಕೆಳಮನೆಯಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ.

ಈ ಕಾಯ್ದೆ ಅಧ್ಯಕ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ರಷ್ಯಾದಿಂದ ತೈಲ, ಗ್ಯಾಸ್‌ ಆಮದು ಮಾಡಿಕೊಳ್ಳುತ್ತಿರುವ ಪ್ರಮುಖ ಐದು ರಾಷ್ಟ್ರಗಳ ಮೇಲೆ ಶೇ.100ರಷ್ಟು ತೆರಿಗೆ ವಿಧಿಸಲು ಅವಕಾಶ ಮಾಡಿಕೊಡುತ್ತದೆ. ಸದ್ಯ ಚೀನಾ, ಭಾರತ, ಅಜರ್‌ಬೈಜಾನ್‌, ಹಂಗೆರಿ ಮತ್ತು ಸ್ಲೊವಾಕಿಯಾವು ರಷ್ಯಾದಿಂದ ತೈಲ ಮತ್ತು ಗ್ಯಾಸ್ ಅನ್ನು ಆಮದು ಮಾಡಿಕೊಳ್ಳುತ್ತಿರುವ ಟಾಪ್‌ 5 ರಾಷ್ಟ್ರಗಳಾಗಿವೆ.

ಮತ್ತೆ ತೈಲ ದರ ಏರಿಕೆ ಆತಂಕ

ಒಂದು ವೇಳೆ ಅಮೆರಿಕವು ಭಾರತ, ಚೀನಾ ಮೇಲೆ ಶೇ.100ರಷ್ಟು ತೆರಿಗೆ ವಿಧಿಸಿದರೆ ಅದರ ಪರಿಣಾಮ ಸ್ವತಃ ಅಮೆರಿಕ ಹಾಗೂ ಇಡೀ ವಿಶ್ವ ಆರ್ಥಿಕತೆಯ ಮೇಲೂ ಬೀಳಲಿದೆ. ಇದರ ಜತೆಗೆ ಮಧ್ಯಪ್ರಾಚ್ಯ ಸಂಘರ್ಷದ ಈ ಹೊತ್ತಿನಲ್ಲಿ ಭಾರತ, ಚೀನಾದಂಥ ಅತಿದೊಡ್ಡ ತೈಲ ಆಮದು ರಾಷ್ಟ್ರಗಳು ರಷ್ಯಾ ಬದಲು ಇತರೆ ದೇಶಗಳಿಂದ ತೈಲ ಖರೀದಿ ಆರಂಭಿಸಿದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿ, ಇದರ ಪರಿಣಾಮ ಹಲವು ದೇಶಗಳ ಆರ್ಥಿಕತೆ ಮೇಲೆ ಬೀಳುವ ಸಾಧ್ಯತೆ ಇದೆ. ಇನ್ನು ಅಮೆರಿಕದ ಮೇಲೆ ಹೆಚ್ಚು ಅವಲಂಬಿತವಾಗಿರುವ ಭಾರತ, ಚೀನಾದ ರಫ್ತು ಉದ್ಯಮಗಳು ಅಡ್ಡಪರಿಣಾಮ ಎದುರಿಸುವ ಆತಂಕವೂ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಾಯಿಯ ಪ್ರೀತಿಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾ? ಮರಿಗಳನ್ನು ರಕ್ಷಿಸಲು ಗೋಡೆ ಏರಿದ ಬೆಕ್ಕು; ಆಮೇಲೆನಾಯ್ತು?
Yash Toxic Trailer Launch: ಯಶ್ 'ಟಾಕ್ಸಿಕ್' ಟ್ರೇಲರ್; 'ಇಟ್ಸ್ ಟೈಮ್- ಐ ಆಮ್ ಕಮಿಂಗ್; ಅಪ್ಪ-ಮಗನ ಆಟ ಶುರು!