ಆದಷ್ಟು ಬೇಗ ಭಾರತ ಬಿಡಿ: ಅಮೆರಿಕ ಸೂಚನೆ

By Divya Perla  |  First Published Apr 29, 2021, 2:05 PM IST

ಭಾರತದಲ್ಲಿ ಹೆಚ್ಚಿದ ಕೊರೋನಾ ಎರಡನೇ ಅಲೆಯ ಆರ್ಭಟ | ಆದಷ್ಟು ಬೇಗ ಭಾರತ ಬಿಡುವಂತೆ ಅಮೆರಿಕ ಸೂಚನೆ


ದೆಹಲಿ(ಏ.29): ಕೊರೋನಾ ಏರಿಕೆಯಿಂದ ಭಾರತದಲ್ಲಿ ಔಷಧಿಯ ಪೋರೈಕೆ ತೀವ್ರ ರೀತಿಯಲ್ಲಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತಕ್ಕೆ ತೆರಳದಂತೆ ಮತ್ತು ಸಾಧ್ಯವಾದಷ್ಟು ಬೇಗ ಭಾರತದಿಂದ ಹಿಂತಿರುಗುವಂತೆ ತನ್ನ ನಾಗರಿಕರಿಗೆ ಅಮೆರಿಕ ಸೂಚನೆ ನೀಡಿದೆ.

ಅಮೆರಿಕಾಗೆ ಹಿಂದಿರುಗಲು ಬಯಸುವ ನಾಗರಿಕರು ಈಗ ಇರುವಂತಹ ವಿಮಾನ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು. ಅಮೆರಿಕಾಗೆ ಪ್ರತಿದಿನದ ಡೈರೆಕ್ಟ್ ಫ್ಲೈಟ್ ಮತ್ತು ಪ್ಯಾರೀಸ್ ಮತ್ತು ಫ್ರಾಂಕ್‌ಫ್ರುಟ್ ಮೂಲಕ ಇರುವ ಫ್ಲೈಟ್ ಕಾರ್ಯ ನಿರ್ವಹಿಸುತ್ತಿವೆ ಎಂದು ಅಮೆರಿಕ ತಿಳಿಸಿದೆ.

Tap to resize

Latest Videos

undefined

ಬೇಕಾಬಿಟ್ಟಿ ಜನ ಸೇರಿದ್ದ ರಾಜ್ಯದಲ್ಲಿ ಕಂಟ್ರೋಲ್‌ಗೆ ಸಿಕ್ತಿಲ್ಲ ಕೊರೋನಾ..!

ಭಾರತದಲ್ಲಿ ಕೊರೋನಾ ಸಾವು ಮತ್ತು ಪ್ರಕರಣಗಳಲ್ಲಿ ದಾಖಲೆಯ ಏರಿಕೆಯಾಗಿದೆ. ಪರೀಕ್ಷೆ ಮಾಡಿಸುವ ವ್ಯವಸ್ಥೆಯೂ ಕ್ಷೀಣಿಸಿದೆ. ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳು ಹಾಗೂ ಇತರ ರೋಗಿಗಳಿಗೂ ಆಕ್ಸಿಜನ್, ಬೆಡ್‌ ಕೊರತೆಯಾಗಿದೆ. ಅಮೆರಿಕನ್ನರಿಗೆ ಬೆಡ್‌ಗಳ ಕೊರತಯಿಂದ ಆಸ್ಪತ್ರೆ ಸೌಲಭ್ಯ ಸಿಗದಿರುವ ಘಟನೆ ವರದಿಯಾಗಿದೆ ಎಂದು ಅಮೆರಿಕ ರಾಯಭಾರಿ ಕಚೇರಿಯಿಂದ ಟ್ವೀಟ್ ಮಾಡಲಾಗಿದೆ.

ಕಳೆದೊಂದು ವಾರದಲ್ಲಿ 20 ದೇಶಗಳು ಭಾರತಕ್ಕೆ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿವೆ. ಹಾಗೆಯೇ ಭಾರತದಿಂದ ವಿಮಾನ ಬರುವುದನ್ನು ನಿಷೇಧಿಸಿವೆ. ಹಲವು ದೇಶಗಳಲ್ಲಿ ಕಟ್ಟುನಿಟ್ಟಾಗ ನಿರ್ಭಂದಗಳನ್ನು ಹೇರಲಾಗಿದೆ.

click me!