ಮಹಿಳೆಯ ಕಿವಿಯಿಂದ ಹೊರಬಂದ ಜೇಡ! ವೈರಲ್ ವಿಡಿಯೋ ನೋಡಿ

By Mahmad Rafik  |  First Published Aug 31, 2024, 6:14 PM IST

ಮಹಿಳೆಯೊಬ್ಬರ ಕಿವಿಯಿಂದ ಜೇಡವೊಂದು ಹೊರಬಂದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆಗೆ ಕಿವಿ ನೋವು ಕಾಣಿಸಿಕೊಂಡ ನಂತರ ಪರೀಕ್ಷಿಸಿದಾಗ ಜೇಡ ಪತ್ತೆಯಾಗಿದೆ.


ನವದೆಹಲಿ: ಕಣ್ಣು, ಕಿವಿ ಮತ್ತು ಮೂಗು ಇವುಗಳು ದೇಹದ ಸಂವೇದನಾಶೀಲ ಅಂಗಗಳು. ಕಣ್ಣಿನಲ್ಲಿ ಸಣ್ಣ ಧೂಳಿನ ಕಣ ಬಿದ್ದರೆ ಅದು ಹೊರಗೆ ಬರೋವರೆಗೂ ಸಮಾಧಾನ  ಆಗಲ್ಲ. ಹಾಗೆಯೇ ಮೂಗು ಮತ್ತು ಕಿವಿಯೊಳಗೆ ಯಾವುದೇ ವಸ್ತುಗಳು ಹೋಗದಂತೆ ನೋಡಿಕೊಳ್ಳಬೇಕು. ಕೆಲವೊಮ್ಮೆ ಚಿಕ್ಕಮಕ್ಕಳು ಕಿವಿ ಮತ್ತು ಮೂಗಿನಲ್ಲಿ ಯಾವುದಾದರೊಂದು ವಸ್ತುವನ್ನು ಹಾಕಿಕೊಂಡು ಅಪಾಯ ಮಾಡಿಕೊಳ್ಳುತ್ತವೆ. ಇದೀಗ ಇಂತಹವುದೇ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಮಹಿಳೆಯ ಕಿವಿಯಿಂದ ಜೇಡವೊಂದು ಹೊರ ಬಂದಿದೆ. ಕಿವಿಯ ಪಕ್ಕ ಸೊಳ್ಳೆ ಬಂದು ಗುಂಯ್ ಗುಟ್ಟುತ್ತಿದ್ದರೆ ಒಂದು ಕ್ಷಣವೂ ಸಹಿಸಿಕೊಳ್ಳಲು ಆಗಲ್ಲ. ಆದ್ರೆ ಈ ಮಹಿಳೆಯ ಕಿವಿಯೊಳಗೆ ಜೇಡವಿತ್ತು.

ಈ ವಿಡಿಯೋವನ್ನು @homienewsinc ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಕ್ಯಾಪ್ಷನ್‌ನಲ್ಲಿ ಮಹಿಳೆಗೆ ಕಿವಿಯಲ್ಲಿ ಏನೋ ಸುಳಿದಾಡಿದಂತೆ ಅನುಭವವಾಗುತ್ತದೆ. ಕಿವಿಯಲ್ಲಿ ಒಂದು ಹನಿ ಎಣ್ಣೆ ಮಾದರಿಯ ಔಷಧ ಹಾಕಿದಾಗ ಹೊರ ಬಂದಿರೋದು  ಜೇಡ. ಹೊರ ಬಂದ ಜೇಡ ಕೆಳಗೆ ಬಿದ್ದ ನಂತರ ಸರಸರ ಅಂತ ಹೋಗಿರೋದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. 

Tap to resize

Latest Videos

undefined

ಸೈಕಲ್‌ನಲ್ಲಿ ಪಾರ್ಸೆಲ್ ತಂದ ಡೆಲಿವರಿ ಬಾಯ್‌ಗೆ  ಗ್ರಾಹಕ ಮಾಡಿದ್ದೇನು? ನೆಟ್ಟಿಗರು ಭಾವುಕ

ವೈರಲ್ ವಿಡಿಯೋದಲ್ಲಿ ಮಹಿಳೆಗೆ ಕಿವಿಗೆ ಒಬ್ಬರು ಎಣ್ಣೆ ಮಾದರಿಯ ಔಷಧ ಹಾಕುತ್ತಿರೋದನ್ನು ನೋಡಬಹುದು. ಮೊದಲಿಗೆ ಮಹಿಳೆ ಆರಂಭದಲ್ಲಿ ಶಾಂತವಾಗಿರುತ್ತಾರೆ. ಔ‍ಷದ ಕಿವಿಯೊಳಗೆ ಎಣ್ಣೆ ಹೋಗುತ್ತಿದ್ದಂತೆ ಮಹಿಳೆಗೆ ನೋವು ಆಗುತ್ತದೆ. ಆಕೆ ಜೋರಾಗಿ ಕಿರುಚಿಕೊಳ್ಳುತ್ತಾ ಏನಾದ್ರೂ ಹೊರಗೆ ಬರುತ್ತಿದೆಯಾ ಎಂದು ಕೇಳುತ್ತಾಳೆ. ಆಗ ಎಣ್ಣೆ ಹಾಕುತ್ತಿದ್ದ ವ್ಯಕ್ತಿ, ಓ ಶಿಟ್ ಜೇಡ ಅಂತ ಹೇಳುತ್ತಾಳೆ. ಕಿವಿಯಿಂದ ಹೊರ  ಬಂದ ಜೇಡ, ಮಹಿಳೆ ತಲೆಯ ಮೇಲೆ ಹೋಗಿ ಸಿಂಕ್‌ನಲ್ಲಿ ಬೀಳುತ್ತದೆ. ಈ ವಿಡಿಯೋ 5 ಕೋಟಿಗೂ ಅಧಿಕ ವ್ಯೂವ್ ಪಡೆದುಕೊಂಡಿದೆ.  ಓರ್ವ ಮಹಿಳೆ, ನಾನಾಗಿದ್ದಾರೆ ಇದಕ್ಕಿಂತ ಜೋರಾಗಿ ಕಿರುಚಿಕೊಳ್ಳುತ್ತಿದ್ದೆ ಎಂದು ಕಮೆಂಟ್ ಮಾಡಿದ್ದಾರೆ.

ಈ ವಿಡಿಯೋಗೆ ಖ್ಯಾತ ಸೆಲಿಬ್ರಿಟಿ ಕಿಟ್ ಸೊವೈನ್ (Kit Sovain) ಕಮೆಂಟ್ ಮಾಡಿದ್ದಾರೆ. ನನ್ನ ಜೊತೆಯಲ್ಲಿಯೂ ಈ ರೀತಿ ಒಂದು ಬಾರಿಯಾಗಿದೆ. ಆಗ ನಾನಿನ್ನೂ ಚಿಕ್ಕವಳು. ರಾತ್ರಿ ನಾನು ಮಲಗಿದ್ದಾಗ ಕಿವಿಯಲ್ಲಿ ಏನೋ ಸುತ್ತಾಡುತ್ತಿದೆ ಅಂತ ಅನ್ನಿಸುತ್ತಿತ್ತು. ನಂತರ ಕಿವಿ ಹತ್ತಿರ ತುರಿಕೆ ಉಂಟಾಯ್ತು. ನಂತರ ನನ್ನ ತಂದೆ ಕಿವಿಯೊಳಗೆ ಪೆರಾಕ್ಸೈಡ್ ಹಾಕಿದಾಗ ಒಳಗಿನಿಂದ ಹುಳು ಬಂತು. ಆದ್ರೆ ಅದು ಕಿವಿಯಲ್ಲಿನ ಮೇಣದಲ್ಲಿ ಸಿಲುಕಿದ್ದರಿಂದ ಸತ್ತಿತ್ತು ಎಂದು ತಮ್ಮ ಬಾಲ್ಯದ  ಘಟನೆಯನ್ನು ಕಮೆಂಟ್ ಮೂಲಕ ಶೇರ್ ಮಾಡಿಕೊಂಡಿದ್ದಾರೆ.

Sorry ಅಮ್ಮಾ ನಿನ್ನನ್ನು ಕೊಂದು ಬಿಟ್ಟೆ.. ಇನ್‌ಸ್ಟಾಗ್ರಾಂ ಪೋಸ್ಟ್‌ ಹಾಕೊಂಡ ಮಗ!

 
 
 
 
 
 
 
 
 
 
 
 
 
 
 

A post shared by HomieNewsInc (@homienewsinc)

click me!