
ಪುನರ್ಜನ್ಮ, ಸ್ವರ್ಗ, ನರಕ ಇದೆಯೋ, ಇಲ್ಲವೊ ಎನ್ನುವುದು ಪ್ರಶ್ನೆಯಾಗಿಯೇ ಇದೆ. ಏಕೆಂದರೆ, ಸತ್ತವರು ಮತ್ತೆ ಎದ್ದು ಬಂದು ಇದರ ಬಗ್ಗೆ ಹೇಳುವುದಿಲ್ಲವಲ್ಲ. ಆದ್ದರಿಂದ ಇದರ ಬಗ್ಗೆ ಹಲವಾರು ಕಲ್ಪನೆಗಳು ಇವೆ.. ಆದರೆ ಇದೀಗ ಮಹಿಳೆಯೊಬ್ಬಳು 11 ನಿಮಿಷಗಳ ಸಾವಿನ ಆಚಿನ ಪಯಣದ ಬಗ್ಗೆ ತಿಳಿಸುವ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ. ಸತ್ತೇ ಹೋಗಿದ್ದಾರೆ ಎಂದು ವೈದ್ಯರು ಹೇಳಿರುವ ಕೆಲವು ಘಟನೆಗಳಲ್ಲಿ ಅವರು ಮತ್ತೆ ಬದುಕಿ ಬಂದಿರುವ ಉದಾಹರಣೆಗಳಿವೆ. ಸ್ಮಶಾನಕ್ಕೆ ಕರೆದುಕೊಂಡು ಹೋಗುವಾಗ ಉಸಿರಾಡಿರುವ ಉದಾಹರಣೆಗಳೂ ಇವೆ. ಈಗ ಅಂಥದ್ದೇ ಒಂದು ಘಟನೆಯಲ್ಲಿ ಸತ್ತಿದ್ದಾಳೆ ಎನ್ನಲಾದ ಮಹಿಳೆಯೊಬ್ಬಳು 11 ನಿಮಿಷಗಳವರೆಗಿನ ಸಾವಿನಾಚೆಯ ಅನುಭವವನ್ನು ತೆರೆದಿಟ್ಟಿದ್ದಾಳೆ.
2019ರಲ್ಲಿ ನಡೆದ ಘಟನೆ ಇದಾಗಿದೆ. ರ್ಲೋಟ್ ಹೋಮ್ಸ್ ಎಂಬ ಮಹಿಳೆ ಸತ್ತಿರುವುದಾಗಿ ವೈದ್ಯರು ಘೋಷಿಸಿದ್ದರು.ಆಕೆ ತಾನು ಸತ್ತಿದ್ದೆ ಕೂಡ, 11 ನಿಮಿಷಗಳವರೆಗೆ ಸತ್ತುಹೋಗಿದ್ದೆ. ಆ ಬಳಿಕ ಎದ್ದುಬಂದಿದ್ದೇನೆ ಎಂದು ಹೇಳಿಕೊಂಡು ಸತ್ತಾಗ ಏನಾಯ್ತು ಎನ್ನುವ ಬಗ್ಗೆ ಮಾತನಾಡಿದ್ದಾಳೆ. ನಾನು ಸತ್ತಾಗ ನೇರವಾಗಿ ಸ್ವರ್ಗಕ್ಕೆ ಹೋದೆ.ಅಲ್ಲಿ ಕಲ್ಪನೆಗೂ ಮೀರಿದ ಹಲವು ವಿಷಯಗಳು ಇದ್ದವು. ಅಲ್ಲಿ ದೇವತೆಗಳು ಮತ್ತು ಕುಟುಂಬ ಸದಸ್ಯರನ್ನು ಭೇಟಿಯಾದೆ. ನನ್ನ ದೇಹವನ್ನೂ ನಾನೂ ನೋಡಿಕೊಂಡೆ. ಆ ಸಮಯದಲ್ಲಿ ನನ್ನ ದೇಹಕ್ಕೆ ವೈದ್ಯರು ಹಾಗೂ ನರ್ಸ್ಗಳು ಟ್ರೀಟ್ಮೆಂಟ್ ಕೊಡುತ್ತಲೇ ಇದ್ದರು. ಆದರೆ ಆಗ ನಾನು ಸಾವನ್ನಪ್ಪಿಯಾಗಿತ್ತು. ಅಲ್ಲೊಂದು ಪ್ರಕಾಶಮಾನವಾದ ಬೆಳಕು ಇತ್ತು. ಆಹ್ಲಾದಕರ ಸಂಗೀತವಿತ್ತು, ಹೂವಿನ ಪರಿಮಳವೂ ಬರುತ್ತಿತ್ತು ಎಂದು ಮಹಿಳೆ ಹೇಳಿದ್ದಾರೆ.
ನಾನು ಎಲ್ಲಾ ಮರಗಳು ಮತ್ತು ಹುಲ್ಲುಗಳನ್ನು ನೋಡಿದೆ. ಇದು ಊಹೆಯನ್ನು ಮೀರಿತ್ತು. ಅಲ್ಲಿ ನನ್ನ ಮೃತ ತಾಯಿ, ತಂದೆ ಮತ್ತು ಸಹೋದರಿಯನ್ನು ನೋಡಿದೆ. ಅವರು ಅಲ್ಲಿ ಸುಮಾರು 30ರ ಆಸುಪಾಸಿನಂತೆ ಕಾಣುತ್ತಿದ್ದರು ಎಂದಿದ್ದಾಳೆ ಮಹಿಳೆ. ಈ ಸುಂದರ ಅನುಭವದ ಜತೆ ನರಕದ ದರ್ಶನವೂ ಆಗಿತ್ತು. ಸುತ್ತಲೂ ಕೊಳೆತ ವಾಸನೆ, ಕಿರುಚಾಟಗಳು ಕೇಳಿಬಂದಿತ್ತು ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಂದಹಾಗೆ ಈಕೆ 2023 ನವೆಮಬರ್ 28ರಂದು ನಿಧನರಾದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ