ಕೊಲೆ ಅಪರಾಧಿಗೆ ಮುತ್ತಿಕ್ಕಿದ ಮಹಿಳಾ ನ್ಯಾಯಾಧೀಶೆ... ವಿಡಿಯೋ ವೈರಲ್

By Suvarna NewsFirst Published Jan 6, 2022, 4:50 PM IST
Highlights
  • ಕೊಲೆ ಅಪರಾಧಿಗೆ ಮುತ್ತಿಕ್ಕಿದಾಕೆ ಸಾಮಾನ್ಯಳಲ್ಲ ನ್ಯಾಯಾಧೀಶೆ
  • ಅಪರಾಧಿಯನ್ನು ಭೇಟಿಯಾಗಲು ಜೈಲಿಗೆ ಹೋಗಿದ್ದ ನ್ಯಾಯಾಧೀಶೆ
  • ಅರ್ಜೆಂಟೀನಾದಲ್ಲಿ ವಿಚಿತ್ರ ಘಟನೆ

ಬ್ಯೂನಸ್ ಐರಿಸ್(ಜ.6) ಇತ್ತೀಚೆಗೆ ಒಂದು ವಿಡಿಯೋ ವೈರಲ್ ಆಗಿತ್ತು. ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಆರೋಪಿಗೆ ಮಹಿಳೆಯೊಬ್ಬರು ಮುತ್ತಿಕ್ಕುತ್ತಿರುವ ವಿಡಿಯೋ ಅದಾಗಿತ್ತು. ಈಗ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಗೆ ಮುತ್ತಿಕ್ಕುತ್ತಿದ್ದ ಮಹಿಳೆ ಯಾರು ಎಂಬುದು ಗೊತ್ತಾಗಿದೆ. ಆ ಮಹಿಳೆ ನ್ಯಾಯಾಧೀಶರು ಎಂದು ತಿಳಿದು ಬಂದಿದೆ. ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಧೀಶರ ಸಮಿತಿಯಲ್ಲಿ ಮಹಿಳಾ ನ್ಯಾಯಾಧೀಶರೂ ಇದ್ದರು. ಅಲ್ಲದೇ ಈ ಮಹಿಳಾ ನ್ಯಾಯಾಧೀಶರು ಆತನಿಗೆ ಶಿಕ್ಷೆ ನೀಡಿದ್ದನ್ನು ವಿರೋಧಿಸಿದ್ದರು. ನಂತರ ಜೈಲಿನಲ್ಲಿ ಶಿಕ್ಷೆಗೊಳಗಾದ ಆರೋಪಿಗೆ ಮಹಿಳಾ ನ್ಯಾಯಾಧೀಶರು ಮುತ್ತು ನೀಡುತ್ತಿರುವ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಅರ್ಜೆಂಟೀನಾ ( Argentina)ದಲ್ಲಿ ಈ ಘಟನೆ ನಡೆದಿದೆ. ಕೊಲೆಯ ಅಪರಾಧಿ ಕ್ರಿಶ್ಚಿಯನ್ ಬುಸ್ಟೋಸ್ (Christian Bustos) ಜೊತೆಗೆ ಕ್ರಿಮಿನಲ್ ನ್ಯಾಯಾಧೀಶೆ ಮರಿಲ್ ಸೌರೆಜ್ (Mariel Suarez) ಅವರ ಲಿಪ್-ಲಾಕ್ ವೀಡಿಯೊ ಸಿಸಿಟಿವಿಯಲ್ಲಿ ದಾಖಲಾಗಿತ್ತು. ವಿಡಿಯೋ ಹೊರಬಿದ್ದ ಕೂಡಲೇ ಕ್ಯಾಮರಾವೂ ಬೇರೆಯದೇ ಆಯಾಮದಿಂದ ರೆಕಾರ್ಡ್‌ ಆಗಿದೆ. ಇದರಿಂದ ಎಲ್ಲರಿಗೂ ತಪ್ಪು ಸಂದೇಶ ರವಾನೆಯಾಗಿದೆ ಎಂದು ಮಹಿಳಾ ನ್ಯಾಯಾಧೀಶೆ ಮರಿಯಲ್ ಸೌರೆಜ್ ಹೇಳಿದ್ದಾರೆ. ಅಲ್ಲಿನ ಮಾಧ್ಯಮ ಡೈಲಿ ಸ್ಟಾರ್ ಪ್ರಕಾರ, ನ್ಯಾಯಾಧೀಶೆ ಮರಿಯಲ್ ಸೌರೆಜ್ , ಕೊಲೆ ಅಪರಾಧಿ ಕ್ರಿಶ್ಚಿಯನ್ ಬಾಸ್ಟೋಸ್‌ಗೆ ಜೀವಾವಧಿ ಶಿಕ್ಷೆಗಾಗಿ ಹೋರಾಡಿದರು. ಆದರೆ ಆಕೆಯ ಚುಂಬನದ ವೀಡಿಯೊ ಕಾಣಿಸಿಕೊಂಡ ನಂತರ, ತಾನು ಕ್ರಿಶ್ಚಿಯನ್ ಬಾಸ್ಟೋಸ್ ಬಗ್ಗೆ ಪುಸ್ತಕವನ್ನು ಬರೆಯುತ್ತಿರುವುದಾಗಿ ಮರಿಯಲ್ ಸೌರೆಜ್ ಹೇಳಿದ್ದು, ಅದಕ್ಕಾಗಿ ಆತನನ್ನು ಮಾತನಾಡಿಸಲು ಜೈಲಿಗೆ ಹೋದಾಗ ಈ ವಿಡಿಯೋ ಮಾಡಲಾಗಿದೆ ಎಂದು ತಿಳಿದು ಬಂದಿದೆ. 

Govt Anganawadi : ಅಂಗನವಾಡಿಗೆ ಮಗನನ್ನು ಸೇರಿಸಿದ ನ್ಯಾಯಾ​ಧೀಶ

ಈ ವಿಡಿಯೋ ಬೆಳಕಿಗೆ ಬಂದ ನಂತರ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ ಕ್ರಿಶ್ಚಿಯನ್ ಬಾಸ್ಟೋಸ್ ಜೊತೆ ನ್ಯಾಯಾಧೀಶ ಮರಿಯಲ್ ಸೌರೆಜ್ ಅವರ ಪ್ರಣಯದ ವೀಡಿಯೊ ಬಗ್ಗೆ ತನಿಖೆ ಆರಂಭಿಸಲಾಗಿದೆ.  ಆ  ಸಿಸಿಟಿವಿ ದೃಶ್ಯಾವಳಿಗಳನ್ನು ಮುಂದೆ ಇಟ್ಟುಕೊಂಡು ತನಿಖೆ ಆರಂಭಿಸಲಾಗಿದೆ. ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ಕೊಲೆಗಾರ ಕ್ರಿಶ್ಚಿಯನ್ ಬಾಸ್ಟೋಸ್ ಎದುರು ನ್ಯಾಯಾಧೀಶೆ ಮರಿಯಲ್ ಸೌರೆಜ್ ಕುಳಿತಿರುವ ದೃಶ್ಯಾವಳಿ ವೀಡಿಯೋದಲ್ಲಿದೆ. 

ಚೀನಾದಲ್ಲಿ ಅಪರಾಧಿಗಳಿಗೆ ಶಿಕ್ಷೆ ಕೊಡುತ್ತೆ ಈ ಯಂತ್ರ, ವಿಜ್ಞಾನಿಗಳು ತಯಾರಿಸಿದ AI 'Prosecutor'!

ನ್ಯಾಯಾಧೀಶೆ ಮರಿಯಲ್ ಸೌರೆಜ್ ಮಲಗಿರುವುದು ವೀಡಿಯೊದಲ್ಲಿದ್ದು, ಅವರು ಆರೋಪಿಯ ವಿರುದ್ಧ ಒಲವು ತೋರುತ್ತಿರುವಂತಿದೆ. ಆದರೆ ನ್ಯಾಯಾಧೀಶೆ ಮರಿಯಲ್ ಸೌರೆಜ್ ಅವರು ತಮ್ಮ ಮಾತುಗಳನ್ನು ಗೌಪ್ಯವಾಗಿಡಲು ಆರೋಪಿ ಕ್ರಿಶ್ಚಿಯನ್ ಬಾಸ್ಟೋಸ್‌ಗೆ ತುಂಬಾ ಹತ್ತಿರದಲ್ಲಿ ಕುಳಿತುಕೊಂಡಿದ್ದರು. ಆದರೆ ಈಗ ಅದನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. .ಆದರೆ ನ್ಯಾಯಾಧೀಶೆ ಮರಿಯಲ್ ಸೌರೆಜ್ ಅವರ ಹೇಳಿಕೆಗಳ ಮಹತ್ವವು ತನಿಖೆಯ ಅಂತ್ಯದ ನಂತರವೇ ತಿಳಿಯಲಿದೆ.

ಕ್ರಿಶ್ಚಿಯನ್ ಬಾಸ್ಟೋಸ್ ವಿರುದ್ಧ ತನ್ನ  ಮಗ ಮತ್ತು ಪೊಲೀಸ್ ಅಧಿಕಾರಿಯನ್ನು ಕೊಂದ ಆರೋಪವಿದೆ. ಇತ್ತೀಚೆಗೆ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಕ್ರಿಶ್ಚಿಯನ್ ಬಾಸ್ಟೋಸ್ ತನ್ನ ಮಗನ ಕೊಲೆ ಮಾಡಿದ್ದನು. ಹೀಗಾಗಿ ಆತನನ್ನು ಪೊಲೀಸರು ಬಂಧಿಸಲು ಹೋದಾಗ ಒಬ್ಬ ಪೋಲೀಸನನ್ನೂ ಆತ ಕೊಂದಿದ್ದ ಎಂದು ತಿಳಿದು ಬಂದಿದೆ.

click me!