ಸುರಕ್ಷಿತ ಮತ್ತು ಅಸುರಕ್ಷಿತ ಲೈಂಗಿಕ ಸಂಬಂಧದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಸಮೀಕ್ಷೆಯನ್ನು ನಡೆಸಿ ವರದಿ ನೀಡಿದೆ. 42 ದೇಶದ 15 ವರ್ಷದ 2,42,000 ಅಪ್ರಾಪ್ತರು ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು.
ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ (WHO) ಹೊಸ ವರದಿಯೊಂದು ಬಂದಿದ್ದು, ಆಶ್ಚರ್ಯಕರ ಮಾಹಿತಿ ಬೆಳಕಿಗೆ ಬಂದಿದೆ. ಈ ವರದಿಯಲ್ಲಿ ಯುವ ಸಮುದಾಯ ಕಾಂಡೋಮ್ ಮತ್ತು ಗರ್ಭ ನಿರೋಧಕ ಮಾತ್ರೆಗಳ ಬಳಕೆ ಮಾಡುತ್ತಿರೋದು ಕ್ಷೀಣಿಸುತ್ತಿದ್ದು, ಇಂದು ಅತಿದೊಡ್ಡ ಚಿಂತೆಯ ವಿಷಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಈ ವರದಿಯ ಪ್ರಕಾರ, ಯುರೋಪಿಯನ್ ದೇಶಗಳಲ್ಲಿ ಮೂರರಲ್ಲಿ ಒಬ್ಬರು ಅಂದ್ರೆ ಹುಡುಗ ಅಥವಾ ಹುಡುಗಿಯರು ಲೈಂಗಿಕ ಸಂಪರ್ಕ ಹೊಂದುವ ಸಮಯದಲ್ಲಿ ಕಾಂಡೋಮ್ ಅಥವಾ ಗರ್ಭನಿರೋಧಕ ಮಾತ್ರೆಗಳನ್ನು ಬಳಕೆ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ. 2018ರಿಂದ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ಅಸುರಕ್ಷಿತ ಲೈಂಗಿಕ ಸಂಬಂಧ ಬೆಳೆಸುವದರಿಂದ ಹಲವು ಆರೋಗ್ಯಕರ ಸಮಸ್ಯೆ ಹಾಗೂ ಅನಗತ್ಯ ಗರ್ಭಧಾರಣೆ ಹೊಂದುವ ಪರಿಸ್ಥತಿಗಳು ಎದುರಾಗುತ್ತಿವೆ.
ವಿಶ್ವ ಆರೋಗ್ಯ ಸಂಸ್ಥೆ ಈ ಸಮೀಕ್ಷೆಯನ್ನು ಯುರೋಪ್ ಮತ್ತು ಮಧ್ಯ ಪೂರ್ವದ 42 ದೇಶಗಳಲ್ಲಿ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ 15 ವರ್ಷದ 2,42,000 ಅಪ್ರಾಪ್ತರು ಭಾಗಿಯಾಗಿದ್ದಾರೆ. ಈ ಸಮೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಹುಡುಗರು, ದೈಹಿಕ ಸಂಬಂಧ ಬೆಳಸುವ ವೇಳೆ ತಾವು ಕಾಂಡೋಮ್ ಬಳಸಿಲ್ಲ ಎಂದಿದ್ದಾರೆ. ಕಾಂಡೋಮ್ ಬಳಕೆ ಮಾಡದೇ ಲೈಂಗಿಕ ಸಂಪರ್ಕ ಹೊಂದುವ ಅಪ್ರಾಪ್ತರ ಸಂಖ್ಯೆ 2020ರ ಪ್ರಕಾರ ಶೇ.61ಕ್ಕೆ ಇಳಿಕೆಯಾಗಿದೆ. 2014ರಲ್ಲಿ ಈ ಸಂಖ್ಯೆ ಶೇ.70ರಷ್ಟಿತ್ತು.
undefined
ಇನ್ನು ಹುಡುಗಿಯರು ಈ ಹಿಂದೆ ದೈಹಿಕ ಸಂಬಂಧ ಬೆಳೆಸುವ ಮುನ್ನ ಯಾವುದೇ ಗರ್ಭ ನಿರೋಧಕ ಮಾತ್ರೆಗಳನ್ನು ತೆಗೆದುಕೊಂಡಿಲ್ಲ ಎಂದು ಸಮೀಕ್ಷೆಯಲ್ಲಿ ಹೇಳಿಕೊಂಡಿದ್ದಾರೆ. ಈ ಸಂಖ್ಯೆ ಶೇ.63ರಿಂದ ಶೇ. 57ರಷ್ಟು ಇಳಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಮೂರರಲ್ಲಿ ಒಬ್ಬರು ಅಸುರಕ್ಷಿತ ದೈಹಿಕ ಸಂಬಂಧ ಬೆಳೆಸುತ್ತಿರೋದು ವರದಿಯಲ್ಲಿ ಬಹಿರಂಗಗೊಂಡಿದೆ.
ಮಹಿಳೆಯರೇ ನಿಮ್ಮಿಷ್ಟದ ಕಾಂಡೋಮ್ ನೀವೇ ಖರೀದಿಸಿ ಎಂದ ಬಾಲಿವುಡ್ ನಟಿ
ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯ ಪ್ರಕಾರ, 2014 ರಿಂದ 2022ರವರೆಗೆ ಗರ್ಭ ನಿರೋಧಕ ಮಾತ್ರೆಗಳ ಬಳಕೆಯ ಪ್ರಮಾಣ ಸ್ಥಿರವಾಗಿದೆ. 15 ವರ್ಷದ ಶೇ.26ರಷ್ಟು ಹುಡುಗಿಯರು ಲೈಂಗಿಕ ಸಂಬಂಧದ ಬಳಿಕ ಗರ್ಭ ನಿರೋಧಕ ಮಾತ್ರೆಗಳನ್ನು ಬಳಸಿದ್ದಾರೆ. ಕೆಳ ಮಧ್ಯಮ ವರ್ಗದ ಹದಿಹರೆಯದ ಶೇ.33ರಷ್ಟು ಜನರು ಕಾಂಡೋಮ್ ಅಥವಾ ಯಾವುದೇ ಗರ್ಭ ನಿರೋಧಕ ಮಾತ್ರೆಗಳನ್ನು ಬಳಕೆ ಮಾಡಿಲ್ಲ. ಉನ್ನತ ವರ್ಗದ ಶೇ. 25ರಷ್ಟು ಹದಿಯಹರೆಯದವರು ಗರ್ಭ ನಿರೋಧಕ ಉತ್ಪನ್ನ ಬಳಸಿಲ್ಲ.
ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ನಿರ್ದೇಶಕ ಹ್ಯಾನ್ಸ್ ಕ್ಲೂ, ಇಂದಿಗೂ ಯುರೋಪಿನ ಹಲವು ದೇಶಗಳಲ್ಲಿ ಲೈಂಗಿಕ ಶಿಕ್ಷಣವನ್ನು ನೀಡಲಾಗುತ್ತಿಲ್ಲ. ಯುವಜನತೆಗೆ ಅಸುರಕ್ಷಿತ ಲೈಂಗಿಕ ಸಂಬಂಧ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಕಡಲತೀರದಲ್ಲಿ ರಾಶಿ ರಾಶಿ ಕಾಂಡೋಮ್ ಪ್ಯಾಕೇಟ್‌ಗಳು ಪತ್ತೆ