ಬ್ರಿಟನ್ನಿನ ನೂತನ ರಾಜ 3ನೇ ಕಿಂಗ್‌ ಚಾರ್ಲ್ಸ್ ಪಟ್ಟಾಭಿಷೇಕ, ಬೈಡನ್ ಸೇರಿ ಗಣ್ಯರ ಅಭಿನಂದನೆ!

Published : May 06, 2023, 06:34 PM IST
ಬ್ರಿಟನ್ನಿನ ನೂತನ ರಾಜ 3ನೇ ಕಿಂಗ್‌ ಚಾರ್ಲ್ಸ್ ಪಟ್ಟಾಭಿಷೇಕ, ಬೈಡನ್ ಸೇರಿ ಗಣ್ಯರ ಅಭಿನಂದನೆ!

ಸಾರಾಂಶ

ಬ್ರಿಟನ್ ರಾಜನ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಕಿಂಗ್ ಚಾರ್ಲ್ಸ್ ನೂತನ ರಾಜನಾಗಿ ಕಿರೀಟ ತೊಟ್ಟಿದ್ದಾರೆ. ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾರದಿಂದ ಹಲವು ಗಣ್ಯರು ಪಾಲ್ಗೊಂಡಿದ್ದಾರೆ. 

ಬ್ರಿಟನ್(ಮೇ.06): ಬ್ರಿಟನ್‌ಗೆ 3ನೇ ಕಿಂಗ್ ಚಾರ್ಲ್ಸ್ ಅಧಿಕೃತವಾಗಿ ನೂತನ ರಾಜನಾಗಿದ್ದಾರೆ. ಇಂದು ನಡೆದ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಕಿಂಗ್ ಚಾರ್ಲ್ಸ್ ಬ್ರಿಟನ್ ರಾಜ ಕಿರೀಟ ತೊಟ್ಟಿದ್ದಾರೆ. ಕ್ವೀನ್ ಎಲಿಜಬೆತ್ ನಿಧನದ ಬಳಿಕ 2022ರ ಸೆಪ್ಟೆಂಬರ್‌ನಲ್ಲಿ ಚಾರ್ಲ್ಸ್ ನೂತನ ರಾಜನಾಗಿ ನೇಮಕಗೊಂಡಿದ್ದರು. ಇಂದು ಕಿಂಗ್ ಚಾರ್ಲ್ಸ್ ಪಟ್ಟಾಭಿಷೇಕ ನಡೆದಿದೆ. ಬ್ರಿಟನ್ ರಾಜನ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಪಾಲ್ಗೊಂಡಿದ್ದಾರೆ. ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಧ್ವಜಧಾರಿಯಾಗಿದ್ದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹಾಗೂ ಪತ್ನಿ ಅಕ್ಷತಾ ಮೂರ್ತಿ, ಇದು ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ.

ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ನಡೆದ ಐತಿಹಾಸಿಕ ಸಮಾರಂಭದಲ್ಲಿ ಕಿಂಗ್ ಚಾರ್ಲ್ಸ್‌ಗೆ ರಾಜ ಕಿರೀಟ ತೊಡಿಸಲಾಗಿದೆ. ಔಪಚಾರಿಕವಾಗಿ ಸೇಂಟ್ ಎಡ್ವರ್ಡ್ ಕಿರೀಟ ಪಡೆದು ರಾಜ ಚಾರ್ಲ್ಸ್‌ಗೆ ತೊಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಬ್ರಿಟನ್ ರಾಯಲ್ ಏರ್‌ಪೋರ್ಸ್ ಧ್ವಜ ಮೆರವಣಿಗೆ ನಡೆಸಿದೆ. ಈ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಬ್ರಿಟನ್‌ನ ಎಲ್ಲಾ ರಾಜಾಧಿಕಾರವನ್ನು ಕಿಂಗ್ ಚಾರ್ಲ್ಸ್‌ಗೆ ಹಸ್ತಾಂತರಿಸಲಾಗಿದೆ. ಕಿಂಗ್ ಚಾರ್ಲ್ಸ್ ಜೊತೆ ರಾಣಿ ಕ್ಯಾಮಿಲಾ ಪಟ್ಟಾಭಿಷೇಕವೂ ನಡದೆದಿದೆ. ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ಸಂಭ್ರಮದ ವಾತಾರವಣ ನಿರ್ಮಾಣವಾಗಿದೆ.

ಪ್ರಿನ್ಸ್‌ ಆಂಡ್ರ್ಯೂಗೆ ಭಾರತದ ಯೋಗಿಯಿಂದ ಥೆರಪಿ, ಬಿಲ್‌ ನೋಡಿ ದಂಗಾದ ಕಿಂಗ್‌ ಚಾರ್ಲ್ಸ್‌!

ಇದು ರಾಷ್ಟ್ರೀಯ ಹೆಮ್ಮೆಯ ಕ್ಷಣ. ಇದು ಬ್ರಿಟನ್ ಇತಿಹಾಸ, ಸಂಸ್ಕೃತಿ, ಸಂಪ್ರದಾಯಗಳ ಅಭಿವ್ಯಕ್ತಿಯಾಗಿದೆ. ನಮ್ಮ ದೇಶದ ಆಧುನಿಕತೆಯಲ್ಲಿ ಎದ್ದುಕಾಣುವ ಅತ್ಯಂತ ಮಹತ್ವದ ಕಾರ್ಯಕ್ರಮ ಎಂದು ರಿಷಿ ಸುನಕ್ ಹೇಳಿದ್ದಾರೆ. ಬ್ರಿಟನ್ ರಾಜನಾಘಿ ಅಧಿಕೃತವಾಗಿ ಪಟ್ಟಕ್ಕೇರಿದ ಕಿಂಗ್ ಚಾರ್ಲ್ಸ್‌ಗೆ ಅಮೇರಿಕ ಅಧ್ಯಕ್ಷ ಜೋ ಬೈಡನ್, ಉಕ್ರೇನ್ ಸೇರಿದಂತೆ ಹಲವು ದೇಶದ ಗಣ್ಯರು ಅಭಿನಂದನ ಸಲ್ಲಿಸಿದ್ದಾರೆ. 

ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಸೇರಿದಂತೆ ಹಲವು ಗಣ್ಯರು ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.   ಜಗದೀಪ್ ಧನ್ಕರ್ ಭಾರತ ಸರ್ಕಾರದ ಪ್ರತಿನಿಧಿಯಾಗಿ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.  ಈ ಸಮಾರಂಭದಲ್ಲಿ ಹಿಂದೂ ಧರ್ಮದ ಪ್ರತಿನಿಧಿಯಾಗಿ ನರೇಂದ್ರ ಬಾಬುಭಾಯ್‌ ಪಟೇಲ್‌ ಮತ್ತು ಸಿಖ್‌ ಸಮುದಾಯದ ಪರವಾಗಿ ಇಂದ್ರಜಿತ್‌ ಸಿಂಗ್‌ ಪಾಲ್ಗೊಂಡಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
ಪಾಕಿಸ್ತಾನ ಪುಸ್ತಕ ಮೇಳ: ಸೇಲ್ ಆದ ಪುಸ್ತಕ ಬರೀ 35, ಖಾಲಿಯಾದ ಬಿರಿಯಾನಿ, ಶವರ್ಮಾ ಎಷ್ಟು ಕೇಳಿದ್ರೆ ಗಾಬರಿ ಆಗ್ತೀರಿ