ಲಾವೋಸ್‌ನಲ್ಲಿ 47 ಭಾರತೀಯ 'ಸೈಬರ್‌ ಗುಲಾಮರ' ರಕ್ಷಣೆ : ಏನಿದು ಪ್ರಕರಣ?

Published : Sep 01, 2024, 11:16 AM IST
ಲಾವೋಸ್‌ನಲ್ಲಿ 47 ಭಾರತೀಯ 'ಸೈಬರ್‌ ಗುಲಾಮರ' ರಕ್ಷಣೆ : ಏನಿದು ಪ್ರಕರಣ?

ಸಾರಾಂಶ

ಲಾವೋಸ್‌ ದೇಶದಲ್ಲಿ ಒತ್ತೆಯಾಳಾಗಿ ಸಿಲುಕಿಕೊಂಡು ಆನ್‌ಲೈನ್‌ನಲ್ಲಿ ವಂಚನೆ ಎಸಗುವ ಕೆಲಸಕ್ಕೆ ಬಳಕೆಯಾಗುತ್ತಿದ್ದ 47 ಭಾರತೀಯರನ್ನು ಆ ದೇಶದ ತನಿಖಾ ಸಂಸ್ಥೆಗಳು ರಕ್ಷಿಸಿವೆ. ಇವರಲ್ಲಿ 29 ಮಂದಿಯನ್ನು ಲಾವೋಸ್‌ನಲ್ಲಿರುವ ಭಾರತೀಯ ದೂತಾವಾಸದಲ್ಲಿ ಇರಿಸಿ ರಕ್ಷಣೆ ನೀಡಲಾಗಿದೆ.

ನವದೆಹಲಿ: ಲಾವೋಸ್‌ ದೇಶದಲ್ಲಿ ಒತ್ತೆಯಾಳಾಗಿ ಸಿಲುಕಿಕೊಂಡು ಆನ್‌ಲೈನ್‌ನಲ್ಲಿ ವಂಚನೆ ಎಸಗುವ ಕೆಲಸಕ್ಕೆ ಬಳಕೆಯಾಗುತ್ತಿದ್ದ 47 ಭಾರತೀಯರನ್ನು ಆ ದೇಶದ ತನಿಖಾ ಸಂಸ್ಥೆಗಳು ರಕ್ಷಿಸಿವೆ. ಇವರಲ್ಲಿ 29 ಮಂದಿಯನ್ನು ಲಾವೋಸ್‌ನಲ್ಲಿರುವ ಭಾರತೀಯ ದೂತಾವಾಸದಲ್ಲಿ ಇರಿಸಿ ರಕ್ಷಣೆ ನೀಡಲಾಗಿದೆ. ಇನ್ನೂ 18 ಮಂದಿ ದೂತಾವಾಸದ ಸಹಾಯ ಕೇಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಾವೋಸ್ ಮತ್ತು ಕಾಂಬೋಡಿಯಾಕ್ಕೆ ಕೆಲಸ ಹುಡುಕಿಕೊಂಡು ಹೋಗುವ ಭಾರತೀಯರಿಗೆ ಕೆಲಸ ನೀಡುವ ನೆಪದಲ್ಲಿ ಆನ್‌ಲೈನ್‌ ವಂಚನೆ ಮಾಫಿಯಾದವರು ಸೆಳೆದು, ಪಾಸ್‌ಪೋರ್ಟ್‌ ಒತ್ತೆ ಇರಿಸಿಕೊಂಡು, ಬಲವಂತವಾಗಿ ಅವರಿಂದ ಭಾರತೀಯರಿಗೆ ಆನ್‌ಲೈನ್‌ ವಂಚನೆ ಮಾಡುವ ದಂಧೆಗೆ ತೊಡಗಿಸುವ ಪ್ರಕರಣಗಳು ಕೆಲ ಸಮಯದಿಂದ ನಡೆಯುತ್ತಿದೆ. ಈವರೆಗೆ ಇಂತಹ 635 ಭಾರತೀಯರನ್ನು ರಕ್ಷಿಸಲಾಗಿದೆ.

ಹೂಡಿಕೆ ನೆಪದಲ್ಲಿ ₹5.3 ಕೋಟಿ ಸೈಬರ್‌ ವಂಚನೆ: ನಿವೃತ್ತ ಸೇನಾಧಿಕಾರಿಗೂ ಟೋಪಿ

ಈಗ ಪುನಃ ಬೋಕಿಯೋದಲ್ಲಿರುವ ಗೋಲ್ಡನ್‌ ಟ್ರಯಾಂಗಲ್‌ ಸ್ಪೆಷಲ್‌ ಎಕನಾಮಿಕ್‌ ಜೋನ್‌ನಲ್ಲಿ ಸಿಲುಕಿದ್ದ 47 ಭಾರತೀಯರನ್ನು ರಕ್ಷಿಸಲಾಗಿದೆ. ಇವರು ಡೇಟಿಂಗ್‌ ಆ್ಯಪ್‌ಗಳಲ್ಲಿ ಮಹಿಳೆಯರಂತೆ ನಕಲಿ ಪ್ರೊಫೈಲ್‌ ಸೃಷ್ಟಿಸಿ, ಭಾರತದಲ್ಲಿರುವ ಪುರುಷರನ್ನು ಆಕರ್ಷಿಸಿ, ಅವರಿಂದ ಹಣ ಸುಲಿಗೆ ಮಾಡುವ ಕೆಲಸಕ್ಕೆ ಬಳಕೆಯಾಗುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಇವರು ಸೈಬರ್‌ ಗುಲಾಮರು

ಕೆಲಸ ಹುಡುಕಿಕೊಂಡು ಭಾರತದಿಂದ ಲಾವೋಸ್‌ಗೆ ತೆರಳುವ ಅಮಾಯಕರಿಗೆ ಕೆಲಸದ ಆಮಿಷ ತೋರಿಸಿ ದಂಧೆಕೋರರು ತಮ್ಮತ್ತ ಸೆಳೆಯುತ್ತಾರೆ. ನಂತರ ನಕಲಿ ಉದ್ಯೋಗದ ನೇಮಕಾತಿ ಪತ್ರ ನೀಡಿ, ಪಾಸ್‌ಪೋರ್ಟ್‌ ವಶಪಡಿಸಿ ಇಟ್ಟುಕೊಳ್ಳುತ್ತಾರೆ. ಬಳಿಕ ಸೈಬರ್‌ ಗುಲಾಮರನ್ನಾಗಿ ಮಾಡಿಕೊಂಡು, ನಿತ್ಯ ಇಂತಿಷ್ಟು ಎಂದು ಗುರಿ ನೀಡಿ, ಭಾರತೀಯರಿಗೆ ಇಂಟರ್ನೆಟ್‌ನಲ್ಲಿ ವಂಚಿಸುವ ಕೆಲಸಕ್ಕೆ ನಿಯೋಜಿಸುತ್ತಾರೆ.

ಸೈಬರ್ ವಂಚನೆಗೆ ಬ್ರೇಕ್ ಹಾಕಲು ಎಸ್ ಬಿಐ ಕಾರ್ಡ್ ಜೊತೆಗೆ ಕೈಜೋಡಿಸಿದ ಗೃಹ ಸಚಿವಾಲಯ;OTP ರವಾನೆಯಲ್ಲಿ ಹೊಸ ವಿಧಾನ

ಡೇಟಿಂಗ್‌ ಆ್ಯಪ್‌ನಲ್ಲಿ ಬ್ಲ್ಯಾಕ್‌ಮೇಲ್‌ ಮಾಡಿ ಹಣ ಸುಲಿಯುವುದು, ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆಯ ಹೆಸರಿನಲ್ಲಿ ವಂಚಿಸುವುದು ಹೀಗೆ ನಾನಾ ರೀತಿಯಲ್ಲಿ ವಂಚನೆ ಎಸಗಲಾಗುತ್ತದೆ. ವಂಚನೆಯ ಗುರಿ ತಲುಪಲು ವಿಫಲರಾದರೆ ಕೆಲವೊಮ್ಮೆ ಊಟ, ವಿಶ್ರಾಂತಿಯನ್ನೂ ನೀಡದೆ ಶೋಷಣೆ ಮಾಡಲಾಗುತ್ತದೆ ಎಂದು ತಪ್ಪಿಸಿಕೊಂಡು ಬಂದವರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ