
ಭಾರತೀಯ ಮೂಲದ ನವ ವಧು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದರು. ಕಾರಣ ಮದುವೆ ಆರತಕ್ಷತೆಯಲ್ಲಿ ಲ್ಯಾಪ್‌ಟಾಪ್ ಹಿಡಿದು ಕಚೇರಿ ಕೆಲಸದಲ್ಲಿ ಮಗ್ನರಾಗಿದ್ದರು. ಇಷ್ಟೇ ಅಲ್ಲ ಮದುವೆ ಮುಗಿಸಿ ಹನಿಮೂನ್ ತೆರಳಿದರೂ ಪ್ರತಿ ದಿನ 3 ಗಂಟೆ ಕಚೇರಿ ಮೀಟಿಂಗ್‌ಗಾಗಿ ಸಮಯ ಮೀಸಲಿಟ್ಟಿದ್ದರು. ನವ ವಧುವಿನ ನಡೆಯನ್ನು ಹಲವರು ಪ್ರಶಂಸಿಸಿದ್ದರೆ, ಮತ್ತೆ ಕೆಲವರು ಭಾರಿ ಟೀಕಿಸಿದ್ದರು. ಮದುವೆ ಸೇರಿದಂತೆ ಅತ್ಯಮ್ಯೂಲ ಕ್ಷಣದಲ್ಲಿ ಕಚೇರಿ ಕೆಲಸ ಎಂದು ಲ್ಯಾಪ್‌ಟಾಪ್ ಹಿಡಿದು ಕುಳಿತುಕೊಳ್ಳುವುದಕ್ಕಿಂತೆ, ಇದೇ ಕೆಲಸವನ್ನು ಬೇರೆ ಯಾರಿಗಾದರೂ ಸೂಚಿಸಬಹುದಿತ್ತು. ಈ ಶೋಫ್ಆಫ್ ಬೇಕಿತ್ತಾ ಎಂದು ಪ್ರಶ್ನಿಸಿದ್ದರು. ಹಲವು ಟೀಕೆಗಳಿಗೆ ಇದೀಗ ವೈರಲ್ ವಧು ಪ್ರತಿಕ್ರಿಯಿಸಿದ್ದಾರೆ.
ಟೀಕೆಗಳು ಹೆಚ್ಚಾಗುತ್ತಿದ್ದಂತೆ ವೈರಲ್ ವಧು ತಿರುಗೇಟು ನೀಡಿದ್ದಾರೆ. ಒಮ್ಮೆ ಭಾರತೀಯ ಮದುವೆಯ ರೆಸೆಪ್ಶನ್‌ನಲ್ಲಿ ಸುದೀರ್ಘ ಸಮಯ ಕುಳಿತು ನೋಡಿ. ಆವಾಗ ನಿಮಗೆ ಹಿಂದೆಂದಿಗಿಂತಲೂ ಹೆಚ್ಚು ಕೆಲಸ (ಕೋಡಿಂಗ್) ಮಾಡಬೇಕು ಎನಿಸುತ್ತದೆ ಎಂದು ವಧು ಪ್ರತಿಕ್ರಿಯಿಸಿದ್ದಾರೆ. ವಧುವಿನ ಉತ್ತರಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.
ಹಲವು ಟೀಕೆಗಳಲ್ಲಿ ಹೇಳುವಂತೆ, ಕೆಲಸವನ್ನು ಬೇರೆ ಯಾರಿಗಾದರೂ ಸೂಚಿಸಬಹುದಿತ್ತು. ಆದರೆ ವಧು ತನ್ನ ಪ್ರಮುಖ ಘಳಿಗೆಯಲ್ಲಿ ಲ್ಯಾಪ್‌ಟಾಪ್ ಹಿಡಿದು ಕುಳಿತಿದ್ದೇಕೆ, ಕೆಲ ಹೊತ್ತಿನಲ್ಲಿ ಕಚೇರಿ ಸಂಬಂಧಿತ ತಾಂತ್ರಿಕ ಸಮಸ್ಯೆ ಬಗೆಹರಿಸಿದ್ದರೂ ಈ ಫೋಟೋ ಶೋಆಫ್ ಯಾಕೆ ಅನ್ನೋ ಪ್ರಶ್ನೆಯನ್ನು ಹಲವರು ಎತ್ತಿದ್ದರು. ಇದಕ್ಕೆ ಉತ್ತರವಿದೆ. ಈಕೆ ಗೌರಿ ಅಗರ್ವಾಲ್, ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕೋಯಲ್ ಎಐ ಅನ್ನೋ ಸ್ಟಾರ್ಟ್ ಕಂಪನಿಯ ಸಹ ಸಂಸ್ಥಾಪಕಿ. ಈಕೆಯ ಸಹೋದರ ಮೆಹುಲ್ ಅಗರ್ವಾಲ್ ಹಾಗೂ ಗೌರಿ ಅಗರ್ವಾಲ್ ಜೊತೆಯಾಗಿ ಆರಂಭಿಸಿದ ಕಂಪನಿ ಇದು. ಗೌರಿ ಅಗರ್ವಾಲ್ ಕಂಪನಿ ಸಿಟಿಒ ಆಗಿದ್ದರೆ, ಮೆಹುಲ್ ಅಗರ್ವಾಲ್ ಸಿಇಒ. ಕೆಲ ವರ್ಷಗಳಾಗಿರುವ ಈ ಕಂಪನಿ ಹಂತ ಹಂತವಾಗಿ ಬೆಳೆಯುತ್ತಿದೆ. ಮದುವೆ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ತಮ್ಮದೇ ಕಂಪನಿ, ಜೊತೆಗೆ ಕೆಲವೇ ನಿಮಿಷಗಳಲ್ಲಿ ಈ ಸಮಸ್ಯೆ ಬಗೆ ಹರಿಸಿವುದು ಗೌರಿ ಅಗರ್ವಾಲ್‌ಗೆ ತಿಳಿದಿತ್ತು. ಇದನ್ನು ಕಂಪನಿ ಇತರ ಸಿಬ್ಬಂದಿಗಳಿಗೆ ಸೂಚಿಸಿದರೆ ಕೆಲ ಹೊತ್ತು ತೆಗೆದುಕೊಳ್ಳುತ್ತಾರೆ. ಇಷ್ಟೇ ಅಲ್ಲ ನಿರಂತರವಾಗಿ ಸೂಚನೆಗಳನ್ನು ನೀಡುತ್ತಲೇ ಇರಬೇಕು. ತಮ್ಮದೇ ಕಂಪನಿಯಾಗಿರುವ ಕಾರಣ ಗೌರಿ ಅಗರ್ವಾಲ್ ಹೆಚ್ಚು ಮತುವರ್ಜಿ ವಹಿಸಿ ಕೆಲಸ ಮಾಡಿ ಮುಗಿಸಿದ್ದಾರೆ.
ವಧು ವರರು ಮದುವೆ ಮುಗಿಸಿ ಹನಿಮೂನ್ ತೆರಳಿದ್ದಾರೆ. ಆದರೆ ಹನಿಮೂನ್‌ನಲ್ಲಿ ಪ್ರತಿ ದಿನ ಮೂರು ಗಂಟೆ ಕಚೇರಿ ಸಿಬ್ಬಂದಿಗಳ ಜೊತೆ ಮೀಟಿಂಗ್ ಮಾಡುತ್ತಿದ್ದರು. ಮುಂದಿನ ಕೆಲಸ,ಪ್ರಾಜೆಕ್ಟ್, ತಾಂತ್ರಿಕ ಸವಾಲು ಸೇರಿದಂತೆ ಪ್ರತಿ ವಿಚಾರದ ಕುರಿತು ಸಲಹೆ ಸೂಚನೆ ನೀಡುತ್ತಿದ್ದರು. ಒಂದು ಕಂಪನಿ ಬೆಳೆಯುವ ಹಂತದಲ್ಲಿ ಮಾತ್ರವಲ್ಲ, ಬೆಳೆದ ಮೇಲೂ ಕೆಲಸ ಅಷ್ಟೇ ಇರುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ