
ತೈವಾನ್ (ಡಿ.19) ಭಯೋತ್ಪಾದಕರ ದಾಳಿ, ದುಷ್ಕರ್ಮಿಗಳಿಂದ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದೆ. ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿ ಸಾಮೂಹಿಕ ಹತ್ಯೆ ನಡೆಸುವ ವಿಕೃತ ಮನಸ್ಸು ಹೆಚ್ಚಾಗುತ್ತಿದೆ. ಇದೀಗ ತೈವಾನ್‌ನ ಕೇಂದ್ರ ತೈಪಿ ರೈಲು ನಿಲ್ದಾಣದ ಬಳಿಕ ನಡೆದಿದೆ. ಭಾರಿ ಜನ ಸಂದಣಿ ಇದ್ದ ರೈಲು ನಿಲ್ದಾಣದ ಸಬ್ ವೇ ಬಳಿ ಸ್ಮೋಕ್ ಬಾಂಬ್ ಎಸೆದಿದ್ದಾನೆ. ದಟ್ಟ ಹೊಗೆ ಆವರಿಸಿಕೊಳ್ಳುತ್ತಿದ್ದಂತೆ ದುರ್ಷ್ಕರ್ಮಿ ಏಕಾಏಕಿ ಚಾಕು ಹಿಡಿದು ದಾಳಿ ನಡೆಸಿದ್ದಾನೆ. ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮೂವರು ಗಂಭೀರ ಗಾಯದಿಂದ ಮೃತಪಟ್ಟಿದ್ದಾರೆ. ಇನ್ನು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ವೇಳೆ ಸ್ಮೋಕ್ ಬಾಂಬ್ ಹೊಗೆಯಿಂದ ಹಲವರು ಉಸಿರಾಟದ ಸಮಸ್ಯೆ ಎದುರಿಸಿದ್ದಾರೆ.
ಸೆಂಟ್ರಲ್ ಥೈಪಿ ರೈಲು ನಿಲ್ದಾಣದ ಬಳಿಕ ನಡೆದ ಭೀಕರ ಘಟನೆ ದೃಶ್ಯಗಳು ಸೆರೆಯಾಗಿದೆ. ರೈಲು ನಿಲ್ದಾಣದ ಪಕ್ಕದ ರಸ್ತೆ ಬಳಿ ಆಗಮಿಸಿದ ದುಷ್ಕರ್ಮಿ ಭಾರಿ ತಯಾರಿಯೊಂದಿಗೆ ಸಜ್ಜಾಗಿದ್ದಾನೆ. ಕಪ್ಪು ಡ್ರೆಸ್ ಧರಿಸಿದ್ದ ಈತ ಬ್ಯಾಗ್‌ನಲ್ಲಿ ತಂದಿದ್ದ ಸ್ಮೋಕ್ ಬಾಂಬ್ ರಸ್ತೆ, ಸಬ್ ವೇ ಬಳಿ ಎಸೆದಿದ್ದಾನೆ. ಬಳಿಕ ಬ್ಯಾಗ್‌ನಿಂದ ಹರಿತವಾದ ಚಾಕು ತೆಗೆದಿದ್ದಾನೆ. ಈ ವೇಳೆ ಸ್ಮೋಕ್ ಬಾಂಬ್‌ನಿಂದ ದಟ್ಟ ಹೊಗೆ ಆವರಿಸಿದೆ. ಇದೇ ಸಂದರ್ಭದಲ್ಲಿ ದುಷ್ಕರ್ಮಿ ಚಾಕು ಮೂಲಕ ದಾಳಿ ನಡೆಸಿದ್ದಾರೆ. ಎದುರಿಗೆ ಸಿಕ್ಕ ಸಿಕ್ಕರವರ ಮೇಲೆ ದಾಳಿ ಮಾಡಿದ್ದಾರೆ. ದಾಳಿ ಆರಂಭಗೊಳ್ಳುತ್ತಿದ್ದಂತೆ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಆದರೆ ಹಿಂಬಾಸಿ ಹಲವರ ಮೇಲೆ ದಾಳಿ ಮಾಡಿದ್ದಾನೆ. ಈತನ ದಾಳಿ ದೃಶ್ಯಗಳು ಸೆರೆಯಾಗಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಳ್ಳುವಷ್ಟರಲ್ಲಿ ಮೂವರು ಮೃತಪಟ್ಟಿದ್ದರು. ಐವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಐವರು ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ. ಇತ್ತ ಸ್ಮೋಕ್ ಬಾಂಬ್ ಕಾರಣ ಹಲವರು ಉಸಿರಾಟ ಸಮಸ್ಯೆಯಿಂದ ಬಳಲಿದ್ದಾರೆ. ಆರೋಗ್ಯ ಸಮಸ್ಯೆ ಎದುರಿಸಿದ ಹಲವರನ್ನು ಆಸ್ಪತ್ರೆ ದಾಖಲಿಸಿದ್ದಾರೆ.
ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಈತ ಕಟ್ಟಡದ ಮೇಲಿಂದ ಪಕ್ಕಕ್ಕೆ ಹಾರಿದ್ದಾನೆ. ಗಂಭೀರವಾಗಿ ಗಾಯಗೊಂಡ ಈ ದುರ್ಷಕರ್ಮಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ. ಸದ್ಯದ ಮಾಹಿತಿ ಪ್ರಕಾರ ದುರ್ಷರ್ಮಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಕೆಲವೇ ನಿಮಿಷಧಲ್ಲಿ ಥೈವಿ ಸೆಂಟ್ರಲ್ ಸಬ್‌ವೇ ಸ್ಟೇಶನ್ ಬಳಿ ಮಾರಣಹೋಮ ನಡೆಸಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ